ಬಸಣ್ಣ ವಿಶೇಷ ಕಾಳಜಿ ತೋರಣ್ಣ

ವಿಶೇಷ ಪ್ಯಾಕೇಜ್‌, ಬಂಪರ್‌ ಕೊಡುಗೆ ನಿರೀಕ್ಷೆ | ಇನ್ನಾದರೂ ಬೆಂಗಳೂರಿನಂತಾಗುವುದೇ ಹು-ಧಾ? 

Team Udayavani, Jul 29, 2021, 1:19 PM IST

fgdfgrr

ವರದಿ: ಡಾ| ಬಸವರಾಜ ಹೊಂಗಲ್‌

ಧಾರವಾಡ: ಅಂತೂ ಇಂತೂ ಕುಂತಿ ಮಕ್ಕಳಿಗೆ ಸಿಕ್ಕಿದ್ದೇನು? ಉಪವಾಸ-ವನವಾಸ ಎಂಬಂತೆ ಯಾರೇ ಮುಖ್ಯಮಂತ್ರಿಯಾದರೂ ಅಷ್ಟೇ ಏಕೆ ಸ್ವತಃ ಧಾರವಾಡ ಜಿಲ್ಲೆಯವರೇ ಮುಖ್ಯಮಂತ್ರಿಗಳಾದರೂ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಧಾರವಾಡ ಜಿಲ್ಲೆಗೆ ಒಂದೇ ಒಂದು ಬಾರಿಯೂ ವಿಶೇಷ ಪ್ಯಾಕೇಜ್‌ ಅಥವಾ ಬಂಪರ್‌ ಕೊಡುಗೆ ನೀಡಿದ್ದು ಇತಿಹಾಸದಲ್ಲಿಯೇ ಇಲ್ಲ.

ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ, ಕುಮಾರಸ್ವಾಮಿ ರಾಮನಗರಕ್ಕೆ, ಬಿ.ಎಸ್‌. ಯಡಿಯೂರಪ್ಪ ಶಿವಮೊಗ್ಗಕ್ಕೆ, ಸಿದ್ದರಾಮಯ್ಯ ಮೈಸೂರು ಜಿಲ್ಲೆಗೆ ತಾವು ಮುಖ್ಯಮಂತ್ರಿಗಳಾಗಿದ್ದಾಗ ಸದ್ದಿಲ್ಲದೇ ಅನುದಾನ ನೀಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಸೇರ್ಪಡೆಯಾಗುತ್ತಾರೆಯೇ? ಎಂದು ಕಾಯುತ್ತಿದ್ದಾರೆ ಧಾರವಾಡ ಜಿಲ್ಲೆಯ ಜನ. ಹೀಗಾಗಿ ಇದೀಗ ಸ್ವತಃ ಹುಬ್ಬಳ್ಳಿಯ ಹುಡುಗ ಬಿಜೆಪಿ ವರಿಷ್ಠರ ಮನಗೆದ್ದ ವಾಮನಮೂರ್ತಿ ಬಸವರಾಜ ಬೊಮ್ಮಾಯಿ ಅವರೇ ನಾಡಿನ ದೊರೆಯಾಗಿದ್ದು, ತಾವು ಹುಟ್ಟಿ ಬೆಳೆದು ದೊಡ್ಡವರಾಗಿರುವ ಮತ್ತು ಹೋರಾಟ ಮಾಡುತ್ತಲೇ ಬೆಳೆದ ಹುಬ್ಬಳ್ಳಿ ಮತ್ತು ಒಟ್ಟಾರೆ ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಾರೆನ್ನುವ ನಿರೀಕ್ಷೆ ಸಹಜವಾಗಿಯೇ ಈ ಜಿಲ್ಲೆಯ ಜನರಲ್ಲಿ ಮೂಡಿದೆ.

