ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ

Team Udayavani, May 16, 2019, 1:26 PM IST

ನವಲಗುಂದ: ಸ್ಥಳೀಯ ಪುರಸಭೆಗೆ ನಾಮಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿವೆ. 5, 6, 11, 14, 15, 21ನೇ ವಾರ್ಡ್‌ಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

1ನೇ ವಾರ್ಡ್‌: ದಾವಲಬಿ ಗಫಾರಸಾಬ ಮಸಾಯಿಕ (ಕಾಂಗ್ರೆಸ್‌), ಶಬಿರಾಬೇಗಂ ದಾವಲಸಾಬ ಹುಗ್ಗಿ (ಜೆಡಿಎಸ್‌); 2ನೇ ವಾರ್ಡ್‌: ಜೀವನ ರಾಮಚಂದ್ರ ಪವಾರ (ಜೆಡಿಎಸ್‌), ಮಲ್ಲಿಕಾರ್ಜುನ ಬಸಪ್ಪ ಜಲಾದಿ (ಪಕ್ಷೇತರ); 3ನೇ ವಾರ್ಡ್‌: ಬಸೀರಅಹ್ಮದ ಇಸ್ಮಾಯಿಲ್ಸಾಬ ಹುನಗುಂದ (ಕಾಂಗ್ರೆಸ್‌); 4ನೇ ವಾರ್ಡ್‌: ದಿವಾನಸಾಬ ಮಾಬುಸಾಬ ದೇವರಿಡು (ಜೆಡಿಎಸ್‌); 7ನೇ ವಾರ್ಡ್‌: ಹನುಮಂತಪ್ಪ ಲಕ್ಷ್ಮಣ ವಾಲಿಕಾರ(ಜೆಡಿಎಸ್‌); 8ನೇ ವಾರ್ಡ್‌: ಶಿವಾನಂದ ಪಕ್ಕೀರಪ್ಪ ತಡಸಿ(ಕಾಂಗ್ರೆಸ್‌), ಅಡಿವೆಪ್ಪ ಬಸಪ್ಪ ಭಾವಿಕಟ್ಟಿ(ಬಿಜೆಪಿ); 9ನೇ ವಾರ್ಡ್‌: ದಾದಾಖಲಂದರ ಅಲ್ಲಿಸಾಬ ಜಿಗಳೂರ (ಬಿಜೆಪಿ), ಮೊದಿನಸಾಬ ಮಕ್ತುಂಸಾಬ ಶಿರೂರ(ಜೆಡಿಎಸ್‌); 10ನೇ ವಾರ್ಡ್‌: ಹುಚ್ಚಪ್ಪ ಹನುಮಂತಪ್ಪ ಭೋವಿ(ಕಾಂಗ್ರೆಸ್‌), ಹುಲಗಪ್ಪ ಸಕ್ರಪ್ಪ ಭೋವಿ(ಬಿಜೆಪಿ), ಯಲ್ಲಪ್ಪ ಹನುಮಂತಪ್ಪ ಭೋವಿ(ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

