ಜಲಕಳೆ ನಾಶಕ್ಕೆ ಉಣಕಲ್ಲ ಕೆರೆ ನೀರು ತೆರವು


Team Udayavani, Dec 29, 2019, 10:15 AM IST

huballi-tdy-1

ಹುಬ್ಬಳ್ಳಿ: ಉಣಕಲ್ಲ ಕೆರೆಯಲ್ಲಿನ ಜಲಕಳೆ ಅಂತರಗಂಗೆ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕೆರೆಯಲ್ಲಿ 3 ಅಡಿ ನೀರನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಂತರ ನೀರು ಸ್ವತ್ಛಗೊಳಿಸುವ ಜಲಚರಗಳನ್ನು ತಂದು ಕೆರೆಯಲ್ಲಿ ಬಿಡುವ ಚಿಂತನೆ ನಡೆದಿದೆ.

ಪೈಪ್‌ಗಳ ಮೂಲಕ ನೀರನ್ನು ತೆರವು ಮಾಡಲಾಗುತ್ತಿದೆ. ಕೆರೆಯ ದಡದಲ್ಲಿ ಸಂಗ್ರಹಗೊಂಡ ಕಸವನ್ನು ತೆಗೆದರೆ ಅಲ್ಲಿ ಅಂತರಗಂಗೆ ಬೆಳೆಯುವುದನ್ನು ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ ನಂತರ ಕೆರೆಯ ಮೂರು ಅಡಿ ನೀರನ್ನು ತೆರವು ಮಾಡುವ ಕಾರ್ಯ ಸಾಗಿದೆ. ಈಗಾಗಲೇ 1 ಅಡಿ ನೀರನ್ನು ತೆರವು ಮಾಡಲಾಗಿದೆ. ಇನ್ನೂ 15-20 ದಿನಗಳಲ್ಲಿ ನೀರನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಶುರು ಮಾಡುವ ಸಾಧ್ಯತೆಯಿದೆ.

ಹೂಳು ತೆಗೆಯಲು ದೇಶಪಾಂಡೆ ಫೌಂಡೇಶನ್‌ ಹಿತಾಚಿ ಯಂತ್ರವನ್ನು ನೀಡಿದ್ದು, ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಕೆರೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಲಾಗುತ್ತಿದೆ. 4 ಇಂಚು ಅಗಲದ ಸುಮಾರು 47 ಪೈಪ್‌ ಗಳನ್ನು ಬಳಕೆ ಮಾಡಿಕೊಂಡು ಕೆರೆಯಲ್ಲಿನ ನೀರನ್ನು ನಾಲಾಕ್ಕೆ ಬಿಡಲಾಗುತ್ತಿದೆ. ಕಳೆದ 12 ದಿನಗಳಿಂದ ಪೈಪ್‌ ಗಳ ಮೂಲಕ ತೆರವು ಮಾಡಿದರೂ ಕೆರೆಯಲ್ಲಿನ 1 ಅಡಿ ನೀರು ಮಾತ್ರ ಕಡಿಮೆಯಾಗಿದೆ. ಆದರೆ ಹಿತಾಚಿ ಕೆರೆಯ ದಡಕ್ಕಿಳಿಯಲು ಅನುಕೂಲವಾಗುವ ಮಟ್ಟಿಗೆ ನೀರನ್ನು ಹೊರಗೆ ಬಿಡಲಾಗುವುದು.ಒಂದೆಡೆ ಕೆರೆಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದರೆ ಇನ್ನೊಂದೆಡೆ ಬೈರಿದೇವರಕೊಪ್ಪ, ನವನಗರ ಭಾಗದಿಂದ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ. ಇದನ್ನು ತಡೆಯುವುದು ಅವಶ್ಯಕವಾಗಿದೆ.

ಮಹಾನಗರ ಪಾಲಿಕೆ, ದೇಶಪಾಂಡೆ ಪ್ರತಿಷ್ಠಾನದೊಂದಿಗೆ ಹಲವಾರು ಸಂಘ-ಸಂಸ್ಥೆಗಳು ಕೆರೆ ಅಭಿವೃದ್ಧಿಗೆ ಕೈಜೋಡಿಸಿವೆ. ಅದರಲ್ಲಿ ಮುಖ್ಯವಾಗಿರುವುದು ಉಣಕಲ್ಲ ಕೆರೆ ಅಭಿವೃದ್ಧಿ ಸಂಘ. ಅಂತರಗಂಗೆ ತೆರವು ಕಾರ್ಯಾಚರಣೆ ಅಭಿಯಾನ ಕೈಗೊಂಡಿದ್ದ ಸಂಘದ ಕಾರ್ಯಕ್ಕೆ ಹಲವು ಸಂಸ್ಥೆಗಳು ಸಹಕರಿಸುತ್ತಿವೆ. ಯುವಾ ಬ್ರಿಗೇಡ್‌, 99 ಬೈಕ್‌ ರೇಸರ್ಸಂ ಘ, ಶಾಂತೇಶ್ವರ ಗೆಳೆಯರ ಬಳಗ, ಭಗತ್‌ಸಿಂಗ್‌ ಸೇವಾ ಸಂಸ್ಥೆ ಕೆರೆ ಅಭಿವೃದ್ಧಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿವೆ.