ಸ್ಮಾರ್ಟ್‌ ಆಗಬೇಕಿದೆ ಅವಳಿ ನಗರ:

ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಅತೀ ಹೆಚ್ಚು ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ಎರಡನೇ ಸ್ಥಾನದಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಈಗಲೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಪ್ರತಿಬಾರಿಯೂ ಮಳೆಗಾಲದಲ್ಲಿ ಇಲ್ಲಿನ ಎಲ್ಲಾ ರಸ್ತೆಗಳು ಕೆಟ್ಟು ಹೋಗಿ ಅವಾಂತರ ಸೃಷ್ಟಿಯಾಗುತ್ತಲೇ ಇದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ಇಕ್ಕೆಲ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ. ಹೀಗಾಗಿ ಎರಡನೇ ಅತೀ ದೊಡ್ಡ ನಗರಕ್ಕೆ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ ನೀಡಲು ನೂತನ ಮುಖ್ಯಮಂತ್ರಿಗಳು ಒತ್ತು ನೀಡುವರೆನ್ನುವ ಆಶಾಭಾವ ಅವಳಿ ನಗರದ ಜನರಲ್ಲಿ ಮೂಡಿದೆ.

ಬೆಣ್ಣೆಹಳ್ಳದ ನೀರು ಬಳಕೆ:

ಡಾ| ಎಂ.ಪರಮಶಿವಯ್ಯ ಅವರು ನೀಡಿದ ವರದಿ ಅನ್ವಯ ಬೆಣ್ಣೆಹಳ್ಳದಲ್ಲಿ 22 ಟಿಎಂಸಿ ಅಡಿ ನೀರು ಪ್ರತಿವರ್ಷ ಪೋಲಾಗಿ ಹೋಗುತ್ತಿದೆ. ಇದನ್ನು ಜಿಲ್ಲೆಯ ಕೃಷಿಗೆ ಪೂರಕವಾಗಿ ಬಳಸಿಕೊಳ್ಳುವ ದೊಡ್ಡ ಯೋಜನೆ ಸಿದ್ಧವಾದರೆ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗುತ್ತದೆ. ಅಷ್ಟೇಯಲ್ಲ, ಬೆಣ್ಣೆಹಳ್ಳದ ನೀರಿನ ಬಳಕೆ ಕುರಿತು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಅಧ್ಯಯನ ನಡೆಸಿದ್ದು, ಈ ಹಿಂದಿನ ಸರ್ಕಾರಗಳ ಗಮನ ಸೆಳೆಯುತ್ತಲೇ ಬಂದಿದ್ದಾರೆ.

ಪ್ರವಾಹ ಸೃಷ್ಟಿಸುವ 23 ಹಳ್ಳಗಳು:

ಬೇಡ್ತಿ, ತುಪರಿ, ಬಡಗಿ, ಜಾತಕ್ಯಾ ಸೇರಿದಂತೆ ಜಿಲ್ಲೆಯಲ್ಲಿ 23 ಹಳ್ಳಗಳು ಪ್ರತಿವರ್ಷ ಮಳೆಗಾಲದಲ್ಲಿ ಕಿರು ಪ್ರವಾಹ ಸೃಷ್ಟಿಸುವಷ್ಟು ದೈತ್ಯವಾಗಿ ಹರಿಯುತ್ತಿವೆ. ಆದರೆ ಆ ನೀರಿನ ಸದುಪಯೋಗ ಮಾತ್ರ ಆಗುತ್ತಲೇ ಇಲ್ಲ. ಒಂದು ವೇಳೆ ಈ ನೀರನ್ನು ಸ್ಥಳೀಯವಾಗಿ ಬಳಸಿಕೊಂಡು ಕಿರು ನೀರಾವರಿಗೆ ಚಾಲನೆ ನೀಡಿದರೆ ಧಾರವಾಡ ಜಿಲ್ಲೆಯ ಶೇ.30 ಕೃಷಿ ಭೂಮಿ ನೀರಾವರಿಯಾಗಲಿದೆ. ಈಗಾಗಲೇ ಪಕ್ಕದ ಶಿಗ್ಗಾವಿ ಕ್ಷೇತ್ರದಲ್ಲಿಯೇ ಹನಿ ಮತ್ತು ಕೆರೆ ನೀರಾವರಿ ಪ್ರಯೋಗ ಮಾಡಿ ಯಶಸ್ವಿಯಾಗಿರುವ ಬೊಮ್ಮಾಯಿ ಅವರು ಧಾರವಾಡ ಜಿಲ್ಲೆಗೂ ಇದನ್ನು ಜಾರಿಗೊಳಿಸಲು ಅನುಕೂಲ ಮಾಡಿಕೊಡುವರು ಎನ್ನುವ ಭರವಸೆ ಜಿಲ್ಲೆಯ ರೈತರಲ್ಲಿದೆ.

