ಆಕಸ್ಮಿಕ ಬೆಂಕಿಗೆ ಬಣವಿಗಳು ಭಸ್ಮ

Team Udayavani, Apr 19, 2019, 1:27 PM IST

ಧಾರವಾಡ: ಆಕಸ್ಮಿಕ ಬೆಂಕಿ ಅವಘಡದಿಂದ ಮೇವು-ಹೊಟ್ಟು- ಕಟ್ಟಿಗೆ ಬಣವಿಗಳು ಬೆಂಕಿಗಾಹುತಿಯಾದ
ಘಟನೆ ತಾಲೂಕಿನ ಮನಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಧ್ಯಾಹ್ನ ವೇಳೆ ಬಣವಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಕ್ಕಪಕ್ಕದ ಬಣವಿಗಳಿಗೂ ಬೆಂಕಿ ಚಾಚಿಗೊಂಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.

ನಾಗನಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ನಿಂಗನಗೌಡ ಪಾಟೀಲ,
ಯಲ್ಲನಗೌಡ ಪಾಟೀಲ ಅವರ ಮಾಲಿಕತ್ವದ ಬಣವಿಗಳು ಭಸ್ಮಗೊಂಡಿವೆ. ಘಟನೆಯಲ್ಲಿ ಅಂದಾಜು 2ಲಕ್ಷ ಮೌಲ್ಯ ನಷ್ಟವಾಗಿದೆ. ಈ ಸುದ್ದಿ ತಿಳಿದು ತಹಶೀಲ್ದಾರ್‌ ಪ್ರಕಾಶ ಕುದರಿ, ಕಂದಾಯ ನಿರೀಕ್ಷಕ ಪಿ.ಎಂ.ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಅಶೋಕ ಮಾಡಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು


ಈ ವಿಭಾಗದಿಂದ ಇನ್ನಷ್ಟು

  • ಕುಂದಗೋಳ: ವೇತನ ಪಾವತಿ ವಿಳಂಬ ಖಂಡಿಸಿ ತಾಲೂಕಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ಗುತ್ತಿಗೆದಾರರು ಗುರುವಾರ ತಮ್ಮ ಸೇವೆ ಸ್ಥಗಿತಗೊಳಿಸಿ...

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

  • ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ...

  • ಕಲಘಟಗಿ: ಈಚೆಗೆ ಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತಾಲೂಕಿನ ಸುಮಾರು 800 ಜನ ನಿರುದ್ಯೋಗಿ ವಿದ್ಯಾವಂತರು ಉದ್ಯೋಗಕ್ಕೆ ಭಾಜನ ರಾಗಿದ್ದಾರೆ. ಅದೇ ರೀತಿ ತಾಲೂಕಿನ...

  • ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕಿಶನ್‌ಗಡ ಹಾಗೂ ಶಿರಡಿಗೆ ವಿಮಾನಯಾನ ಸೇವೆ ಆರಂಭಿಸಬೇಕೆಂದು ಕೋರಿ ಆಲ್‌ ಇಂಡಿಯಾ ಜೈನ್‌ ಯುತ್‌ ಫೆಡರೇಶನ್‌ ವತಿಯಿಂದ ಸಂಸದೀಯ...

ಹೊಸ ಸೇರ್ಪಡೆ