ವಿವಿಧೆಡೆ ಸಂಭ್ರಮದ 70ನೇ ಗಣರಾಜ್ಯೋತ್ಸವ


Team Udayavani, Jan 27, 2019, 4:22 AM IST

hu-d.jpg

ಹುಬ್ಬಳ್ಳಿ: ನಗರದಲ್ಲಿ ವಿವಿಧ ಸಂಘ-ಸಂಸ್ಥೆ, ಶಾಲಾ-ಕಾಲೇಜು ಸೇರಿದಂತೆ ಇನ್ನಿತರೆಡೆ 70ನೇ ಗಣರಾಜ್ಯೋತ್ಸವವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಜೆಡಿಎಸ್‌: ಜಾತ್ಯತೀತ ಜನಾತದಳ ಪಕ್ಷದಿಂದ ನೆಹರು ಮೈದಾನ ಬಳಿಯ ಪಕ್ಷದ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಧ್ವಜಾರೋಹಣ ನೆರವೇರಿಸಿದರು. ಸಾಧಿಧೀಕಖಾನ್‌ ಹಕೀಂ, ಶಂಕರ ಪವಾರ, ಜಯಶ್ರೀ ಮದಿಹಳ್ಳಿ, ಇರ್ಷಾದ ಭದ್ರಾಪುರ ಇನ್ನಿತರರಿದ್ದರು.

ಕಾಂಗ್ರೆಸ್‌: ಹು-ಧಾ ಮಹಾನಗರ ಜಿÇ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮುಖಂಡರಾದ ಸದಾನಂದ ಡಂಗನವರ, ದೇವಕಿ ಯೋಗಾನಂದ, ಶಿವಾ ನಾಯ್ಕ, ವೇದವ್ಯಾಸ ಕೌಲಗಿ, ತಾರಾದೇವಿ ವಾಲಿ, ಯಮನೂರ ಗುಡಿಹಾಳ ಇನ್ನಿತರರಿದ್ದರು.

ಪಿ.ಸಿ. ಜಾಬಿನ್‌ ಕಾಲೇಜು: ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್‌ ವಿಜ್ಞಾನ ಮಹಾವಿದ್ಯಾಯದಲ್ಲಿ ಪ್ರಾಚಾರ್ಯ ಡಾ| ಎಸ್‌.ವಿ. ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ರಕ್ತದಾನ ಶಿಬಿರ ನಡೆಯಿತು. ಎನ್‌ಸಿಸಿ ಅಧಿಕಾರಿ ಲೆ| ಪಿ. ಪ್ರಭಾಕರನ್‌, ಲಲಿತಾ ಕೊಡ್ಲಿ, ಎನ್ನೆಸ್ಸೆಸ್‌ ಅಧಿಕಾರಿ ಡಾ| ಎಂ.ವೈ. ಮೂಳೇಕರ, ಪಪೂ ಪ್ರಾಚಾರ್ಯ ಪ್ರೊ| ಎಸ್‌.ಸಿ. ಹಿರೇಮಠ, ಬಿಸಿಎ ಸಂಚಾಲಕಿ ಜ್ಯೋತಿ ಮಾನೇದ ಇದ್ದರು.

ಶ್ರೀ ಮಂಜುನಾಥೇಶ್ವರ ಕೇಂದ್ರೀಯ ಶಾಲೆ: ಇಲ್ಲಿನ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಕೇಂದ್ರೀಯ ಶಾಲೆ ಆವರಣದಲ್ಲಿ ಗಣರಾಜ್ಯೊತ್ಸವ ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ರಜನಿ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ಆಕ್ಸ್‌ಫರ್ಡ್‌ ಕಾಲೇಜು: ಕುಸುಗಲ್ಲ ರಸ್ತೆಯ ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಡಾ| ಮಹೇಶ ನಾಲವಾಡ ಧ್ವಜಾರೋಹಣ ನೆರವೇರಿಸಿದರು. ಸ್ನಾತಕೋತ್ತರ ವಿಭಾಗದ ನಿದೇರ್ಶಕ ಡಾ| ಸಂತೋಷ ಕೃಷ್ಣಾಪುರ, ಪದವಿ ಪ್ರಾಚಾರ್ಯೆ ಡಾ| ಆರಿಫಾ ಮಂಕಾದಾರ, ಬಿಸಿಎ ವಿಭಾಗದ ಸಂಯೋಜಕ ಮಂಜುನಾಥ ಮುತ್ತಲಗಿರಿ, ಉಪನ್ಯಾಸಕಿ ರೇಷ್ಮಾ ಮೊದಲಾದವರಿದ್ದರು.

ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌: ಆನಂದ ನಗರ ರಸ್ತೆಯ ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಪ್ರಾಚಾರ್ಯ ಎಂ.ಎಸ್‌. ಮುಲ್ಲಾ ಧ್ವಜಾರೋಹಣ ನೆರವೇರಿಸಿದರು. ವಿಭಾಗಗಳ ಮುಖ್ಯಸ್ಥರಾದ ಜಿ.ಎಂ. ಪುಡಕಲಕಟ್ಟಿ, ಎಫ್‌.ಎಚ್. ಕಿತ್ತೂರ, ಚಂದ್ರಶೇಖರ ತುಪ್ಪದ, ರವೀಂದ್ರಸಿಂಗ್‌ ಅತ್ತಾರ, ಬಾಳೇಶ ಹೆಗ್ಗಣ್ಣವರ, ಎಂ.ಎಚ್. ಧಾರವಾಡ ಮೊದಲಾದವರಿದ್ದರು.

ಕೆಸಿಸಿಐ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಉಪಾಧ್ಯಕ್ಷ ಮಹೇಂದ್ರ ಲದ್ದಡ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಅಶೋಕ ತೋಳನವರ, ಜಿ.ಕೆ. ಆದಪ್ಪನವರ, ಪದಾಧಿಕಾರಿ ವಿಜಯ ಜವಳಿ ಇದ್ದರು.

ಹೆಸ್ಕಾಂ: ಹೆಸ್ಕಾಂ ಪವರ್‌ ಹೌಸ್‌ ಕಾಂಪೌಂಡ್‌ನ‌ ಹೆಸ್ಕಾಂ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಅಭಿಯಂತ ಎ.ಎಸ್‌. ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ಪಿ.ಜಿ. ಅಮ್ಮಿನಬಾವಿ ಮೊದಲಾದವರಿದ್ದರು.

ಗೃಹರಕ್ಷಕ ದಳ: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಹುಬ್ಬಳ್ಳಿ ಘಟಕದಿಂದ ಡಾ| ಸತೀಶ ಇರಕಲ್ಲ ಧ್ವಜಾರೋಹಣ ನೆರವೇರಿಸಿದರು. ಅಥ್ಲೆಟಿಕ್‌ ಪಟು ವಿಲಾಸ ಎಸ್‌. ನೀಲಗುಂದ ಅವರನ್ನು ಸನ್ಮಾನಿಸಲಾಯಿತು. ಹನುಮಂತರಾಯ್‌ ಇಳಗೇರ, ಕೆ.ಎಚ್. ಬ್ಯಾಡಗಿ, ಗಿರೀಶ ಶಿವಶಿಂಪಿ ಇದ್ದರು.

ಆದರ್ಶ ಕಾಲೇಜು: ಆದರ್ಶ ಪಪೂ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಶೀಫಾ ಜಮಾದಾರ, ಗೌರಿ ಹಳ್ಳದ ಧ್ವಜಾರೋಹಣ ನೇರವೇರಿಸಿದರು. ಮಲ್ಲಿಕಾರ್ಜುನ ಸಾವಕಾರ, ಎಸ್‌.ಬಿ. ಕುನ್ನೂರ, ಪ್ರೊ| ಬಿ.ಸಿ. ಗೌಡರ, ಪ್ರೊ| ಡ್ಯಾನಿಯಲ್‌ ಹೊಸಕೇರಿ, ಪ್ರಾಚಾರ್ಯ ಎಂ.ಕೆ. ಬೆಳಗಲಿ, ಪ್ರೊ| ಬಿ.ಜಿ. ಅಣ್ಣೀಗೇರಿ ಇದ್ದರು.

