ಎಸ್‌ಡಿಎಂಸಿ ಖಾತೆ ಬಡ್ಡಿ ಹಣ ಪಡೆವ ಪ್ರಕ್ರಿಯೆ ನಿಲ್ಲಿಸಿ
ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ
Team Udayavani, May 31, 2019, 1:37 PM IST
ಹುಬ್ಬಳ್ಳಿ: ಕಲಘಟಗಿ ತಾಲೂಕು ಭೋಗೆನಾಗರಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆೆಯಲ್ಲಿ 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವದಂದು ಶಾಲಾ ದಾಖಲಾತಿ-ಹಾಜರಾತಿ ಆಂದೋಲನ ನಡೆಸಲಾಯಿತು.
ಹುಬ್ಬಳ್ಳಿ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಸ್‌ಡಿಎಂಸಿ ಖಾತೆಯಲ್ಲಿ ಜಮೆ ಇರುವ ಬಡ್ಡಿ ಹಣ ಪಡೆಯುವ ಪ್ರಕ್ರಿಯೆ ಕೂಡಲೇ ಹಿಂಪಡೆಯಬೇಕು ಹಾಗೂ ಈಗಾಗಲೇ ಪಡೆದಿರುವ ಶಾಲೆಗಳಿಗೆ ಅವರ ಮೊತ್ತವನ್ನು ಹಿಂದಿರುಗಿಸಲು ಆದೇಶಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸರಕಾರದ ಅನುದಾನದ ಕೊರತೆಯಿಂದ ನೀರು, ವಿದ್ಯುತ್, ದೂರವಾಣಿ, ನಿಪುಣ ಕೆಲಸದಾಳುಗಳಿಗೆ ಹಾಗೂ ಇತ್ಯಾದಿ ಕೆಲಸ ಕಾರ್ಯಗಳಿಗೆ ಶಾಲೆಯ ಎಸ್‌ಡಿಎಂಸಿ ಖಾತೆಯಿಂದ ಬರುವ ಬಡ್ಡಿ ಹಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಇಂತಹ ಬಡ್ಡಿ ಹಣವೂ ಸಹ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮೊತ್ತವನ್ನಾಧರಿಸಿ 200ದಿಂದ 1000 ರೂ. ವರೆಗೆ ಇರುತ್ತದೆ. ಇಂತಹ ಕನಿಷ್ಠ ಮೊತ್ತವನ್ನು ಸರಕಾರವು ಯಾವ ಉದ್ದೇಶಕ್ಕೆ ಪಡೆಯುತ್ತಿದೆ ಎಂಬುದು ತಿಳಿದಿಲ್ಲ. ಅಲ್ಲದೇ ಈ ಮೊತ್ತ ಪಡೆದಲ್ಲಿ ಎಲ್ಲ ಶಾಲೆಗಳ ನಿರ್ವಹಣೆಗಾಗಿ ಸಾಕಷ್ಟು ಸಾದಿಲ್ವಾರು ಮೊತ್ತ ಬಿಡುಗಡೆ ಮಾಡಬೇಕಾಗುತ್ತದೆ.
ಸರಕಾರದ ಶಿಕ್ಷಣ ಸಂಸ್ಥೆಗಳು ಹೀನಾಯ ಸ್ಥಿತಿಯಲ್ಲಿರುವುದು ಇನ್ನು ಅರ್ಥವಾಗಿಲ್ಲವೆಂದರೆ ಹೇಗೆ? ಎಷ್ಟೋ ಶಾಲೆಗಳಲ್ಲಿ ಮಕ್ಕಳಿಂದ ಕಸ ಗುಡಿಸುವುದು, ಗಂಟೆ ಬಾರಿಸುವುದು ಮತ್ತು ಬಾಗಿಲ ಕೀಲಿ ಹಾಕಿಸುವುದು ಮುಂತಾದ ಕೆಲಸಗಳನ್ನು ಅನಿವಾರ್ಯವಾಗಿ ಮಾಡಲಾಗುತ್ತಿತ್ತು. ಮಾಧ್ಯಮದಲ್ಲಿ ಬರುತ್ತಿದ್ದ ಈ ಅನಿಷ್ಟ ಪದ್ಧತಿ ತಪ್ಪಿಸಲು ಎಸ್‌ಡಿಎಂಸಿಯಲ್ಲಿ ಜಮಾ ಇರುವ ಬಡ್ಡಿಯನ್ನು ಈ ರೀತಿ ಹಿಂದೆ ಪಡೆದರೆ ಹೇಗೆ? ಸರಕಾರದಲ್ಲಿ ಕೋಟಿ ಕೋಟಿ ಹಣ ವಿನಾಕಾರಣ ಪೋಲಾಗುವುದನ್ನು ಮೊದಲು ನಿಲ್ಲಿಸಿ. ಈಗ ಎಸ್‌ಡಿಎಂಸಿ ಖಾತೆಯಲ್ಲಿ ಜಮೆ ಇರುವ ಬಡ್ಡಿ ಮೊತ್ತವನ್ನು ಬಿಇಒ ಮತ್ತು ಇಆರ್‌ಸಿಒ ಜಂಟಿ ಖಾತೆಗೆ ಜಮಾ ಮಾಡುವಂತೆ ಉಪನಿರ್ದೇಶಕರು ಆದೇಶ ಹೊರಡಿಸಿರುವುದನ್ನು ಕೂಡಲೇ ಹಿಂಪಡೆಯಬೇಕೆಂದು ಹೊರಟ್ಟಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ
ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ
ಈತ ಒಬ್ಬ ವಿಶಿಷ್ಟ ಕಳ್ಳ..ಕದ್ದ ಮೇಲೆ “ಐ ಲವ್ ಯೂ’ ಎಂದ!