Udayavni Special

ಗಾಂಧಿ ಯಾರು ಎನ್ನುವ ದಿನ ದೂರವಿಲ್ಲ


Team Udayavani, Aug 9, 2017, 12:28 PM IST

hub2.jpg

ಧಾರವಾಡ: ಆಧುನಿಕತೆ ಭರಾಟೆಯಲ್ಲಿರುವ ಯುವ ಪೀಳಿಗೆ ಮಹಾತ್ಮಾ ಗಾಂಧೀಜಿ ಅಂದ್ರೆ ಯಾರು? ಎನ್ನುವ ದಿನಗಳು ದೂರವಿಲ್ಲ. ಖಾದಿ ಬಟ್ಟೆ, ಸ್ವದೇಶಿ ವಸ್ತುಗಳ ಬಳಕೆ ಸೇರಿದಂತೆ ಗಾಂಧೀಜಿಯವರ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. 

ಇಲ್ಲಿನ ಆಲೂರು ವೆಂಕಟರಾವ್‌ ಭವನದಲ್ಲಿ ನಡೆದ ಧಾರವಾಡ ತಾಲೂಕು ಸೇವಾ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಇಂದು ಯಾರಿಗೂ ಬೇಕಾಗಿಲ್ಲ. ಎಲ್ಲರೂ ತಮ್ಮ ಮಕ್ಕಳನ್ನು ಡಾಕ್ಟರ್‌ ಮತ್ತು ಎಂಜಿನೀಯರ್‌ ಮಾಡಲು ಹೊರಟಿದ್ದಾರೆಯೇ ಹೊರತು ಮನುಷ್ಯರನ್ನಾಗಿ ಮಾಡಲು ಯಾರೂ ಸಿದ್ಧರಿಲ್ಲ. ಶಿಸ್ತು, ದೇಶಪ್ರೇಮದ ವಿಚಾರಗಳು ಇಂದು ಬೇರೆ ಸ್ವರೂಪವನ್ನೇ ಪಡೆದುಕೊಂಡಿವೆ.

ಎಲ್ಲರೂ ಬರೀ ನಾಟಕ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದು ವಿಷಾದಿಸಿದರು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಏನೇನೋ ಮಾಡುತ್ತಿದ್ದರೆ, ಅವರನ್ನು ಆಯ್ಕೆ ಮಾಡುವ ಜನರು ಕೂಡ ತಪ್ಪು ದಾರಿ ಹಿಡಿದು ಆಯ್ಕೆ ಮಾಡುತ್ತಾರೆ. ಸಮಾಜ ಮುನ್ನಡೆಸುವ ಯಾರಲ್ಲಿಯೂ ನೈತಿಕತೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಗಾಂಧೀಜಿ ತತ್ವಗಳು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ ಎಂದರು. 

ಖಾದಿ ನಿರ್ಲಕ್ಷ: ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಎಲ್ಲರೂ ದೊಡ್ಡ ದೊಡ್ಡ ಕಂಪನಿಗಳನ್ನು ಬೆಳೆಸಲು ಅಗತ್ಯವಾದ ಭೂಮಿ, ನೀರು, ವಿದ್ಯುತ್‌ ಕೊಡಲು ಯತ್ನಿಸುತ್ತಿದ್ದಾರೆ.  ಅದು ರಾಜ್ಯ, ಕೇಂದ್ರ ಸರ್ಕಾರವಿರಲಿ, ರಾಜಕಾರಣಿಗಳಿರಲಿ, ಅಧಿಕಾರಿಗಳಿರಲಿ, ಎಲ್ಲರಲ್ಲೂ ದೊಡ್ಡ ಕೈಗಾರಿಕೆ ಬೆಳೆಸುವ ಆಸಕ್ತಿ ಇದೆ.

