Udayavni Special

ಬಿಸರಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್‌ ಗೋಳು

Team Udayavani, Nov 19, 2019, 11:57 AM IST

huballi-tdy-1

ಕಲಘಟಗಿ: ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಜರುಗಿರುವ ವಿದ್ಯುತ್‌ ಸಮಸ್ಯೆಗಳಿಗೆ ಇದುವರೆಗೂ ಮುಕ್ತಿ ದೊರಕಿಲ್ಲ. ಇದರಿಂದ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವುದರ ಜೊತೆಗೆ ಜೀವ ಭಯದಲ್ಲಿ ಬದುಕುವಂತಾಗಿದೆ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಾಲಿರುವ ವಿದ್ಯುತ್‌ ಕಂಬಗಳು ಹಾಗೂ ವಿದ್ಯುತ್‌ ತಂತಿಗಳನ್ನು ಇಂದಿಗೂ ಸರಿ ಮಾಡುವಲ್ಲಿ ಹೆಸ್ಕಾಂ ಇಲಾಖೆ ವಿಫಲವಾಗಿದೆ. ತಾಲೂಕಿನ ಬಿಸರಳ್ಳಿ ಗ್ರಾಮದ ರೈತ ಕಲ್ಲಯ್ಯಸ್ವಾಮಿ ಕಂದ್ಲಿ ಎಂಬುವರ ಹೊಲದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆಯೇ ವಿದ್ಯುತ್‌ ಪರಿವರ್ತಕ ಕಂಬದ ಸಹಿತ ಬಿದ್ದಿರುವುದನ್ನು ಇದುವರೆಗೂ ಸರಿ ಮಾಡಿಲ್ಲ. ಇದರಿಂದಾಗಿ ರೈತ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ಈ ಪರಿವರ್ತಕ ಹಾಗೂ ಕಂಬದ ಮೂಲಕ ಹಾದು ಹೋಗಿರುವ ಇತರೇ ಲೈನ್‌ ಗಳು ಸಂಪೂರ್ಣ ನೆಲಕಚ್ಚಿರುವುದರಿಂದ ರೈತ ಬೆಳೆದ ಗೋವಿನಜೋಳ ಬೆಳೆಯೂ ನಾಶವಾಗಿದೆ. ಜಮೀನಿನಲ್ಲಿ ದೈನಂದಿನ ಕೆಲಸಗಳಿಗೆ ತಮ್ಮದೇ ಹೊಲದ ಹತ್ತಿರ ಬರಲೂ ಜೀವದ ಹಂಗು ತೊರೆದು ಬರಬೇಕಾದ ಅನಿವಾರ್ಯತೆ ರೈತನದ್ದಾಗಿದೆ. ಇವರ ಹೊಲಕ್ಕೆ ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ.

ಅಪಾಯಕ್ಕೆ ಆಹ್ವಾನ: ಪರಿವರ್ತಕದ ಕಥೆ ಒಂದೆಡೆಯಾದರೆ, ಅಪಾಯಕ್ಕೆ ಆಹ್ವಾನ ನೀಡುವ ವಾಲಿದ ಕಂಬಗಳು ಇನ್ನೊಂದೆಡೆ. ದಿನಂಪ್ರತಿ ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಬಿಸರಳ್ಳಿಯಿಂದ ಹಿರೇಹೊನ್ನಿಹಳ್ಳಿ ಮಾರ್ಗವಾಗಿ ಧಾರವಾಡಕ್ಕೆ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಈ ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್‌ ಕಂಬಗಳು ಸಂಪೂರ್ಣ ವಾಲಿದ್ದು, ಜೀವ ಬಲಿಗೆ ಕಾಯುವಂತಿವೆ. ಯಾವ ಕ್ಷಣಕ್ಕಾದರೂ ವಿದ್ಯುತ್‌ ತಂತಿಗಳು ವಾಹನಗಳ ಮೇಲೆ ಹರಿದುಬೀಳುವ ಸನ್ನಿವೇಶವಿದೆ. ಇಲ್ಲಿನ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.

ನಿರಂತರ ಬೆಳಗದ ಜ್ಯೋತಿ: ತಾಲೂಕಿನ ಬಹುತೇಕ ಭಾಗಗಳಲ್ಲಿ ನಿರಂತರ ಜ್ಯೋತಿಯ ಕಾಮಗಾರಿಗೆ ಇಲಾಖೆಯವರೇ ಬಳಸಿರುವ ಉಪಕರಣಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿವೆ. ಇದರಿಂದಾಗಿ ನಿರಂತರವಾಗಿ ಜ್ಯೋತಿ ಬಳಸುವುದನ್ನು ಬಿಟ್ಟು ಕಾರ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಗ್ರಾಮೀಣ ಭಾಗದ ಜನರು ಬೇಸತ್ತು ಹೋಗಿದ್ದಾರೆ.