12ನೇ ವಾರ್ಡ್‌: ರೇಣುಕಾ ಅಶೋಕ ಭಜಂತ್ರಿ(ಕಾಂಗ್ರೆಸ್‌); 13ನೇ ವಾರ್ಡ್‌: ಬಸಲಿಂಗಯ್ಯ ಈರಯ್ಯ ಪೂಜಾರ(ಕಾಂಗ್ರೆಸ್‌); 16ನೇ ವಾರ್ಡ್‌: ಮಂಜುಳಾ ಫಕ್ಕಿರಪ್ಪ ಕುರಹಟ್ಟಿ(ಬಿಜೆಪಿ), ಪದ್ಮಾವತಿ ಶಂಕ್ರಪ್ಪ ಪೂಜಾರ(ಕಾಂಗ್ರೆಸ್‌); 17ನೇ ವಾರ್ಡ್‌: ಮೈಲಾರಪ್ಪ ಕುಬೇರಪ್ಪ ವೈದ್ಯ ಹಾಗೂ ಜಗದೀಶ ಯಲ್ಲಪ್ಪ ಕಾಡಮ್ಮನವರ(ಜೆಡಿಎಸ್‌), ರವಿ ಯಲ್ಲಪ್ಪ ದೊಡ್ಡಮನಿ(ಪಕ್ಷೇತರ); 18ನೇ ವಾರ್ಡ್‌: ಮೌಲಾಸಾಬ ಅಬ್ದುಲ್ಸಾಬ ಶಭಾಜಖಾನ(ಪಕ್ಷೇತರ); 19ನೇ ವಾರ್ಡ್‌: ಪ್ರಕಾಶ ಬಸಪ್ಪ ಶಿಗ್ಲಿ(ಜೆಡಿಎಸ್‌); 20ನೇ ವಾರ್ಡ್‌: ಸಂಗೀತಾ ಸಂಗಪ್ಪ ಗಾಣಿಗೇರ(ಕಾಂಗ್ರೆಸ್‌); 22ನೇ ವಾರ್ಡ್‌: ಮಂಜುಳಾಬಾಯಿ ಏಕನಾಥ ಜಾಧವ(ಕಾಂಗ್ರೆಸ್‌), ಜೈಬುನ್ನಿಸಾ ಬಾಷಾಸಾಬ ಚಾಹುಸೇನ(ಜೆಡಿಎಸ್‌), ಯಶೋಧಾ ಬಸವರಾಜ ಅಲ್ಲಾಪುರ (ಪಕ್ಷೇತರ); 23ನೇ ವಾರ್ಡ್‌: ಚಂದ್ರಲೇಖಾ ಹನುಮಂತಪ್ಪ ಮಳಗಿ(ಜೆಡಿಎಸ್‌) ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಜೆಡಿಎಸ್‌ ಪಕ್ಷದಿಂದ ಮಾತ್ರ ಅಭ್ಯರ್ಥಿಗಳಿಗೆ ಬಿ ಫಾರ್ಮ್ ನೀಡಲಾಗಿದೆ. ಹೆಚ್ಚಿನ ಪೈಪೋಟಿಯಲ್ಲಿರುವ ಕಾಂಗೆಸ್‌ ಹಾಗೂ ಬಿಜೆಪಿಯಲ್ಲಿ ಬಿ ಫಾರ್ಮ್ ನೀಡದೆ ಗೌಪ್ಯತೆ ಕಾಪಾಡಿಕೊಂಡಿದೆ.

ಶಸ್ತ್ರಾಸ್ತ್ರ ಠೇವಣಿ ಮುಂದುವರಿಕೆ
ಧಾರವಾಡ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ನವಲಗುಂದ ಪುರಸಭೆ, ಕಲಘಟಗಿ ಮತ್ತು ಅಳ್ನಾವರ ಪಪಂ ವ್ಯಾಪ್ತಿಯಲ್ಲಿ ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳ ಪರವಾನಗಿದಾರರು ತಾವು ಹೊಂದಿದ ಶಸ್ತ್ರಾಸ್ತ್ರಗಳನ್ನು ಮೆ 27ರ ವರೆಗೆ ತಮ್ಮ ಸಮೀಪದ ಪೊಲೀಸ್‌ ಠಾಣೆಯಲ್ಲಿ ಠೇವಣಿ ಇರಿಸಬೇಕೆಂದು ಆದೇಶಿಸಿರುವುದನ್ನು ತಿದ್ದುಪಡಿ ಮಾಡಿ ಮೇ 28ರಿಂದ ಮೆ 31ರ ವರೆಗೆ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಅಳ್ನಾವರದಲ್ಲಿಂದು ನಾಮಪತ್ರ ಹಬ್ಬ

 

ಅಳ್ನಾವರ: ಸ್ಥಳೀಯ ಪಪಂ ಚುನಾವಣೆಗೆ ಬುಧವಾರ ನಾಲ್ವರು ಸ್ವತಂತ್ರ ಉಮೇದುವಾರರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮೇ 9ರಿಂದ ಪ್ರಾರಂಭವಾಗಿದ್ದು ಗುರುವಾರ (ಮೇ 16) ಕೊನೆಯ ದಿನವಾಗಿದೆ. ಹದಿನೆಂಟು ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇದೆ. ಈವರೆಗೆ ಕೇವಲ ನಾಲ್ವರು ನಾಮಪತ್ರ ಸಲ್ಲಿಸಿದ್ದು, ರಾಜಕೀಯ ಪಕ್ಷಗಳಿಂದ ಯಾರೊಬ್ಬರು ಇನ್ನೂವರೆಗೂ ನಾಮಪತ್ರ ಸಲ್ಲಿಸಿಲ್ಲ. ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಹತ್ತನೇ ವಾರ್ಡ್‌ನಿಂದ ಫರಿದಅಹ್ಮದ ತೇಗೂರ ಹಾಗೂ ಎಂಟನೇ ವಾರ್ಡ್‌ನಿಂದ ಹಸನಲಿ ಶೇಖ ಪ್ರಮುಖರಾಗಿದ್ದಾರೆ. ಇವರು ಕಾಂಗ್ರೆಸ್‌ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