ಹು-ಧಾ ಅವಳಿ ನಗರದ ಪೂರ್ವ ಬೈಪಾಸ್‌:

ಹುಬ್ಬಳ್ಳಿ-ಧಾರವಾಡ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ನಗರ ಮಧ್ಯದ ರಸ್ತೆಗಳ ಮೇಲೆ ವಾಹನಗಳ ದಟ್ಟನೆ ಹೆಚ್ಚುತ್ತಲೇ ಸಾಗಿದೆ. ಇದನ್ನು ಕಡಿಮೆ ಮಾಡಲು ಈಗಾಗಲೇ ಪಶ್ಚಿಮ ಭಾಗಕ್ಕೆ ಬೈಪಾಸ್‌ ನಿರ್ಮಿಸಲಾಗಿದೆ. ಆದರೆ ಪೂರ್ವ ಭಾಗಕ್ಕೂ ಇಂತಹದೇ ಒಂದು ಬೈಪಾಸ್‌ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳದ್ದು, ಈಗಾಗಲೇ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿ ಕಾರವಾರ, ಗದಗ, ಬಾಗಲಕೋಟೆ ಹೆದ್ದಾರಿಗಳನ್ನು ಸಂಪರ್ಕಿಸುವ ಕಿರುಬೈಪಾಸ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅದರ ಮುಂದುವರಿದ ಭಾಗವಾಗಿ ಅವಳಿ ನಗರದ ಪೂರ್ವಕ್ಕೆ ನರೇಂದ್ರದವರೆಗೂ ಚತುಷ್ಪಥ ಅಥವಾ ಷಟ³ಥ ರಸ್ತೆ ನಿರ್ಮಾಣವಾಗಬೇಕಿದೆ.

ಕೈಗಾರಿಕಾ ಕಾರಿಡಾರ್‌:

ಇನ್ನು ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್‌(ಬಿಎಂಐಸಿ ) ಧಾರವಾಡ ಜಿಲ್ಲೆಗೆ ದೊಡ್ಡ ವರದಾನವಾಗಿದ್ದರೂ ಸರ್ಕಾರಗಳ ನಿಷ್ಕಾಳಜಿಯಿಂದ ಆಗುತ್ತಲೇ ಇಲ್ಲ. ಒಂದು ವೇಳೆ ಈ ಯೋಜನೆ ಅನ್ವಯ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆಗಳಿಗೆ ಅವಕಾಶ ಮಾಡಿ ಕೊಟ್ಟರೆ ಖಂಡಿತಾ ಇಲ್ಲಿ ಉದ್ಯೋಗ ಸೃಷ್ಠಿಯಾಗಿ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಈಗಾಗಲೇ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು, ಜಿಲ್ಲೆಗೆ ಕೈಗಾರಿಕೆಗಳನ್ನು ತರಲು ಪ್ರಯತ್ನ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೈಗಾರಿಕಾ ಪಾರ್ಕ್‌ಗಳ ವೃದ್ಧಿ, ಅಲ್ಲಿಗೆ ಬೇರೆ ಕಂಪನಿಗಳನ್ನು ಆಹ್ವಾನಿಸುವುದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಐಟಿಬಿಟಿ ಉದ್ಯಮಗಳ ವೃದ್ಧಿ, ಕೃಷಿ ಉತ್ಪನ್ನಗಳ ರಫ್ತಿಗೆ ಒತ್ತು, ಆಲೊನ್ಸೋ ಮಾವು ಮೌಲ್ಯವರ್ಧನೆಗೆ ಒತ್ತು ಲಭಿಸಬೇಕಿದೆ. ಇದೆಲ್ಲದಕ್ಕೂ ಮೂಲ ಕಾರಣ ಸರ್ಕಾರದ ಇಚ್ಛಾಶಕ್ತಿ ಮತ್ತು ಅನುದಾನ. ಇದನ್ನು ನೂತನ ಸಿಎಂ ಬೊಮ್ಮಾಯಿ ನೀಡುತ್ತಾರೆ ಎನ್ನುವ ಆಶಯ ಜಿಲ್ಲೆಯ ಕೈಗಾರಿಕೋದ್ಯಮಿ ಗಳದ್ದಾಗಿದೆ.