ಎಸ್‌.ಕೆ. ಆರ್ಟ್ಸ್ ಕಾಲೇಜು: ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮತ್ತು ಎಚ್.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಪ್ರಾಚಾರ್ಯ ಡಾ| ಲಿಂಗರಾಜ ಹೊರಕೇರಿ ಧ್ವಜಾರೋಹಣ ನೆರವೇರಿಸಿದರು. ಪಿಯುಸಿ ಪ್ರಾಚಾರ್ಯ ಪ್ರೊ| ನಿರ್ಮಲಾ ಅಣ್ಣಿಗೇರಿ, ಸೇನಾಧಿಕಾರಿ ಹವಾಲ್ದಾರ ನರೇಶಕುಮಾರ, ಸುಬೇದಾರ ದಿಲ್‌ಬಾಗ್‌ ಸಿಂಗ್‌, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ| ಆರ್‌.ಐ. ಹರಕುಣಿ, ಎನ್‌ಎಸ್‌ಎಸ್‌ ಅಧಿಕಾರಿ ಡಾ| ವೈ. ನಾಗೇಶ, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಪ್ರೊ| ಸುಜಾತಾ ಪಟ್ಟೇದ ಇನ್ನಿತರರಿದ್ದರು.

ಎನ್‌ಸಿಪಿ: ಎನ್‌ಸಿಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಈರಪ್ಪ ಎಮ್ಮಿ ಧ್ವಜಾರೋಹಣ ನೆರವೇರಿಸಿದರು. ಎಫ್‌.ಎ. ಶೇಖ, ಗುರುರಾಜ ಕಾರಡಗಿ, ರಾಜು ನಾಯಕವಾಡಿ, ಧರ್ಮು ಗುಡಿ, ಶಂಕರ ಗುಡಿ, ಎಂ.ಎಂ. ಮಕ್ಕುಬಾಯಿ, ಅಕ್ಷಯಕುಮಾರ ಇನ್ನಿತರರಿದ್ದರು.

ಕೋಟಿಲಿಂಗ ನಗರ: ಗೋಕುಲ ರಸ್ತೆಯ ಕೋಟಿಲಿಂಗ ನಗರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ ಎಸ್ಸಿ, ಎಸ್ಟಿ ನಿವಾಸಿಗಳ ಹಿತ ರಕ್ಷಣಾ ವೇದಿಕೆಯಿಂದ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು. ಪ್ರೇಮನಾಥ ಚಿಕ್ಕತುಂಬಳ ಅಧ್ಯಕ್ಷತೆ ವಹಿಸಿದ್ದರು. ವಿ.ಕೆ. ಹಿರೇಮಠ, ಮೋಹನ ಕುಂದಗೋಳ, ಎನ್‌.ಎಸ್‌. ಯಾತಗೇರಿ, ಶೈಲಾ ಪಾಟೀಲ, ಯಶೋಧಾ ಗೌಡ, ಜನಾಬಾಯಿ ಪೋಪಲೆ, ರಾಜೇಶ್ವರಿ ರಾಮನಾಳ, ಪ್ರಕಾಶ ನರೇಂದ್ರ, ಬಸವರಾಜ ರಾಮನಾಳ ಇನ್ನಿತರರಿದ್ದರು.

ಸಾಮ್ರೆ ಚಾರಿಟೇಬಲ್‌ ಟ್ರಸ್ಟ್‌: ಹಳೇ ಹುಬ್ಬಳ್ಳಿ ಸುಭಾಸನಗರದ ಸಾಮ್ರೆ ಚಾರಿಟೇಬಲ್‌ ಟ್ರಸ್ಟ್‌ನ ಕ್ರೀಡಾ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮೋಹನ ಹಿರೇಮನಿ ಧ್ವಜಾರೋಹಣ ನೆರವೇರಿಸಿದರು. ಈಶ್ವರ ಹಿರೇಮನಿ, ಸಾಗರ ಹಿರೇಮನಿ, ಎಚ್.ವೈ. ಮಾದರ, ಕಮಲಾ ಬಡಿಗೇರ ಇನ್ನಿತರರಿದ್ದರು.

ಪ್ರಗತಿ ಐಟಿಐ ಕಾಲೇಜು: ಹಳೇ ಹುಬ್ಬಳ್ಳಿ ನೇಕಾನಗರದ ಪ್ರಗತಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಂ.ಎಚ್. ಡಂಬಳ ಧ್ವಜಾರೋಹಣ ನೆರವೇರಿಸಿದರು. ಅಣ್ಣಾಸಾಹೇಬ ಅಂದೇವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್‌. ಪುರಂತಿ, ಜಿ.ಎಸ್‌. ಕರದ, ವಿ.ವಿ. ಕ್ಷವರದ, ಜಿ.ಎಸ್‌. ಪೂಜಾರ, ರಾಮಣ್ಣ ಸವಣೂರ, ಎಂ.ಎಂ. ಹಮ್ಮಗಿ, ಎಂ.ಎನ್‌. ಪಶುಪತಿಹಾಳ ಇದ್ದರು.

ದುರ್ಗಾದೇವಿ ದೇವಸ್ಥಾನ: ಹಿರೇಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನ ಅಭಿವೃದ್ಧಿ ಹಾಗೂ ವಿದ್ಯಾವರ್ಧಕ ಟ್ರಸ್ಟ್‌ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಟ್ರಸ್ಟ್‌ ಅಧ್ಯಕ್ಷ ರವಿ ಬಂಕಾಪುರ ಧ್ವಜಾರೋಹಣ ನೆರವೇರಿಸಿದರು. ಮಲ್ಲೇಶಪ್ಪ ಬಂಕಾಪುರ, ಗುರುಪ್ಪ ಗೌಡರ, ಗಣೇಶ ಕಾಟೆ, ಶಂಕರ ಸಂಶಿ, ಸುಜಯ ಹುಣಶಿ, ಮಂಜುನಾಥ ಗೌಡರ, ಉಮೇಶ ಗೌಡರ, ಸಂತೋಷ ಧಾರವಾಡ, ಪ್ರಮೋದ ಶಿರೋಳ ಇದ್ದರು.

ಓಂ ನಗರ ಕ್ಷೇಮಾಭಿವೃದ್ಧಿ ಸಂಘ: ಉಣಕಲ್ಲ ಓಂ ನಗರ ಕ್ಷೇಮಾಭಿವೃದ್ಧಿ ಸಂಘದಿಂದ ಬಡಾವಣೆಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಚನ್ನಬಸಪ್ಪ ಧಾರವಾಡಶೆಟ್ಟರ ಧ್ವಜಾರೋಹಣ ನೆರವೇರಿಸಿದರು. ಡಾ| ಎಂ.ಎಸ್‌. ಹುಲ್ಲೊಳ್ಳಿ, ಭಾಸ್ಕರ ಹೆಗಡೆ, ಸಿ.ಎಂ. ಚನ್ನಬಸಪ್ಪ, ಸಿದ್ದಪ್ಪ ಜೋಡಳ್ಳಿ, ಸತೀಶ ಪಾಟೀಲ, ರಾಕೇಶ ಕಲಬುರ್ಗಿ, ಗಣೇಶ ಶಿಂಧೆ, ಕೆ.ವಿ. ಜವಾಯಿ ಇದ್ದರು.

ಗ್ಲೋಬಲ್‌ ಕಾಲೇಜು: ಗ್ಲೋಬಲ್‌ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್‌ ವ್ಯವಹಾರ ನಿರ್ವಹಣೆ, ಐಟಿ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಧ್ವಜಾರೋಹಣ ನೆರವೇರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎನ್‌.ಬಿ. ಹಿರೇಮಠ, ಪ್ರಾಚಾರ್ಯ ಡಾ| ಮಹೇಶ ದೇಶಪಾಂಡೆ ಇದ್ದರು.

ಬಿಎಸ್‌ಪಿ: ಬಹುಜನ ಸಮಾಜ ಪಕ್ಷದ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಘಟಕದ ವತಿಯಿಂದ ಮಂಟೂರು ರಸ್ತೆಯಲ್ಲಿ ಘಟಕದ ಅಧ್ಯಕ್ಷ ವಿಜಯ ಕರ್ರಾ ಧ್ವಜಾರೋಹಣ ನೆರವೇರಿಸಿದರು. ಸತೀಶ, ರಮೇಶ, ರತಂಗಸ್ವಾಮಿ, ಶಶಿಕಾಂತ, ಫಿಲೋಮೆನ್‌, ರತ್ನಾ, ವೆಂಕಟ, ಮಾರುತಿ, ಚಲ್ಲಪ್ಪಾ, ಯಾಕೋಬ ಇನ್ನಿತರರಿದ್ದರು.

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.