ಭತ್ತಕ್ಕೆ ಮಬ್ಬು ತಂದ ಕಬ್ಬು ಬೆಳೆ

ಲಕ್ಷ ಹೆಕ್ಟೇರ್ ತಲುಪಿದ ಕಬ್ಬು

Team Udayavani, May 19, 2022, 11:34 AM IST

2

ಧಾರವಾಡ: ಕೂರಿಗೆ ಪೂಜೆ ಮಾಡುವಂತಿಲ್ಲ, ಭತ್ತದ ಕಣಜವಂತೂ ಮೊದಲೇ ಇಲ್ಲ. ಹಂಗಾಮು ಹದ ನೋಡುವ ಮುದವೂ ಇಲ್ಲ. ಕಾರಣ ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಚ್ಚ ಹಸಿರಿನ ಕಬ್ಬಿನ ಗದ್ದೆಗಳು, ಸಮಯಕ್ಕೆ ಸರಿಯಾಗಿ ಬೀಳುತ್ತಿರುವ ಮುಂಗಾರು ಪೂರ್ವ ಮಳೆಗಳು, 10 ನಾಜೆಲ್‌ಗ‌ಳಲ್ಲಿ ಒಟ್ಟಿಗೆ ಚಿಮ್ಮುತ್ತಿರುವ ಬೋರ್‌ವೆಲ್‌ಗ‌ಳು. ಒಟ್ಟಲ್ಲಿ ಭತ್ತ ಹೋಗಿ ಕಬ್ಬು ಬಂತು ಡುಂ ಡುಂಮಕ್‌.

ಹೌದು. ಅಪ್ಪಟ ದೇಸಿ ಭತ್ತ ಬೆಳೆಯುತ್ತಿದ್ದ ಧಾರವಾಡದ ಸೀಮೆ ಇದೀಗ ತಮ್ಮ ಮೂಲ ಕೃಷಿ ಸ್ವರೂಪವನ್ನೇ ಬದಲಾಯಿಸಿಕೊಂಡು ಮುನ್ನಡೆಯುತ್ತಿದ್ದು, ಭತ್ತದಿಂದ ಸೋಯಾ ಅವರೆ ಬೆನ್ನು ಬಿದ್ದು ಸಾಕಾಗಿ, ಇದೀಗ ಕಬ್ಬು ಬೆಳೆಗೆ ಮಂಡಿಯೂರಿದ್ದು, ಈ ವರ್ಷ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಉತ್ಪಾದನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಹತ್ತಿ, ಭತ್ತ, ಹೆಸರು, ಶೇಂಗಾ, ಉದ್ದು, ಸೋಯಾ, ಮೆಕ್ಕೆಜೋಳ ಹೀಗೆ ಆಹಾರಧಾನ್ಯಗಳನ್ನೇ ಹುಲುಸಾಗಿ ಬೆಳೆಯುತ್ತಿದ್ದ ಧಾರವಾಡ ಜಿಲ್ಲೆಯ ಅಂದಾಜು 2.70ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಶೇ.40 ಅಂದರೆ ಒಂದು ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಕಬ್ಬು ಬೆಳೆಯೊಂದೇ ಆವರಿಸಿದೆ. 2021ರಲ್ಲಿ 75 ಸಾವಿರ ಹೆಕ್ಟೆರ್‌ ಇದ್ದ ಕಬ್ಬು ಈ ವರ್ಷ 28 ಸಾವಿರ ಹೆಕ್ಟೆರ್‌ನಷ್ಟು ಅಧಿಕವಾಗಿದ್ದು, ಈ ವರ್ಷದಿಂದ ಧಾರವಾಡ ಜಿಲ್ಲೆ ಭತ್ತ, ಹತ್ತಿ ಜಿಲ್ಲೆ ಎಂಬ ಹಣೆಪಟ್ಟಿ ಕಳೆದುಕೊಳ್ಳುವುದು ಪಕ್ಕಾ ಆಗಿದೆ.

ಸರ್ಕಾರಿ ಲೆಕ್ಕದಲ್ಲಿ ಕಬ್ಬು ಇನ್ನು 12 ಸಾವಿರ ಹೆಕ್ಟೆರ್‌ ನಷ್ಟೇ ಇದ್ದರೂ ಭತ್ತದ ಜಾಗವನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ. ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಮತ್ತು ಅಳ್ನಾವರ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚು ಭೂಮಿಯಲ್ಲಿ ವಿಸ್ತಾರಗೊಳ್ಳುತ್ತಿದೆ.

