ಶೀಘ್ರ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆ ಪೂರ್ಣ ಪ್ರಮಾಣದ ಸೇವೆ

Team Udayavani, Dec 10, 2019, 10:58 AM IST

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ನಿರ್ಮಾಣಗೊಂಡಿರುವ ಪಿಎಂಎಸ್‌ಎಸ್‌ವೈ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಜನವರಿ ತಿಂಗಳಾಂತ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಲಾಗುವುದು ಎಂದು ಕಿಮ್ಸ್‌ ನೂತನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಸೋಮವಾರ ಕಿಮ್ಸ್‌ನ ಕಾಯಂ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ಉಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಕೆಲಸ ನಡೆದಿದೆ. ಸಿಬ್ಬಂದಿ ನೇಮಕಾತಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ಸಹ ಶೀಘ್ರ ಆರಂಭಿಸುವಂತೆ ಗಡುವು ನೀಡಿದ್ದಾರೆ. ಹೀಗಾಗಿ ಇದರ ಕಾರ್ಯಾರಂಭಕ್ಕೆ ವಿಳಂಬ ಮಾಡುವುದಿಲ್ಲ ಎಂದರು.

ಸುಪರ್‌ ಸ್ಪೆಶಾಲಿಟಿಯಲ್ಲಿ ತಾಯಿ ಮಗು ವಿಭಾಗಕ್ಕೆ 50 ಬೆಡ್‌ಗಳ ಸವಲತ್ತು ಮಾಡಿಕೊಂಡು ಈಗಾಗಲೇ 25 ಬೆಡ್‌ ರೋಗಿಗಳನ್ನು ದಾಖಲಿಸಲಾಗಿದೆ. ಕಿಮ್ಸ್‌ ಶೀಘ್ರವೇ 1,800 ಹಾಸಿಗೆ ಆಸ್ಪತ್ರೆಯಾಗಲಿದೆ ಎಂದು ಹೇಳಿದರು. ಕಿಮ್ಸ್‌ನಲ್ಲಿ ಎಂಬಿಬಿಎಸ್‌ನ 200 ಸೀಟು ಖಚಿತವಾಗಿದೆ. ಸುಪರ್‌ ಸ್ಪೆಶಾಲಿಟಿಯಯೋಗಾಲಜಿ ವಿಭಾಗದಲ್ಲಿ ಎರಡು ಎಂಸಿಎಚ್‌ ಹಾಗೂ ರೆಡಿಯೋಲಜಿ ವಿಭಾಗದಲ್ಲಿ 2ಎಂಡಿಆರ್‌ಡಿ ಆರಂಭಿಸಲು ಪರವಾನಗಿ ದೊರೆತಿದೆ. 1.30 ಕೋಟಿ ರೂ. ವೆಚ್ಚದಲ್ಲಿ ಸೆಂಟ್ರಲ್‌ ಲ್ಯಾಬ್‌ ಉನ್ನತೀಕರಿಸುವುದು, ವಿಶ್ವ ದರ್ಜೆಯ ಆಟೋಅನಾಲೈಸರ್‌ ಎಕ್ಸ್‌ಎಲ್‌ 1000, ಎಲಿಶಾ, ಹಾರ್ಮೋನಲ್‌ ಅನಾಲೈಸರ್‌ ಅಳವಡಿಸುಗುವುದು. 150 ಬೆಡ್‌ ಬಳಕೆಗೆ ನೂತನ ಎಂಸಿಎಚ್‌ ಬ್ಲಾಕ್‌ ಸಿದ್ಧವಾಗಿದೆ ಹಾಗೂಅದನ್ನು 250 ಬೆಡ್‌ಗೆ ವಿಸ್ತರಿಸಲು 2 ಅಂತಸ್ತುಗಳ ನಿರ್ಮಾಣವು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕಾರ್ಡಿಯಾಕ್‌ ಸರ್ಜರಿಯೊಂದಿಗಿನ 60 ಬೆಡ್‌ಗಳ ಕಾರ್ಡಿಯಾಲಜಿ ಬ್ಲಾಕ್‌ ಅನ್ನು ಇನ್ನು 500 ಬೆಡ್‌ಗಳೊಂದಿಗೆ ಶೀಘ್ರವೇ ಆರಂಭಿಸಲಾಗುವುದು. ನೂತನ ಶವಾಗಾರ ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ. 28 ಕೋಟಿ ರೂ. ವೆಚ್ಚದಲ್ಲಿ ಅಪಘಾತ, ಶಸ್ತ್ರಚಿಕಿತ್ಸಾ ಘಟಕ,ಐಸಿಯು ಬ್ಲಾಕ್‌ ಅಭಿವೃದ್ಧಿ ಪಡಿಸಲಾಗುವುದು. ಕಿಮ್ಸ್‌ಗೆ ಎನ್‌ಐಬಿಎಚ್‌, ಎನ್‌ಐಎಬಿಎಲ್‌ ಮಾನ್ಯತೆ ಪಡೆಯಲು ಸರಕಾರ ಒಂದು ತಿಂಗಳ ಗಡುವು ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅದನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು. 143 ವೈದ್ಯಕೀಯ ಸಿಬ್ಬಂದಿಗೆ, ಕ್ಲಾರಿಕಲ್‌ ಹುದ್ದೆಗೆ ಬಡ್ತಿ ನೀಡಲಾಗಿದೆ. ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ 6ನೇ ವೇತನ ಜಾರಿಗೊಳಿಸಲಾಗಿದೆ.

