Udayavni Special

ಬೆಳ್ಳಂ ಬೆಳಗ್ಗೆ ಶೌಚಾಲಯ ಜಾಗೃತಿ 


Team Udayavani, Aug 5, 2018, 4:24 PM IST

5-agust-17.jpg

ಬೆಳಗಾವಿ: ಗ್ರಾಮೀಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಆರ್‌. ಕರೆ ನೀಡಿದರು. ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ 6.30 ಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ಆವರು, ವ್ಯಕ್ತಿ ಶುಚಿತ್ವ ಕಾಪಾಡಿಕೊಂಡು ಆರೋಗ್ಯಪೂರ್ಣವಾಗಿ ಬದುಕಲು ಶೌಚಾಲಯದ ಅವಶ್ಯಕತೆ ಇದೆ. ಬಯಲು ಶೌಚಕ್ಕೆ ಹೋಗುವುದರಿಂದ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡು, ಬಳಕೆ ಮಾಡಬೇಕು ಎಂದರು.

ನಿಮ್ಮದೇ ಗ್ರಾಮ ನಿಮ್ಮದೇ ಸ್ವಚ್ಛತೆ ಎಂಬ ಸಂದೇಶವನ್ನು ನೀಡಿ ಗ್ರಾಮದಲ್ಲಿ ಈಗಾಗಲೇ ಶೌಚಾಲಯಗಳನ್ನು ಕಟ್ಟಿಸಿಕೊಂಡಿರುವ ಮಹಿಳೆಯರು ಬೇರೆಯವರಿಗೂ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಪ್ರೇರಣೆಯಾಗಬೇಕು. ಅವರ ಮನವೊಲಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕೇಂದ್ರ ಸರಕಾರದ ಸ್ವತ್ಛ ಭಾರತ ಮಿಷನ್‌ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣದ ಗುರಿ ನೀಡಿದ್ದು, ಪ.ಜಾ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ ರೂ.15 ಸಾವಿರ ಹಾಗೂ ಉಳಿದ ಫಲಾನುಭವಿಗಳಿಗೆ ರೂ.12 ಸಾವಿರ ಸಹಾಯಧನ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸಮಾಲೋಚನೆ ನಡೆಸಿದ ಅವರು, ಸತ್ಯಾಗ್ರಹದ ಮೂಲಕ ತನ್ನ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ವಿದ್ಯಾರ್ಥಿನಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶೌಚಾಲಯದ ಮಹತ್ವ ಮತ್ತು ಬಯಲು ಶೌಚಕ್ಕೆ ಹೋಗುವುದರಿಂದ ಆರೋಗ್ಯದ ಮೇಲೆ ಆಗುವಂತಹ ತೊಂದರೆಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದ ಸಿಇಒ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಮತ್ತು ಅವುಗಳನ್ನು ಬಳಸುವಂತೆ ಪೋಷಕರು ಹಾಗೂ ಹಿರಿಯರ ಮನವೊಲಿಸಬೇಕು ಎಂದರು.

ನಂತರ ಕರ್ನಾಟಕ ಕಸ್ತೂರಿಬಾ ಬಾಲಿಕಾ ವಸತಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ಬಾಲ್ಯ ವಿವಾಹ ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು, ಪೋಷಕರು ಒತ್ತಾಯದಿಂದ ಬಾಲ್ಯವಿವಾಹ ಮಾಡುತ್ತಿದ್ದರೆ ನೀವು ಶಿಕ್ಷಣವನ್ನು ಪೂರೈಸಿಯೇ ಮದುವೆಯಾಗುವುದಾಗಿ ತಿಳಿಸಬೇಕು. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಎಂದು ತಿಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ, ರಾಮದುರ್ಗ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಜಶೇಖರ ನಿಡೋನಿ, ಸಹಾಯಕ ನಿರ್ದೇಶಕ ಸೋಮರಡ್ಡಿ ಹೊಂಗಲ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

mandya

ಮಂಡ್ಯದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: 287 ಹೊಸ ಪ್ರಕರಣ; 377 ಮಂದಿ ಗುಣಮುಖ

suresh

ಶಾಲೆಗಳನ್ನು ತೆರೆಯುವ ಧಾವಂತ ಇಲ್ಲ; ಮಕ್ಕಳ ಹಿತವೇ ಮುಖ್ಯ: ಸುರೇಶ್ ಕುಮಾರ್

mumbai-punjab

ಮುಂಬೈ-ಪಂಜಾಬ್ ಸೆಣಸಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಹುಲ್ ಬಳಗ

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಯಾನಲ್‌ ಕುಸಿತ ಹೆಚ್ಚಿದ ಆತಂಕ ! BRTS‌ ಸೇತುವೆ ಕಾಮಗಾರಿ ಕಳಪೆ ಮತ್ತೂಮ್ಮೆ ಸಾಬೀತು

ಪ್ಯಾನಲ್‌ ಕುಸಿತ ಹೆಚ್ಚಿದ ಆತಂಕ ! BRTS‌ ಸೇತುವೆ ಕಾಮಗಾರಿ ಕಳಪೆ ಮತ್ತೂಮ್ಮೆ ಸಾಬೀತು

6 ತಿಂಗಳ ಬಳಿಕ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಬಸ್‌ ಸಂಚಾರ ಪುನರ್‌ ಆರಂಭ

6 ತಿಂಗಳ ಬಳಿಕ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಬಸ್‌ ಸಂಚಾರ ಪುನರ್‌ ಆರಂಭ

ಎನ್‌ಟಿಪಿಸಿ ಸಹಯೋಗ; ಕಸದಿಂದ ರಸ :ತ್ಯಾಜ್ಯದಿಂದ ಟೊರಿಫೈಡ್‌ ಚಾರ್‌ಕೋಲ್‌ ತಯಾರಿಕಾ ಘಟಕ

ಎನ್‌ಟಿಪಿಸಿ ಸಹಯೋಗ; ಕಸದಿಂದ ರಸ :ತ್ಯಾಜ್ಯದಿಂದ ಟೊರಿಫೈಡ್‌ ಚಾರ್‌ಕೋಲ್‌ ತಯಾರಿಕಾ ಘಟಕ

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು



ಹೊಸ ಸೇರ್ಪಡೆ

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

832

ʼಇಂಗ್ಲಿಷ್‌ ಚಾನೆಲ್‌ʼ ಈಜಿದ ಏಷ್ಯಾದ ಮೊದಲ ಮಹಿಳೆ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

ಹಾಜಿಕ್‌ ಕಾಜಿ

ಎಳವೆಯಲ್ಲಿ ಪರಿಸರ ಸರಂಕ್ಷಣೆ ಕುರಿತು ಅರಿವು ಮೂಡಿಸಲು ಹೊರಟ ಚಿನ್ನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.