ಹುಬ್ಬಳ್ಳಿ ಪಾಲಿಕೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಮಾನಸಿಕ ಅಸ್ವಿಸ್ಥ
Team Udayavani, May 26, 2022, 3:56 PM IST
ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮೇಲೆ ಹಾಗೂ ಆವರಣ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಕಲ್ಲುತೂರಾಟ ನಡೆಸಿ ಕಚೇರಿಯ ಕಿಟಕಿಯ ಗಾಜು ಹಾಗೂ ವಾಹನಗಳ ಗಾಜುಗಳಿಗೆ ಹಾನಿಪಡಿಸಿದ್ದಾನೆ.
ಗಣೇಶ ಪೇಟೆ ನಿವಾಸಿ ಮೊಹಮದ್ ಹನೀಫ ಖೈರಾತಿ ಎಂಬಾತ ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆ ಕಚೇರಿಗೆ ಬಂದವನೇ ಕಲ್ಲುಗಳಿಂದ ಕಚೇರಿಯ ಕಿಟಕಿ ಹಾಗೂ ಎರಡು ಕಾರು, ಒಂದು ಟಿಪ್ಪರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ತಡೆಡಿದ್ದಾರೆ.
ಇದನ್ನೂ ಓದಿ:ಬನಶಂಕರಿ: ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
ಉಪನಗರ ಪೊಲೀಸರು ಆಗಮಿಸಿ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಮೊಹ್ಮದನು ಪಾಲಿಕೆ ಆಯುಕ್ತರನ್ನು ಅವಾಚ್ಯವಾಗಿ ನಿಂದಿಸುತ್ತ, ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಮೂರು ವಾಹನಗಳ ಗ್ಲಾಸ್ ಸಂಪೂರ್ಣ ಹಾನಿಯಾಗಿವೆ.
ಈತನ ಈ ದುಂಡಾ ವರ್ತನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪನಗರ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಅವಶ್ಯಕತೆ ಇಲ್ಲದ ಜಾಗೆಯಲ್ಲಿ ಶೌಚಾಲಯ
ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
MUST WATCH
ಹೊಸ ಸೇರ್ಪಡೆ
ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು