ಕೋವಿಡ್ ಲಸಿಕೆ ಅಡ್ಡ ಪರಿಣಾಮ ಬೀರದು
Team Udayavani, Apr 16, 2021, 8:47 PM IST
ಧಾರವಾಡ : 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಯು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ ಹೇಳಿದರು.
ಪುರೋಹಿತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ 130ನೇ ಜಯಂತಿ ನಿಮಿತ್ಯ ಏರ್ಪಡಿಸಲಾಗಿದ್ದ ಕೊರೊನಾ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ -19ಗೆ ಸಂಬಂಧಿ ಸಿದ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಸಹಕರಿಸಬೇಕು ಎಂದರು. ತಾಲೂಕಾ ಆರೋಗ್ಯಾ ಧಿಕಾರಿಗಳ ಕಚೇರಿಯ ವೈದ್ಯಾಧಿಕಾರಿ ಡಾ| ಸುಭಾಷ್ ಮಾತನಾಡಿ, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಲಸಿಕೆ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಲಸಿಕೆಯಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾ ಧಿಕಾರಿ ರೇಖಾ ಬಾಡಗಿ ಮಾತನಾಡಿ, ಕೊರೊನಾ ಲಸಿಕೆ ಪಡೆದುಕೊಳ್ಳುವ ಮೂಲಕ ಎಲ್ಲರೂ ಸರ್ಕಾರದ ಜೊತಗೆ ಕೈಜೋಡಿಸಬೇಕು. ಆಗಲೇ ನಾವು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ ಎಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಪವಿತ್ರಾ ಚಪ್ಪರದ, ಮೀನಾಕ್ಷಿ ಕುರಂದವಾಡ, ವಿಜಯಲಕ್ಷ್ಮೀ ಶೆಟ್ಟರ, ಪ್ರೇಮಾ ಬಳ್ಳಾರಿ, ನವೀನ ಇಳಿಗೇರ ಇದ್ದರು. ಆರೋಗ್ಯ ಕಾರ್ಯಕರ್ತೆ ಅರ್ಚನಾ ಇಟಗಟ್ಟಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಹಂತಕರನ್ನು 4 ಗಂಟೆಗಳಲ್ಲಿ ಪತ್ತೆ ಹಚ್ಚಿದ್ಹೇಗೆ!
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಸ್ವಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ
ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ
ಆಪ್ತ ಕಾರ್ಯದರ್ಶಿಯಿಂದಲೇ ಕೊಲೆಯಾದರೆ ಚಂದ್ರಶೇಖರ ಗುರೂಜಿ; ಮಹಿಳೆ ಪೊಲೀಸ್ ವಶಕ್ಕೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ತನಿಖೆಗೆ ಐದು ತಂಡಗಳ ರಚನೆ