ಕೆರೆ ಜಲಕಳೆಯಿಂದ ಮುಕ್ತಗೊಂಡು, ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲು ಕ್ರಮ ಕೈಗೊಂಡ ನಂತರ, ಮೀನು ಹಿಡಿಯುವುದನ್ನು ನಿಷೇಧಿಸಿದ ನಂತರ ಉಣಕಲ್ಲ ಕೆರೆ ಅಭಿವೃದ್ಧಿ ಸಂಘದ ವತಿಯಿಂದ ನೀರನ್ನು ಸ್ವತ್ಛವಾಗಿಡಲು ಸಹಕರಿಸುವ ಸಕ್ಕರ್‌ಮೌತ್‌ ಕ್ಯಾಟ್‌ ಫಿಶ್‌, ಮಾಸ್ಕಿಟೊ ಫಿಶ್‌, ಸಿಯಾಮೆಸ್‌ ಅಲ್ಗೆ ಈಟರ್‌, ಗ್ರಾಸ್‌ ಕಾರ್ಪ್‌ ಮೊದಲಾದ ಜಲಚರಗಳನ್ನು ಕೆರೆಗೆ ಬಿಡಲು ಚಿಂತನೆ ನಡೆದಿದೆ. ಅವುಗಳನ್ನು ಮಂಡ್ಯ ಹಾಗೂ ಮೈಸೂರಿನಿಂದ ತರಲು ನಿರ್ಧರಿಸಿದ್ದು, ಸಾರಿಗೆ ಸಂಸ್ಥೆಯವರೊಬ್ಬರು ಉಚಿತವಾಗಿ ಜಲಚರಗಳನ್ನು ಸಾಗಣೆ ಮಾಡಲು ಒಪ್ಪಿಕೊಂಡಿದ್ದಾರೆ.

ಉಣಕಲ್ಲ ಕೆರೆಯನ್ನು ಸ್ಮಾರ್ಟ್‌ ಸಿಟಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಉದ್ಯಾನವನ್ನು ಅಭಿವೃದ್ಧಿಪಡಿಸಲು, ಕೆರೆಯಲ್ಲಿ ಜಲಕ್ರೀಡೆಗಳ ಸೌಲಭ್ಯ ಕಲ್ಪಿಸುವ ವಿನ್ಯಾಸ ಮಾಡಲಾಗುತ್ತಿದೆ. ಜಲಶುದ್ಧೀಕರಿಸುವ ಘಟಕ ಶೀಘ್ರದಲ್ಲಿ ಆರಂಭಿಸುವುದು ಅಗತ್ಯ. ಒಟ್ಟಿನಲ್ಲಿ ಉಣಕಲ್ಲ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸುವುದು ಅವಶ್ಯಕವಾಗಿದೆ.

ಮಹಾನಗರ ಪಾಲಿಕೆ ವತಿಯಂದ ಉಣಕಲ್ಲ ಕೆರೆಯ ನೀರನ್ನು ತೆರವುಗೊಳಿಸಲಾಗುತ್ತಿದೆ. ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಿವೆ. ಕೊಳಚೆ ನೀರು ಕೆರೆಯನ್ನು ಸೇರದಂತೆ ತಡೆಯುವುದು ಅವಶ್ಯಕವಾಗಿದೆ. ದಡದಲ್ಲಿರುವ ಕಸವನ್ನು ತೆರವು ಮಾಡಿದರೆ ಅಂತರಗಂಗೆ ಬೆಳೆಯದಂತೆ ತಡೆಯಬಹುದಾಗಿದೆ. ಉಣಕಲ್ಲ ಕೆರೆ ಸ್ಮಾರ್ಟ್‌ಸಿಟಿ ಯೋಜನೆ ವ್ಯಾಪ್ತಿಗೆ ಸೇರಿರುವುದು ಖುಷಿಯ ಸಂಗತಿ. ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ ಕೆರೆಯನ್ನು ಪ್ರವಾಸಿ ತಾಣವಾಗಿಸಬೇಕಿದೆ. ರಾಜಣ್ಣ ಕೊರವಿ, ಪಾಲಿಕೆ ಮಾಜಿ ಸದಸ್ಯ

 

-ವಿಶ್ವನಾಥ ಕೋಟಿ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.