ನಿರಂತರ ಜ್ಯೋತಿ ಮಾರ್ಗದುದ್ದಕ್ಕೂ ಬಳಸಿರುವ ಇನ್ಸುಲೇಟರ್‌ಗಳು ಹಾಗೂ ಡಿಸ್ಕ್ಗಳು ಕಳಪೆ ಮಟ್ಟದ್ದಾಗಿರುವುದರಿಂದ ವಿದ್ಯುತ್‌ ಸರಬರಾಜು ಮೇಲಿಂದ ಮೇಲೆ ಸ್ಥಗಿತಗೊಳ್ಳುತ್ತಿದೆ. ಪಾಲಿಮಾರ್‌ ಇನ್ಸುಲೇಟರ್‌ ಹಾಗೂ ಪಾಲಿಮಾರ್‌ ಸ್ಟ್ರೇನ್‌ಗಳನ್ನು ಬಳಸುವುದರಿಂದ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಬಹುದೆಂಬುದು ತಾಲೂಕಿನ ಬಹುತೇಕ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ.

ನಿಷ್ಕಾಳಜಿ ಪರಮಾವಧಿ: ಕೆಲವೆಡೆ ಹೊಸದಾದ ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದು, ಅವೆಲ್ಲವೂ ಅವೈಜ್ಞಾನಿಕವಾಗಿ ನಿರ್ಮಿಸಿ ಸರಬರಾಜು ಮಾಡಲಾಗಿದೆ. ನೂತನ ಕಂಬಗಳ ಮೇಲ್ಮೈ ತುಂಬಾ ನುಣುಪಾಗಿರುವುದರಿಂದ ವಿದ್ಯುತ್‌ ಸರಬರಾಜು ನಿಲುಗಡೆಗೊಂಡಾಗ ಅದನ್ನು ಸರಿಪಡಿಸಲು ಪವರ್‌ಮನ್‌ (ಮಾರ್ಗಕರ್ಮಿ)ಗಳು ಕಂಬ ಹತ್ತಲು ಹರಸಾಹಸ ಪಡಬೇಕಾಗಿದೆ. ಜಿಲ್ಲಾ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ನಿಷ್ಕಾಳಜಿ ಮೇಲಿನ ಎಲ್ಲ ಸಮಸ್ಯೆಗಳಲ್ಲಿ ಜಾಹೀರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ವಲ್ಪ ಈ ಕಡೆಯೂ ಗಮನ ಹರಿಸುವರೇ ಕಾದುನೋಡಬೇಕಿದೆ.

ನಾಲ್ಕು ತಿಂಗಳ ಹಿಂದೆಯೇ ಬಿದ್ದ ಟಿಸಿ ಸರಿ ಮಾಡಾಕ ಲೈನ್‌ ಮನ್‌ ಹಿಂದೊಮ್ಮೆ ಬಂದ ನಿಲ್ಸಾಕ್‌ ನೋಡಿ ಹೋಗ್ಯಾನ್ರಿ. ಮತ್ತ ಇನ್ನೂ ತನಕ ಯಾರೂ ಬಂದೇ ಇಲ್ರಿ. ನಮ್ಮ ಹೊಲದಾಗ ಕೆಲ್ಸಾ ಮಾಡಾಕ ಕೂಲಿಗಳು ಬರಲಿಕ್ಕೂ ಹೆದರಾಕ್ಕತ್ತಾರ್ರೀ.-ಕಲ್ಲಯ್ಯಸ್ವಾಮಿ ಕಂದ್ಲಿ, ಹೊಲದ ಮಾಲೀಕ

-ಪ್ರಭಾಕರ ನಾಯಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Car-Quarrel

ಬೀದಿಗೆ ಬಂದ ಗಂಡ ಹೆಂಡತಿ ಜಗಳ ; ನಡು ರಸ್ತೆಯಲ್ಲಿ ಪತಿಯ ರೇಂಜ್ ರೋವರ್ ಗೆ ಪತ್ನಿ ಅಟ್ಯಾಕ್!