ಬರುವವೇ ದೊಡ್ಡ ಕಂಪನಿಗಳು?:

ಹೀರೋ ಹೋಂಡಾ, ನ್ಯಾನೋದಂತಹದ ದೊಡ್ಡ ಕೈಗಾರಿಕೆಗಳು ಬಂದರೆ ಅದರ ಛತ್ರದಡಿ 50-100 ಉಪ ಉತ್ಪನ್ನಗಳ ತಯಾರಿಸುವ ಸಣ್ಣ ಉದ್ಯಮಗಳು ಬೆಳೆದು ನಿಲ್ಲುತ್ತವೆ. ಹೀಗಾಗಿ ಬೆಂಗಳೂರನ್ನು ಹೊರತು ಪಡಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಬೇಕಿದೆ. ಬಿಜೆಪಿ ಸರ್ಕಾರ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತಲೇ ಬಂದಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ಹೆಚ್ಚಿನ ಅನುದಾನ ಲಭಿಸಬೇಕಿದೆ.  

ಅಸಮತೋಲನ ನಿವಾರಣೆಗೆ ಒತ್ತು ನೀಡುವರೇ? 

ಮುಖ್ಯಮಂತ್ರಿಯಾದ ಮರುಕ್ಷಣವೇ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಘೋಷಣೆ ಮಾಡಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಆದರೆ ಅವರಿಗೆ ಇರುವ ಕೇವಲ ಎರಡು ವರ್ಷಗಳ ಅವಧಿ ಮತ್ತು ಹಣಕಾಸಿನ ಸಂಕಷ್ಟದ ಸಂದರ್ಭದಲ್ಲಿ ಹೇಗೆ ಇದನ್ನು ನಿಭಾಯಿಸುತ್ತಾರೆ ಎನ್ನುವುದೇ ದೊಡ್ಡ ಸವಾಲು ಕೂಡ. ಏನೇ ಆದರೂ ಹೈಕಮಾಂಡ್‌ ಮನಗೆದ್ದಂತೆಯೇ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ ತವರು ಜಿಲ್ಲೆ ಧಾರವಾಡ ಜನರ ಮನ ಕೂಡ ಬೊಮ್ಮಾಯಿ ಅವರು ಗೆಲ್ಲುತ್ತಾರೆಯೇ? ಕಾದು ನೋಡಬೇಕು.

ಬರಬೇಕಿದೆ ಇನ್ನಷ್ಟು ಯೋಜನೆಗಳು  

ಬಿಎಸ್‌ವೈ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿನ ಅನೇಕ ಯೋಜನೆಗಳ ಕಾರ್ಯ ಚುರುಕು ಪಡೆದಿರುವುದಂತೂ ಸತ್ಯ. ಕೃಷಿ-ಕೈಗಾರಿಕಾ ಚಟುವಟಿಕೆಗಳು ಗರಿಗೆದರಿದ್ದು, ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಮತ್ತು ಹಣಕಾಸು ವಹಿವಾಟು ಮಾಡಿಕೊಡುವ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನ. ಕೇಂದ್ರ ಪ್ರಾಯೋಜಿತ ಅನೇಕ ಯೋಜನೆಗಳಿಗೆ ನೂತನ ಮುಖ್ಯಮಂತ್ರಿಗಳಿಂದ ಇನ್ನಷ್ಟು ಅನುದಾನ ಸಿಕ್ಕರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎನ್ನುತ್ತಿದ್ದಾರೆ ಮುಖಂಡರು.

