ಅನಾಥ ಮಕ್ಕಳ ಆಶ್ರಯಕ್ಕೆ ಮುಂದಾದ ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷ ಶ್ರೀ
Team Udayavani, May 24, 2021, 5:05 PM IST
ಧಾರವಾಡ: ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತ ಊಟ, ವಸತಿಯ ಜತೆಗೆ ಪಿಯುಸಿವರೆಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊರಲು ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠ ಮುಂದಾಗಿದೆ.
ಈ ಬಗ್ಗೆ ನಿರ್ಧಾರ ಪ್ರಕಟಿಸಿರುವ ಶ್ರೀಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟು ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಆಶ್ರಯ ನೀಡಲಾಗುವುದು. ಅನಾಥರಾಗಿರುವ ಮಕ್ಕಳಾಗಲಿ ಅಥವಾ ಪರಿಚಯಸ್ಥರು ಶ್ರೀಮಠಕ್ಕೆ ಸಂಪರ್ಕಿಸಿದರೆ ಆ ಮಕ್ಕಳಿಗೆ ಉಚಿತವಾಗಿ ಊಟ, ವಸತಿ ನೀಡುವುದರ ಜತೆಗೆ ಪಿಯುಸಿವರೆಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಶ್ರೀಮಠ ನಿರ್ವಹಣೆ ಮಾಡಲಿದೆ ಎಂದು ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆಯು ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೊಡೆತ ನೀಡುತ್ತಿದ್ದು, ಕೋವಿಡ್‌ಗೆ ಜನ ಬಲಿಯಾಗುತ್ತಿದ್ದಾರೆ. ಇದರಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ವಸತಿ, ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಶ್ರೀಮಠ ಈ ನಿರ್ಣಯ ಕೈಗೊಂಡಿದೆ. ಹೀಗಾಗಿ ಆಶ್ರಯ ಬಯಸಿ ಬರುವ ಮಕ್ಕಳಿಗೆ ಶ್ರೀಮಠ ಆಶ್ರಯ ನೀಡಲಿದೆ ಎಂದಿದ್ದಾರೆ. ಆಸಕ್ತರು ನೇರವಾಗಿ ಶ್ರೀಮಠಕ್ಕೆ ಆಗಮಿಸಬಹುದು. ಅಥವಾ ನೇರವಾಗಿ ಶ್ರೀಗಳನ್ನೇ ಮೊ: 9739373000 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್
ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್, ಪಿಟಿ ಉಷಾ, ರಾಜಸಭೆಗೆ ನಾಮನಿರ್ದೇಶನ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್