ಆದರೆ ಖಾದಿ ಗ್ರಾಮೋದ್ಯೋಗ ಮತ್ತು ಕೈಮಗ್ಗಗಳ ಅಭಿವೃದ್ಧಿ ಮತ್ತು ಅದನ್ನು ಅವಲಂಬಿಸಿ ಜೀವನ ನಡೆಸುವವರ ಬಗ್ಗೆ ಯಾರೂ ಕಾಳಜಿ ತೋರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸ್ವಾತಂತ್ರ ಹೋರಾಟಗಾರ ಶತಾಯುಷಿ ಶಿವಮೂರ್ತಯ್ಯ ಕಬ್ಬಿಣಕಂತಿಮಠ ಮಾತನಾಡಿ, ಖಾದಿ ಅಂದ್ರೆ ಸ್ವರ್ಗಕ್ಕೆ ಹಾದಿ ಇದ್ದಂತೆ. ನಾನು ಇಂದು ನೂರು ವರ್ಷ ಆರೋಗ್ಯವಾಗಿ ಇರುವುದಕ್ಕೆ ಖಾದಿ ಬಟ್ಟೆ ಧರಿಸುವುದೇ ಕಾರಣ. ನನ್ನ ಆರೋಗ್ಯದ ಗುಟ್ಟು ಖಾದಿ ಮತ್ತು ಗಾಂಧಿ  ತತ್ವಗಳೇ ಆಗಿವೆ ಎಂದರು. 

ದೊರೆಸ್ವಾಮಿ ಗೈರು: ಸ್ವಾತಂತ್ರ ಹೋರಾಟಗಾರ ಶತಾಯುಷಿ ಎಚ್‌.ಎಸ್‌. ದೊರೆಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಬೇಕಿತ್ತು. ಅನಾರೋಗ್ಯ ನಿಮಿತ್ತ ಅವರು ಗೈರು ಹಾಜರಿದ್ದರು. ಆದರೆ ಕಾರ್ಯಕ್ರಮದುದ್ದಕ್ಕೂ ಅವರನ್ನು ಎಲ್ಲ ಮುಖಂಡರು ನೆನೆದರು. 

ಸನ್ಮಾನ: ಖಾದಿ ಮತ್ತು ಗಾಂಧಿ ತತ್ವ ಪ್ರಸಾರದಲ್ಲಿ ತೊಡಗಿದ್ದ ಅನೇಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಿ.ಜಿ. ಶಿಂಗಟೇರಿ, ಬಿ.ಟಿ. ತಲವಾಯಿ, ಬಿ.ಜೆ. ನಾಯಕ್‌, ಎ.ಎಂ. ಪದಕಿ, ಗಂಗಯ್ಯ ಹವಾಲ್ದಾರಮಠ, ಬಾಬು ಬಡಿಗೇರ, ಜಿ.ಎಂ. ಕುಲಕರ್ಣಿ, ರಾಮು ಪತ್ತಾರ, ಕಮರುನ್ನಿಸಾ ಟಿನ್ನಿವಾಲೆ, ಸಾವಕ್ಕ ಬಂಡರಗಟ್ಟಿ, ಸಂಕವ್ವ ಶೀಲವಂತರ ಮತ್ತು ಎಂ.ಎಸ್‌. ರೋಣಿ ಅವರನ್ನು ಗೌರವಿಸಲಾಯಿತು. ಕೃಷ್ಣಾ ಜೋಷಿ ನಿರೂಪಿಸಿದರು. ನೇತ್ರತಜ್ಞ ಡಾ| ಎಂ.ಎಂ. ಜೋಷಿ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ| ಕೆ.ಎಸ್‌. ಭಸೆ, ಎನ್‌.ಕೆ. ಕಾಗಿನೆಲ್ಲಿ ಮುಂತಾದವರಿದ್ದರು.  

ಟಾಪ್ ನ್ಯೂಸ್

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

vhfghftght

ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

cgcftgt

ಮತಾಂತರಕ್ಕೆ ಪ್ರಯತ್ನ ಆರೋಪ | ಭೈರಿದೇವರಕೊಪ್ಪ ಚರ್ಚ್‌ನ ಪಾಸ್ಟರ್‌ ಸೋಮು ಬಂಧನ 

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಆರೆಸ್ಸೆಸ್‌ ಸಂಸ್ಕಾರದಿಂದ ಶಕ್ತಿ ನಿರ್ಮಾಣ

ಆರೆಸ್ಸೆಸ್‌ ಸಂಸ್ಕಾರದಿಂದ ಶಕ್ತಿ ನಿರ್ಮಾಣ

akms

ಪ್ರಧಾನಿ ಭಾವಚಿತ್ರ ಸುಡಲು ಯತ್ನ:ಪೊಲೀಸರೊಂದಿಗೆ ತಳ್ಳಾಟ- ನೂಕಾಟ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.