ನವೋದ್ಯಮ ಸ್ಥಾಪನೆ; ವಿಶ್ವಕ್ಕೆ ಭಾರತ 3ನೇ ಸ್ಥಾನ

•ಟೈ ಹುಬ್ಬಳ್ಳಿಯಿಂದ ಯುವ ಉದ್ಯಮದಾರರ ಮೊದಲ ಸಮಾವೇಶ •ಅವಳಿ ನಗರದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಲು ಸಲಹೆ

Team Udayavani, Jun 23, 2019, 9:08 AM IST

hubali-tdy-5..

ಹುಬ್ಬಳ್ಳಿ: ಟೈ ಹುಬ್ಬಳ್ಳಿ ಆಯೋಜಿಸಿದ್ದ ಮೊದಲ ಯುವ ಉದ್ಯಮದಾರರ ಸಮಾವೇಶವನ್ನು ಕೆಎಲ್ಇಯ ಸಿಟಿಐಇ ನಿರ್ದೇಶಕ ಡಾ| ನಿತಿನ್‌ ಕುಲಕರ್ಣಿ ಉದ್ಘಾಟಿಸಿದರು. ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ ಸೇರಿದಂತೆ ಅನೇಕರಿದ್ದರು.

ಹುಬ್ಬಳ್ಳಿ: ನವೋದ್ಯಮಗಳ ಸ್ಥಾಪನೆ ವಿಚಾರದಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಸಮಸ್ಯೆ-ಅವಕಾಶಗಳಿಗೆ ಕೊರತೆ ಇಲ್ಲ. ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಮೂಲಕ ಅವಕಾಶಗಳನ್ನು ಯುವಕರು ತಮ್ಮದಾಗಿಸಿಕೊಳ್ಳುವ ಉದ್ಯಮ ಸಾಮರ್ಥ್ಯ ತೋರಬೇಕಾಗಿದೆ ಎಂದು ಕೆಎಲ್ಇಯ ಸಿಟಿಐಇ ನಿರ್ದೇಶಕ ಡಾ| ನಿತಿನ್‌ ಕುಲಕರ್ಣಿ ಹೇಳಿದರು.

ಟೈ ಹುಬ್ಬಳ್ಳಿಯಿಂದ ಡೆನಿಸನ್ಸ್‌ ಹೋಟೆಲ್ನಲ್ಲಿ ಶನಿವಾರ ಆಯೋಜಿಸಿದ್ದ ಮೊದಲ ಯುವ ಉದ್ಯಮದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 2012ರಲ್ಲಿ ನವೋದ್ಯಮ ಸ್ಥಾಪನೆ ವಿಚಾರದಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಇದೀಗ ಮೂರನೇ ಸ್ಥಾನಕ್ಕೇರಿದೆ. 2018ರಲ್ಲಿ ಸುಮಾರು 7,700 ನವೋದ್ಯಮ ಆರಂಭಗೊಂಡಿವೆ ಎಂದರು.

ಭಾರತದಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ನಮ್ಮ ಕಣ್ಣ ಮುಂದೆಯೇ ಅನೇಕ ಸಮಸ್ಯೆಗಳು ಕಾಣುತ್ತಿವೆ. ಅವುಗಳನ್ನು ನಾವೂ ಅನುಭವಿಸುತ್ತೇವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಚಿಂತನೆ, ಅನ್ವೇಷಣೆ, ಸಕ್ರಿಯತೆಯ ಯತ್ನ ಅವಶ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುವ ನವೋದ್ಯಮಿಗಳು ಕೇವಲ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತರಾಗದೆ, ಜಾಗತಿಕವಾಗಿ ಚಿಂತಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಸಂದರ್ಭದಲ್ಲಿ ಕೈಗೊಂಡ ಪ್ರೊಜೆಕ್ಟ್ ಮಾದರಿಗಳಿಗೆ ವಾಣಿಜ್ಯ ಉತ್ಪನ್ನ ರೂಪ ನೀಡಲು ಯತ್ನಿಸುತ್ತಿಲ್ಲ. ಕೆಎಲ್ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಾರ್ಷಿಕ 6,500ಕ್ಕೂ ಹೆಚ್ಚು ಪ್ರೊಜೆಕ್ಟ್ ಮಾದರಿಗಳು ಸಿದ್ಧಗೊಳ್ಳುತ್ತಿವೆ. ಅದರಲ್ಲಿ ಒಂದು ಸಹ ವಾಣಿಜ್ಯ ಉತ್ಪನ್ನ ರೂಪ ಪಡೆಯುತ್ತಿರಲಿಲ್ಲ. 2015ರಲ್ಲಿ ಐದು ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ಗಳಿಗೆ ವಾಣಿಜ್ಯ ಉತ್ಪನ್ನ ರೂಪ ನೀಡಿದ್ದು, ಇದೀಗ ವಿವಿಧ ಪ್ರೊಜೆಕ್ಟ್ಗಳು ವಾಣಿಜ್ಯ ಉತ್ಪನ್ನ ರೂಪ ಪಡೆಯುತ್ತಿವೆ ಎಂದು ತಿಳಿಸಿದರು.

ತರುಣ ಮಹಾಜನ ಮಾತನಾಡಿ, ಉದ್ಯಮಗಳ ಚಿಂತನೆ, ನವೋದ್ಯಮದ ಯತ್ನಕ್ಕೆ ಟೈ ಹುಬ್ಬಳ್ಳಿ ಉತ್ತಮ ವೇದಿಕೆಯಾಗಿದೆ. ಇಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಉದ್ಯಮ ಉತ್ತೇಜಕ ಪ್ರೋತ್ಸಾಹ ದೊರೆಯುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಿಸಿನೆಸ್‌ ಪ್ಲಾನ್‌ ಸ್ಪರ್ಧೆಯಲ್ಲಿ ವಿಜೇತರಾದ ಪೆಸ್ಟೀನ್‌ ಹಾಗೂ ಸ್ಪೈಲ್-5 ತಂಡಗಳಿಗೆ ಬಹುಮಾನ ನೀಡಲಾಯಿತು. ಟೈ ಹುಬ್ಬಳ್ಳಿಯ ಅಜಯ ಹಂಡಾ, ಬ್ರಿಜೇಶ ಇನ್ನಿತರರಿದ್ದರು. ವೀರನಾರಾಯಣ ಹಾಗೂ ಮುತ್ತು ನಿರೂಪಿಸಿದರು.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.