ಕುಖ್ಯಾತ ದರೋಡೆಕೋರ ಸೇರಿ ಮೂವರ ಸೆರೆ
ಏರ್‌ಗನ್, 7,500ರೂ. ನಗದು, ಬಟ್ಟೆ,ಕೃತ್ಯಕ್ಕೆ ಬಳಸಿದ್ದ ಬುಲೆಟ್ ವಾಹನ, ಎರಡು ಮೊಬೈಲ್ ವಶ
Team Udayavani, May 6, 2021, 7:49 PM IST
ಹುಬ್ಬಳ್ಳಿ: ಚಾಕುವಿನಿಂದ ಹಲ್ಲೆ ಮಾಡಿ, ಏರ್ ಗನ್ ತೋರಿಸಿ ನಗದು, ಬಟ್ಟೆಗಳನ್ನು ರಾಬರಿ ಮಾಡಿದ್ದ ಕುಖ್ಯಾತ ದರೋಡೆಕೋರ ಸೇರಿದಂತೆ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೆಟ್ಲಮೆಂಟ್ ಕರ್ಕಿ ಬಸವೇಶ್ವರ ನಗರದ ಶ್ರೀನಿವಾಸ ಟಿ. ವೀರಾಪೂರ, ಸಿದ್ದಾರ್ಥ ಊರ್ಫ್ ಕಿರಣ ಜಿ. ನವಲಗುಂದ ಹಾಗೂ ಸುಧಾಕರ ಎಸ್. ಗಬ್ಬೂರ ಬಂ ಧಿಸಿ, ಅವರಿಂದ ಏರ್‌ಗನ್, 7,500ರೂ. ನಗದು, ಬಟ್ಟೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬುಲೆಟ್ ವಾಹನ, ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ರೌಡಿಶೀಟರ್‌ಗಳಾದ ಶ್ರೀನಿವಾಸ ಮತ್ತು ಸಿದ್ಧಾರ್ಥ ಮೇಲೆ ಕೊಲೆ, ಕೊಲೆಗೆ ಯತ್ನ ಹಾಗೂ ದರೋಡೆ, ಕಳ್ಳತನ ಪ್ರಕರಣಗಳಿವೆ. ಇವರನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಯೋಜಿಸಲಾಗುವುದು ಎಂದು ಎಸ್‌ಪಿ ಬಂಧಿತರು ರವಿವಾರ ರಾತ್ರಿ ಎನ್‌ಎಚ್ ರಸ್ತೆಯ ಬೆಳಗಲಿ ಕ್ರಾಸ್ ಬಳಿ ನಗರದ ಬಂಕಾಪುರ ಚೌಕ್ ಬಳಿಯ ನಿವಾಸಿಗಳಾದ ಶಿರಾಜ ಕೋಳೂರ ಮತ್ತು ಹಾಶೀಮಪೀರ ಸವಣೂರ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಏರ್‌ಗನ್ ತೋರಿಸಿ ಅವರ ಬಳಿಯಿದ್ದ 15 ಸಾವಿರ ರೂ. ನಗದು, ಹೊಲಿಯಲು ಎಂದು ಕತ್ತರಿಸಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಬಟ್ಟೆಗಳು, ಎಟಿಎಂ ಕಾರ್ಡ್ ಇನ್ನಿತರೆ ದಾಖಲಾತಿಗಳಿದ್ದ ಪರ್ಸ್‌ಗಳನ್ನು ದೋಚಿಕೊಂಡು ಹೋಗಿದ್ದರು.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಇನ್ಸ್‌ಪೆಕ್ಟರ್ ರಮೇಶ ಗೋಕಾಕ, ಪಿಎಸ್ ಐಗಳಾದ ಪ್ರಸಾದ ಫಣೇಕರ, ಡಿ. ಚಾಮುಂಡೇಶ್ವರಿ, ಎಎಸ್‌ಐ ಬಿ.ಎಸ್. ಹುಬ್ಬಳ್ಳಿ, ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಎಂ.ಎಫ್. ಹೆಳವರ, ಮಹಾಂತೇಶ ನಾನಾಗೌಡ, ಡಾಬೋಳಿ, ಎಂ.ಎಫ್. ವಾಲೀಕಾರ, ಸಿ.ಬಿ. ಜನಗಣ್ಣವರ, ಎ.ಎ. ಠಕಾಯಿ, ಎಸ್.ಸಿ. ಲಕ್ಕಮ್ಮನವರ, ಉದಯಕುಮಾರ, ದೇವರಾಜ ಎಸ್.ಎಂ., ಮಕುºಲ ಹುಲ್ಲೂರ, ಭರಮಪ್ಪ ಎ.ಆರ್. ಎಸ್.ಐ., ವೈ.ಡಿ. ಕುಂಬಾರ, ಮಹಾಂತೇಶ ಬಾಕಿ ಅವರುಳ್ಳ ತನಿಖಾ ತಂಡ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ, ಲಾರಿಗಳನ್ನು ತಡೆದು ಚಾಲಕರು-ಸವಾರರನ್ನು ಹೆದರಿಸಿ, ಹಲ್ಲೆ ಮಾಡಿ ರಾಬರಿ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.
ಇವರ ಜತೆ ಇನ್ನಷ್ಟು ಜನರ ತಂಡ ಇರಬಹುದು. ಏರ್‌ಗನ್ ಎಲ್ಲಿಂದ ತಂದಿದ್ದರು ಸೇರಿದಂತೆ ಇನ್ನಿತರೆ ಕುರಿತು ತನಿಖೆ ನಡೆಸಲಾಗುವುದು ಎಂದರು. ಇನ್ಸ್‌ಪೆಕ್ಟರ್ ರಮೇಶ ಗೋಕಾಕ, ಪಿಎಸ್‌ಐ ಪ್ರಸಾದ ಫಣೇಕರ ಸುದ್ದಿಗೋಷ್ಠಿಯಲ್ಲಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿದ್ದಾಪುರ (ಉ.ಕ.)
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
ದ.ಕ., ಉಡುಪಿಯಲ್ಲಿ ಎಡೆಬಿಡದೆ ಸುರಿದ ಮಳೆ; ಹಲವೆಡೆ ಹಾನಿ
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್’ ಜರ್ನಿ ಶುರು
ಮಣಿಪುರ: ಧಾರಾಕಾರ ಮಳೆಗೆ ಭಾರೀ ಭೂಕುಸಿತ-14 ಮಂದಿ ಸಾವು, 60 ಜನರು ಜೀವಂತ ಸಮಾಧಿ?
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