ಹುಡಾದಿಂದ ಅನಧಿಕೃತ ಲೇಔಟ್ ತೆರವು
Team Udayavani, Jan 29, 2021, 4:39 PM IST
ಧಾರವಾಡ: ಕೆಲ ದಿನಗಳ ಹಿಂದೆಯಷ್ಟೇ ಹೊಸಯಲ್ಲಾಪೂರ ಬಳಿಯ ಅಕ್ರಮ ಲೇಔಟ್ ತೆರವು ಮಾಡಿದ್ದ ಹುಡಾ ಅಧಿಕಾರಿಗಳು ಗುರುವಾರ ಕೆಲಗೇರಿ ಬಳಿಯ ಕೆಲ ಅನಧಿಕೃತ ಲೇಔಟ್ ತೆರವು ಮಾಡಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಹುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಗೇರಿ ಸೇತುವೆ ಕೆಳಗಿನ ಭಾಗದಲ್ಲಿ ಸೃಷ್ಟಿಯಾಗಿದ್ದ ಹನುಮಂತಗೌಡ, ಪವಾರ, ಮಂಟೇದ, ಮಾಳಗಿ ಸೇರಿದಂತೆ ಹಲವರ ಹೆಸರುಗಳಲ್ಲಿದ್ದ ಅನಧಿಕೃತ ಲೇಔಟ್‌ಗಳಲ್ಲಿರುವ ಕಲ್ಲು, ವಿದ್ಯುತ್ ದೀಪಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಇದನ್ನೂ ಓದಿ:ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿ ಗೆ ಕರೆ
ಕೆಲಗೇರಿ ಸುತ್ತಮುತ್ತ ಚಂದ್ರಶೇಖರ ಕೊಂಗಿ, ಭೀಮಪ್ಪ ಕಮತೆ, ಹರೀಶ ರಾಜೇಂದ್ರ ಸೋಳಂಕಿ, ಹನುಮಂತಗೌಡ ಫಕ್ಕೀರಗೌಡ್ರು, ದೀಪಕ ಪವಾರ, ಶಂಕ್ರಪ್ಪ ಹವಳದ, ಮಲ್ಲಿಕಾರ್ಜುನ ಮಿಠಾಯಿ, ತಿಪ್ಪವ್ವ ಮಂಟೇದ, ಭೀಮಪ್ಪ ಮಾಳಗಿ, ಗೌರಿಶಸಿಂಗ್ ನವಲೂರ ಎಂಬುವರು ಅನ ಧಿಕೃತವಾಗಿ ವಿನ್ಯಾಸ ರಚಿಸಿದ್ದರು. ಈ ಎಲ್ಲ ಲೇಔಟ್‌ಗಳಿಗೆ 2 ಬಾರಿ ನೋಟಿಸ್ ನೀಡಿದರೂ ಅದಕ್ಕೆ ಯಾವುದೇ ಸ್ಪಂದನೆದೊರೆಯಲಿಲ್ಲ. ಅದಕ್ಕಾಗಿ ತೆರವುಮಾಡಲಾಗಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸ್ಪಷ್ಟಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಉಪನಗರ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.