ಕಬ್ಬು ಹೆಚ್ಚಲು ಕಾರಣ? ಧಾರವಾಡ ಜಿಲ್ಲೆಯ ಪೈಕಿ ಅತ್ಯಧಿಕ ಕಬ್ಬು ಬೆಳೆಯುವುದು ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳು. ಉತ್ತರ ಕನ್ನಡ ಜಿಲ್ಲೆಯ ಗಡಿಗಂಟಿಕೊಂಡಿರುವ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಂಪನಿ ಸ್ಥಾಪನೆಯಾಗಿದ್ದರಿಂದ ಇಲ್ಲಿ ತಕ್ಕಮಟ್ಟಿಗೆ ಜನ ಕಬ್ಬು ಬಿತ್ತನೆ ಮಾಡಿದರು. ಆದರೆ ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಪ್ರಮುಖ ಸಕ್ಕರೆ ಕಾರ್ಖಾನೆಗಳಿಗೂ ಧಾರವಾಡದಿಂದ ಕಬ್ಬು ಸಾಗಾಣಿಕೆಯಾಗುತ್ತಿದ್ದು, ಇದೀಗ ಮುಂಡಗೋಡದಲ್ಲಿ ಮತ್ತೂಂದು ಸಕ್ಕರೆ ಕಾರ್ಖಾನೆ ನಿರ್ಮಾಣವಾಗುತ್ತಿದ್ದು, ಕಬ್ಬು ಬೆಳೆ ಮತ್ತಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ನೇರವಾಗಿ ಹಣ ರೈತರ ಖಾತೆಗೆ ಬರುತ್ತಿರುವುದರಿಂದ ಕಬ್ಬು ಬೆಳೆಗೆ ರೈತರು ಹೆಚ್ಚು ಒಲವು ತೋರುತ್ತಿದ್ದಾರೆ.

ಸಾಂಪ್ರದಾಯಿಕ ಬೆಳೆಗಳಿಗೆ ಬೈ ಬೈ: ಧಾರವಾಡ ಜಿಲ್ಲೆ ಬರಿ ಹತ್ತು ವರ್ಷಗಳ ಹಿಂದಷ್ಟೇ ಭತ್ತ, ಹತ್ತಿ, ಹೆಸರು, ಶೇಂಗಾ, ಮೆಣಸಿನಕಾಯಿ ಮತ್ತು ಇತರೆ ಆಹಾರ ಬೆಳೆಗಳನ್ನು ಯಥೇಚ್ಚ ಪ್ರಮಾಣದಲ್ಲಿ ಬೆಳೆದು ಮುಂಚೂಣಿಯಲ್ಲಿತ್ತು. ಅದು ಅಲ್ಲದೇ ಖರ್ಚು ಕಡಿಮೆ, ಕೆಲಸ ಕಡಿಮೆ ಮತ್ತು ನೇರವಾಗಿ ಹಣ ರೈತರ ಖಾತೆಗಳಿಗೆ ಬರುತ್ತಿರುವುದರಿಂದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅದೂ ಅಲ್ಲದೇ ಭತ್ತ, ಹತ್ತಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳ ಖರ್ಚು ಹೆಚ್ಚಾಗುತ್ತಿದೆ. ಉಳುಮೆ, ಕೂಲಿಯಾಳುಗಳ ಕೊರತೆ, ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅತ್ಯಧಿಕ ಹಣ ಖರ್ಚು ಮಾಡಿದರೂ ಲಾಭ ಪ್ರಮಾಣ ಕಡಿಮೆಯಾಗುತ್ತಿದೆ. ಅಷ್ಟೇಯಲ್ಲ ಹವಾಮಾನ ವೈಪರಿತ್ಯದಿಂದ ಬೆಳೆಗಳ ರಕ್ಷಣೆ ಕಷ್ಟವಾಗುತ್ತಿದ್ದು, ಹೀಗಾಗಿ ಅರೆಮಲೆನಾಡಿನ ರೈತರೆಲ್ಲರೂ ಕಬ್ಬು ಬೆಳೆ ಮೊರೆ ಹೋಗುತ್ತಿದ್ದಾರೆ.

