ನೀರಾವರಿಗಾಗಿ ಸಂಘ ಬಲಪಡಿಸಿ

Team Udayavani, Jul 22, 2019, 9:47 AM IST

ಹುಬ್ಬಳ್ಳಿ: ರೈತರು, ಅಧಿಕಾರಿಗಳು, ಸಂಘ-ಸಂಸ್ಥೆಗಳವರು ಶ್ರಮದಾನ ಮೂಲಕ ಕಾಲುವೆಗಳಲ್ಲಿನ ಹೂಳು, ಕಸ-ಕಡ್ಡಿ ಸ್ವಚ್ಛಗೊಳಿಸಿದರು.

ಹುಬ್ಬಳ್ಳಿ: ಸಮರ್ಪಕ ನೀರಾವರಿಗಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲಪಡಿಸುವುದು ಅವಶ್ಯ ವಿದೆ ಎಂದು ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.

ನರಗುಂದ ಚಳವಳಿಯ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆ, ಮಲಪ್ರಭಾ ಬಲದಂಡೆ ಕಾಲುವೆಯ ನರಗುಂದ ವಿಭಾಗ ಮತ್ತು ಮಲಪ್ರಭಾ ಸಹಕಾರ ಸಂಘಗಳ ಮಹಾಮಂಡಳ ಹಾಗೂ ವೀರಪ್ಪ ಕಡ್ಲೇಕೊಪ್ಪ ಹುತಾತ್ಮ ಸ್ಮಾರಕ ಸಮಿತಿ ಆಶ್ರಯದಲ್ಲಿ ಚಿಕ್ಕನರಗುಂದಲ್ಲಿ ರವಿವಾರ ಹಮ್ಮಿಕೊಂಡಿದ್ದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಅಭಿಯಾನ ಹಾಗೂ ಕಾಲುವೆಗಳ ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರು ಬಳಕೆದಾರ ಸಹಕಾರ ಸಂಘಗಳು ಹಾಗೂ ನೀರಾವರಿ ಇಲಾಖೆ ಕೈಜೋಡಿಸಿ ಕೆಲಸ ಮಾಡಿದರೆ ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಒಂದು ವರದಾನವಾಗುವುದು ಎಂದರು.

ಮಲಪ್ರಭಾ ಯೋಜನೆ ಅಧೀಕ್ಷಕ ಅಭಿಯಂತರ ರಾಜೇಶ ಮಾತನಾಡಿ, ನೀರಾವರಿ ಜಾಲ ಸುಸ್ಥಿತಿಯಲ್ಲಿಡಲು ನೀರಾವರಿ ಅಧಿಕಾರಿಗಳೊಂದಿಗೆ ಸಂಘಗಳು ಜತೆಗೂಡಿ ಕೆಲಸ ಮಾಡಬೇಕು ಎಂದರು.

ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಬಿ.ವೈ. ಕಾಡಪ್ಪನವರ ಮಾತನಾಡಿ, ಜನ ಸಮುದಾಯಗಳಿಗೆ ಸಂಕಷ್ಟ ಬಂದಾಗ ಚಳವಳಿ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಿದ ಇತಿಹಾಸ ನರಗುಂದ ರೈತ ಚಳವಳಿಗಿದೆ. ಪ್ರಸ್ತುತ ಜಲ ಸಂಕಷ್ಟದ ಸಂದರ್ಭದಲ್ಲಿ ರೈತ ಸಂಘಟನೆಗಳು ನೀರಾವರಿ ಇಲಾಖೆಯೊಂದಿಗೆ ಕೈಜೋಡಿಸಿ ಹೊಸ ಮಾದರಿಗಳನ್ನು ನಿರ್ಮಿಸಬಲ್ಲವು ಎಂದರು.

ಮುಂಬರುವ ದಿನಗಳಲಿ ಪ್ರತಿ 15 ದಿನಗಳಿಗೊಮ್ಮೆ ತಮ್ಮ ಗ್ರಾಮದ ಕಾಲುವೆಗಳನ್ನು ಸ್ವಚ್ಛಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿಜ್ಞೆ ಮಾಡಿದರು.

ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಮಾಜಿ ಅಧ್ಯಕ್ಷ ಸದುಗೌಡ ಪಾಟೀಲ, ಖುದ್ದಣ್ಣನವರ, ಶೇಖಪ್ಪ ತಿರ್ಲಾಪುರ, ಜಿ.ಆರ್‌. ತಿಮ್ಮಾರೆಡ್ಡಿ, ಎಚ್.ಎನ್‌. ಹಳಕಟ್ಟಿ, ಶಂಕ್ರಣ್ಣ ಯರಗಟ್ಟಿ, ಬಿ.ಎಂ. ರಾಯರೆಡ್ಡಿ, ನರಗುಂದ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಎಸ್‌.ಎಲ್. ಪಾಟೀಲ, ಮೋನಿ ಪಾಟೀಲ ಹಾಗೂ ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಉಪಾಧ್ಯಕ್ಷರು, ನಿರ್ದೇಶಕರು, ಹಾಳಕುಸುಗಲ್, ಅಳಗವಾಡಿ, ಚಿಕ್ಕನರಗುಂದ ಮತ್ತು ಸುತ್ತಮುತ್ತಲಿನ ಗ್ರಾಮದ ನೀರು ಬಳಕೆದಾರರು ಪಾಲ್ಗೊಂಡಿದ್ದರು.

ಮಲಪ್ರಭಾ ಬಲದಂಡೆ ಕಾಲುವೆ ನರಗುಂದ ಉಪಕಾಲುವೆ 23ನೇ ಹಂಚುಕಾಲುವೆ 2ಆರ್‌ ಕಾಲುವೆ ಅಡಿಯಲ್ಲಿ ಬರುವ ಕಾಲುವೆಗಳನ್ನು ಸ್ವಚ್ಛಗೊಳಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೀರಾವರಿ ಇಲಾಖೆ ಮತ್ತು ವಾಲ್ಮಿ ಸಂಸ್ಥೆ ಅಧಿಕಾರಿಗಳು ಕಾಲುವೆಯಲ್ಲಿ ತುಂಬಿದ್ದ ಹೂಳು, ಕಸಕಡ್ಡಿ, ಕಂಟಿಗಳನ್ನು ತೆರವುಗೊಳಿಸಿ ಕಾಲುವೆ ಸ್ವಚ್ಛಗೊಳಿಸಿದರು.

ವಾಲ್ಮಿಯ ಸಹಾಯಕ ಅಭಿಯಂತ ಮಹದೇವಗೌಡ ಹುತ್ತನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸಹ ಪ್ರಾಧ್ಯಾಪಕ ಕೃಷ್ಣಾಜಿರಾವ್‌ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ನ್ಯಾಯವಾದಿ ಯಲ್ಲಪ್ಪ ಬೆಳ್ಳಕ್ಕಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ...

  • ಹುಬ್ಬಳ್ಳಿ: ಹಾಳಾದ ರಸ್ತೆಗೆ "ಅನಾಥ ರಸ್ತೆ' ಎಂದು ನಾಮಕರಣ ಮಾಡುವ ಮೂಲಕ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘದಿಂದ ಸೋಮವಾರ ವಿನೂತನವಾಗಿ ಪ್ರತಿಭಟನೆ...

  • ಧಾರವಾಡ: ವಾರದ ಪ್ರತಿ ಮಂಗಳವಾರ ಕೃಷಿರಂಗ ಕಾರ್ಯಕ್ರಮದಲ್ಲಿ ಪ್ರಸಾರ ಆಗುತ್ತಿರುವ ಎಸ್‌ಡಿಎಂ ಡಾಕ್ಟರ್‌ ಆರೋಗ್ಯ ಸಂವಾದ ಕಾರ್ಯಕ್ರಮದ 700ನೇ ಸಂಚಿಕೆಯ ಮಹೋತ್ಸವವನ್ನು...

  • ಧಾರವಾಡ: ಇಲ್ಲಿಯ ಜಿಲ್ಲಾ ವಾರ್ತಾ ಭವನದ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಜನಸಂಪರ್ಕ ಕಚೇರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ...

  • ಧಾರವಾಡ: ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ...

ಹೊಸ ಸೇರ್ಪಡೆ