ಸದ್ಯದ ತುರ್ತು ಅಗತ್ಯಗಳು 

ಮನೆ-ಮನೆಗೆ ಮಲಪ್ರಭಾ ನದಿ ನೀರು ಹರಿಸುವ 1500 ಕೋಟಿ ರೂ.ಗಳ ಯೋಜನೆ ಇನ್ನು ಜಾರಿಯಾಗಬೇಕಿದ್ದು, ಹಣಕಾಸು ನೆರವು ಅಗತ್ಯ. ­

ಕಡತದಲ್ಲಿಯೇ ಉಳಿದಿವೆ ಹಾರೋ ಬೆಳವಡಿ ಸಮೀಪ ಸಾವಿರ ಎಕರೆಯಲ್ಲಿ ಕೆರೆ ನಿರ್ಮಾಣ, ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ 11ಕ್ಕೂ ಹೆಚ್ಚು ಯೋಜನೆಗಳು

­ನೆರೆಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಅಂದಾಜು 1500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಾನಿಯನ್ನು ಅಂದಾಜು ಮಾಡಲಾಗಿತ್ತು. ಆದರೆ ಈವರೆಗೆ ಬಂದಿರುವುದು ಬರೀ 58 ಕೋಟಿ ರೂ.ಗಳು ಮಾತ್ರ. ನೂತನ ಸಿಎಂ ಬಾಕಿ ಹಣ ಕೊಡಿಸುವರೆ ?

­ರೈತರ ಖಾತೆಗೆ ನೆರೆಹಾನಿ ಪರಿಹಾರ ಮಾತ್ರ ಸರಿಯಾಗಿ ಲಭಿಸಿದ್ದು, ಇನ್ನುಳಿದಂತೆ ಮನೆ ಪರಿಹಾರದಲ್ಲಿ ಉಂಟಾಗಿರುವ ತಾರತಮ್ಯ, ಗೊಂದಲ- ಅವ್ಯವಹಾರಗಳೇ ಹೆಚ್ಚು ಪ್ರಧಾನವಾಗಿ ಗೋಚರಿಸುತ್ತಿದ್ದು, ಈ ಕುರಿತು ಜಿಲ್ಲೆಗೆ ತೃಪ್ತಿದಾಯಕವಾಗಿಲ್ಲ.

­ಮಳೆಹಾನಿಯಿಂದ ಉಂಟಾದ ಸೇತುವೆಗಳ ನಿರ್ಮಾಣ, ರಸ್ತೆ ನಿರ್ಮಾಣಕ್ಕಾಗಿಯೇ ಅಂದಾಜು 500 ಕೋಟಿ ರೂ.ಗಳಿಗೂ ಅಧಿಕ ಹಣ ಬೇಕೆಂದು ಜಿಲ್ಲಾಡಳಿತ ಅಂದಾಜು ಮಾಡಿತ್ತು. ಆದರೆ ಸದ್ಯಕ್ಕೆ ಜಿಲ್ಲೆಯ ಯಾವ ರಸ್ತೆಯನ್ನು ಪರಿಪೂರ್ಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿಲ್ಲ, ಬದಲಿಗೆ ಎಲ್ಲದಕ್ಕೂ ತೇಪೆ ಹಾಕಲಾಗಿದೆ ಅಷ್ಟೆ. ­

ಇನ್ನು ಮನೆಗಳಿಗೆ 5 ಲಕ್ಷ ರೂ.ಗಳಿಗೆ ಬದಲು ಬರೀ 2 ಲಕ್ಷ ರೂ.ಮಾತ್ರ ಬರಿಹಾರ ಬಂದಿದೆ. ­

ಹುಲಿಕೇರಿ ಸೇರಿದಂತೆ 250 ಕೆರೆಗಳ ತೋಬುಗಳು ಒಡೆದು ಹೋಗಿದ್ದು ಅವುಗಳ ದುರಸ್ತಿಗೆ ಹಣ ಲಭಿಸಬೇಕಿದೆ. ­

ಸಾಂಸ್ಕೃತಿಕ ಪರಂಪರೆ ಮುನ್ನಡೆಸುವ ಟ್ರಸ್ಟ್‌ಗಳಿಗೆ ಒತ್ತು ಸಿಗಬೇಕಿದೆ. ­

ಓದಲು ಬರುವ ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಧಾರವಾಡದಲ್ಲಿ ಬೃಹತ್‌ ವಸತಿ ಸಮುಚ್ಚಯಗಳ ನಿರ್ಮಾಣವಾಗಬೇಕಿದೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.