ರಸಗೊಬ್ಬರ ಪೂರೈಕೆಯೂ ಓಕೆ

ಇನ್ನು ಜಿಲ್ಲೆಗೆ ಏ.2022ರಿಂದ ಸೆಪ್ಟೆಂಬರ್‌ ವರೆಗೂ ಒಟ್ಟು 60164 ಮೆ.ಟನ್‌ನಷ್ಟು ರಾಸಾಯನಿಕ ಗೊಬ್ಬರದ ಅಗತ್ಯವಿದ್ದು, 20536 ಮೆ.ಟನ್‌ ಸದ್ಯಕ್ಕೆ ಲಭ್ಯವಿದೆ. ಉಳಿದದ್ದು ಆಯಾ ತಿಂಗಳ ಬೇಡಿಕೆಯ ಅನುಪಾತದಲ್ಲಿ ಪೂರೈಕೆಯಾಗಲಿದೆ.

„ ಯೂರಿಯಾ- 23936 ಮೆ.ಟನ್‌. (10587 ಮೆ.ಟನ್‌ ಸದ್ಯ ಲಭ್ಯ)

„ ಡಿಎಪಿ-18631 ಮೆ.ಟನ್‌.(3994 ಸದ್ಯ ಲಭ್ಯ )

„ ಎಂಒಪಿ ಬೇಡಿಕೆ-2777ಮೆ.ಟನ್‌ (708 ಸದ್ಯ ಲಭ್ಯ)

„ ಕಾಂಪ್ಲೆಕ್ಸ್‌-ಬೇಡಿಕೆ-14095 ಮೆ.ಟನ್‌. (4888 ಸದ್ಯ ಲಭ್ಯ)

„ ಎಸ್‌ಎಚ್‌ಪಿ -ಬೇಡಿಕೆ 743 ಮೆ ಟನ್‌.  (357 ಸದ್ಯ ಲಭ್ಯ)

„ 14 ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ಗೊಬ್ಬರ ಲಭ್ಯ.

„ 14ಹೆಚ್ಚು ವಿತರಣೆ ಕೇಂದ್ರ ಸ್ಥಾಪಿಸಲಾಗಿದೆ.

„ ಪೂರ್ವ ಮುಂಗಾರು ಮಾ-ಮೇ 2022ರ ಅಂತ್ಯಕ್ಕೆ 120 ಎಂ.ಎಂ. ವಾಡಿಕೆ ಮಳೆ ಆಗಬೇಕು.

„ ಮೇ 18, 2022ರವರೆಗೂ 160.70 ಎಂ.ಎಂ. ಆಗಿದೆ.

2022ರ ಮುಂಗಾರಿಗೆ ಸಿದ್ಧತೆ  

2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 2,73,602 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಹತ್ತಿ-70123 ಹೆಕ್ಟೇರ್‌, ಹೆಸರು-52,900 ಹೆಕ್ಟೇರ್‌, ಮೆಕ್ಕೆಜೋಳ-49,796 ಹೆಕ್ಟೇರ್‌, ಸೋಯಾ-38, 654 ಹೆಕ್ಟೇರ್‌, ಶೇಂಗಾ-26308 ಹೆಕ್ಟೇರ್‌, ಭತ್ತ-2484, ಕಬ್ಬು- 1,08765 ಹೆಕ್ಟೇರ್‌ ಹಾಗೂ ಉದ್ದು-8700 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಅಂದಾಜಿದೆ.

ಜಿಲ್ಲೆಯಲ್ಲಿ ರೈತರಿಗೆ ಮುಂಗಾರು ಹಂಗಾಮಿಗೆ ಅಗತ್ಯವಾದ ಬೀಜ, ಗೊಬ್ಬರದ ಲಭ್ಯತೆ ಇದೆ. ಭತ್ತಕ್ಕೆ ಪರ್ಯಾಯವಾಗಿ ಕಬ್ಬು ಬೆಳೆ ಕೆಲವು ತಾಲೂಕಿನಲ್ಲಿ ಹೆಚ್ಚುತ್ತ ಸಾಗಿದ್ದು ಸತ್ಯ. ಅದು ರೈತರ ಆಯ್ಕೆಯಾಗಿದೆ. –ರಾಜಶೇಖರ್‌, ಜೆ.ಡಿ.ಕೃಷಿ, ಧಾರವಾಡ ಜಿಲ್ಲೆ

-ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

8-

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.