ಉಡುಪಿಯಲ್ಲಿಂದು 53 ಮಂದಿಗೆ ಸೋಂಕು ದೃಢ: ಇನ್ನೂ ಪರೀಕ್ಷೆಗೆ ಬಾಕಿಯಿದೆ 1749 ಸ್ಯಾಂಪಲ್ಸ್

ಉಡುಪಿಯಲ್ಲಿಂದು 53 ಮಂದಿಗೆ ಸೋಂಕು ದೃಢ: ಇನ್ನೂ ಪರೀಕ್ಷೆಗೆ ಬಾಕಿಯಿದೆ 1749 ಸ್ಯಾಂಪಲ್ಸ್

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಂಪರ್ ಬೆಳೆ ಬರುವ ಸಾಧ್ಯತೆಯಿದೆ: ಬಿಎಸ್ ವೈ

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಂಪರ್ ಬೆಳೆ ಬರುವ ಸಾಧ್ಯತೆಯಿದೆ: ಬಿಎಸ್ ವೈ

ಲಡಾಖ್ ಆಯ್ತು ಈಗ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಗೆ ಸೇನಾ ವರಿಷ್ಠ ನರಾವಣೆ ಭೇಟಿ

ಲಡಾಖ್ ಆಯ್ತು ಈಗ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಗೆ ಸೇನಾ ವರಿಷ್ಠ ನರಾವಣೆ ಭೇಟಿ

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

ರಾಮನಗರದ ಕೋವಿಡ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ಭೇಟಿ

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

28 ವರ್ಷದ ಯುವ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ ವಿಧಿವಶ; ಸಾಯೋ ಮುನ್ನ ಬರೆದ ಪೋಸ್ಟ್ ವೈರಲ್

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜು.15 ರಿಂದ ಹತ್ತು ದಿನ ಧಾರವಾಡ ಜಿಲ್ಲೆ ಲಾಕ್ ಡೌನ್

ಜು.15 ರಿಂದ ಹತ್ತು ದಿನ ಧಾರವಾಡ ಜಿಲ್ಲೆ ಲಾಕ್ ಡೌನ್

ಚಂದಗಡ ಕಬ್ಬಿಗೆ ತಗುಲಿತು ಕೆಂಪುಚುಕ್ಕೆ ರೋಗ

ಚಂದಗಡ ಕಬ್ಬಿಗೆ ತಗುಲಿತು ಕೆಂಪುಚುಕ್ಕೆ ರೋಗ

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

ಆರೋಗ್ಯ ಮಾಹಿತಿ ಕಾರ್ಯ ಸಮರ್ಪಕವಾಗಿ ಮಾಡಿ

ಆರೋಗ್ಯ ಮಾಹಿತಿ ಕಾರ್ಯ ಸಮರ್ಪಕವಾಗಿ ಮಾಡಿ

ಮತ್ತೆ 77 ಮಂದಿಗೆ ಸೋಂಕು ದೃಢ

ಮತ್ತೆ 77 ಮಂದಿಗೆ ಸೋಂಕು ದೃಢ

MUST WATCH

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

ಹೊಸ ಸೇರ್ಪಡೆ

Car-Quarrel

ಬೀದಿಗೆ ಬಂದ ಗಂಡ ಹೆಂಡತಿ ಜಗಳ ; ನಡು ರಸ್ತೆಯಲ್ಲಿ ಪತಿಯ ರೇಂಜ್ ರೋವರ್ ಗೆ ಪತ್ನಿ ಅಟ್ಯಾಕ್!

ಉಡುಪಿಯಲ್ಲಿಂದು 53 ಮಂದಿಗೆ ಸೋಂಕು ದೃಢ: ಇನ್ನೂ ಪರೀಕ್ಷೆಗೆ ಬಾಕಿಯಿದೆ 1749 ಸ್ಯಾಂಪಲ್ಸ್

ಉಡುಪಿಯಲ್ಲಿಂದು 53 ಮಂದಿಗೆ ಸೋಂಕು ದೃಢ: ಇನ್ನೂ ಪರೀಕ್ಷೆಗೆ ಬಾಕಿಯಿದೆ 1749 ಸ್ಯಾಂಪಲ್ಸ್

ಎಲೆಕ್ಟ್ರಾನಿಕ್ಸ್ ವಸ್ತುಗಳ ದಾಸ್ತಾನು ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ!

ಎಲೆಕ್ಟ್ರಾನಿಕ್ಸ್ ವಸ್ತುಗಳ ದಾಸ್ತಾನು ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ!

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಂಪರ್ ಬೆಳೆ ಬರುವ ಸಾಧ್ಯತೆಯಿದೆ: ಬಿಎಸ್ ವೈ

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಂಪರ್ ಬೆಳೆ ಬರುವ ಸಾಧ್ಯತೆಯಿದೆ: ಬಿಎಸ್ ವೈ

ಲಡಾಖ್ ಆಯ್ತು ಈಗ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಗೆ ಸೇನಾ ವರಿಷ್ಠ ನರಾವಣೆ ಭೇಟಿ

ಲಡಾಖ್ ಆಯ್ತು ಈಗ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಗೆ ಸೇನಾ ವರಿಷ್ಠ ನರಾವಣೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.