ಕಿಮ್ಸ್‌ ಕ್ಯಾಂಪಸ್‌ ಅಭಿವೃದ್ಧಿಗೆ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಿಂದ ಲ್ಯಾಂಡ್ಸ್‌ಸ್ಕೇಪ್‌ ಮಾಡಿಸಲಾಗುವುದು. ಕಿಮ್ಸ್‌ನ ಕ್ರೀಡಾ ಮೈದಾನ ಅಭಿವೃದ್ಧಿ ಪಡಿಸಲಾಗುವುದು. ಸಿಎಸ್‌ಆರ್‌ ನಿಧಿ, ದಾನಿಗಳ ಕೊಡುಗೆಯಿಂದ ಕಿಮ್ಸ್‌ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಎಂಆರ್‌ಡಿ ಲಭ್ಯತೆಗೆ 16 ಸಾವಿರ ಚದುರಡಿ ಜಾಗದ ಅವಶ್ಯಕತೆಯಿದೆ. ಎಂಆರ್‌ಐ,ಸಿಟಿ ಸ್ಕ್ಯಾನ್ ಖರೀದಿಗೆ ಚಿಂತನೆ ನಡೆಸಲಾಗಿದೆ.

ಅಗ್ನಿ ಸುರಕ್ಷತೆಗೆ 2 ಕೋಟಿ ರೂ. ಅನುದಾನ ಅವಶ್ಯವಾಗಿದೆ. ಅತಿಥಿಗೃಹ ನಿರ್ಮಿಸಲು, ಇನ್ನು 80 ವೆಂಟಿಲೇಟರ್‌ ಅಳವಡಿಸಲು ಪ್ರಯತ್ನಿಸಲಾಗುವುದು. ಅಪಘಾತ ವಿಭಾಗವನ್ನು 10 ಸಾವಿರ ಚದುರಡಿಯಷ್ಟು ವಿಸ್ತರಿಸಲಾಗುವುದು. ಲಿನಾಕ್‌ ಯಂತ್ರವನ್ನು ವಿಸ್ತರಿಸಲಾಗುವುದು. ವೈರಾಲಜಿ ಲ್ಯಾಬ್‌ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿಮ್ಸ್‌ನಲ್ಲಿ ದಾಖಲಾಗುವ ಹೃದ್ರೋಗಿಗಳಿಗೆ ತಾಂತ್ರಿಕಸಹಾಯ ಮಾಡುವುದಾಗಿ ಜಯದೇವ ಆಸ್ಪತ್ರೆಯ ಎನ್‌. ಮಂಜುನಾಥ ಅವರು ಭರವಸೆ ನೀಡಿದ್ದಾರೆ.

138 ಕೋಟಿ ರೂ. ವೆಚ್ಚದಲ್ಲಿ ಕಿಮ್ಸ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಸಮಗ್ರ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ ಸೂಚನೆಯಂತೆ ಕಿಮ್ಸ್ ನಲ್ಲಿ ಅಪಘಾತ ವಿಭಾಗ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ 5-10 ಸಿಬ್ಬಂದಿ ಶಸ್ತ್ರಸಜ್ಜಿತಗೊಳಿಸಿ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದರು. ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಮಾತನಾಡಿ, ಕಿಮ್ಸ್‌ನಲ್ಲಿ ಕರ್ತವ್ಯ ಲೋಪ ಹಾಗೂ ಸೇವೆಯಲ್ಲಿ ನಿರ್ಲಕ್ಷ್ಯ ತೋರುವವರಿಗೆ ನೋಟಿಸ್‌ ನೀಡಲಾಗುತ್ತಿದ್ದು, ಇದರ ಪರಿಶೀಲನೆಗೆ ತಂಡ ರಚಿಸಲಾಗಿದೆ ಎಂದರು. ಉಪ ವೈದ್ಯಕೀಯ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ ಇನ್ನಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