Udayavni Special

ಕಳಸಾ ಕಾಮಗಾರಿಗಾಗಿ ಮತ್ತೂಂದು ಹಂತದ ಹೋರಾಟ

Team Udayavani, Feb 4, 2021, 3:13 PM IST

viresh

ಹುಬ್ಬಳ್ಳಿ: ಮಹದಾಯಿ ನ್ಯಾಯಾಧಿಕರಣ ತೀರ್ಪು ಹಾಗೂ ಸುಪ್ರೀಂಕೋರ್ಟ್‌ ಸೂಚನೆಯಂತೆ ರಾಜ್ಯ ಸರಕಾರ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿ ಆರಂಭಿಸಲು ಮುಂದಾಗದಿದ್ದರೆ ಬೆಂಗಳೂರು ಚಲೋ ಸೇರಿದಂತೆ ಮತ್ತೂಂದು ಹಂತದ ಹೋರಾಟ ಆರಂಭಿಸಲಾಗುವುದು ಎಂದು ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾ ಧಿಕರಣ ಮಹದಾಯಿ ನದಿ ನೀರು ಹಂಚಿಕೆ  ಮಾಡಿದ್ದು, ರಾಜ್ಯಕ್ಕೆ 13.5 ಟಿಎಂಸಿ ಅಡಿಯಷ್ಟು ನೀರಿನ ಪಾಲು ದೊರೆತಿದೆ. ಸುಪ್ರೀಂಕೋರ್ಟ್‌ ಸಹ ಕಾಮಗಾರಿ ಆರಂಭಕ್ಕೆ ಹಸಿರು  ನಿಶಾನೆ ತೋರಿದೆ. ಇಷ್ಟಾದರೂ ರಾಜ್ಯ ಸರಕಾರ ಕಾಮಗಾರಿ ಆರಂಭಕ್ಕೆ ಮುಂದಾಗದಿರುವುದು ಖಂಡನೀಯ. ತಾವು ಅಧಿಕಾರಕ್ಕೆ  ಬಂದರೆ 24 ಗಂಟೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ ಪಡಿಸಿ, ರಾಜ್ಯದ ಪಾಲಿನ ನೀರು ಬಳಕೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಕಾಮಗಾರಿ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ.

ಬಜೆಟ್‌ನಲ್ಲಿ 500 ಕೋಟಿ ರೂ.ಹಣ ಇದಕ್ಕಾಗಿ ತೆಗೆದಿರಿಸಿದ್ದಾಗಿ ಹೇಳಿದ್ದರೂ ಕಾಮಗಾರಿ ಆರಂಭಕ್ಕೆ ಕೈಗೊಂಡ ಕ್ರಮ ಏನೆಂಬುದನ್ನು  ಸರಕಾರ ಸ್ಪಷ್ಟಪಡಿಸಲಿ ಎಂದರು. ಕಳಸಾ-ಬಂಡೂರಿ ನಾಲಾಗಳ ಕಾಮಗಾರಿ ಆರಂಭ ಕುರಿತಾಗಿ ರಾಜ್ಯ ಸರಕಾರ ಸ್ಪಷ್ಟ ಭರವಸೆ  ನೀಡಬೇಕು. ಇಲ್ಲವಾದರೆ ಇದೇ ತಿಂಗಳು ರೈತರ ಸಭೆ ಕರೆದು ಬೆಂಗಳೂರು ಚಲೋ ಹೋರಾಟ ಕೈಗೊಳ್ಳಲಾಗುವುದು.  ಬೆಂಗಳೂರಿನಲ್ಲಿಯೇ ಹೋರಾಟ ಮುಂದುವರಿಸಲಾಗುವುದು. ಬೇಡಿಕೆ ಈಡೇರುವವರೆಗೂ ಹೋರಾಟ ಹಿಂತೆಗೆಯುವ ಮಾತೇ ಇಲ್ಲ ಎಂದರು. ಅದೇ ರೀತಿ ಉತ್ತರ ಕರ್ನಾಟಕಕ್ಕೆ 9 ಕಚೇರಿಗಳ ಸ್ಥಳಾಂತರ ವಿಚಾರದಲ್ಲೂ ರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸಿದೆ ಎಂದು ಬಿಜೆಪಿ ನಾಯಕರು  ಆರೋಪಿಸಿದ್ದರು. ಆದರೆ ಕುಮಾರಸ್ವಾಮಿ ಸರಕಾರ ಈ ಭಾಗಕ್ಕೆ 9 ಕಚೇರಿಗಳ ಸ್ಥಳಾಂತರಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು. ಆದರೆ, ಬಿಜೆಪಿ ಸರಕಾರ ಅಧಿ ಕಾರಕ್ಕೆ ಬಂದರೂ ಇದುವರೆಗೂ ಕಚೇರಿಗಳ ಸ್ಥಳಾಂತರ ಆಗಿಲ್ಲ. ಅಂದು ಆರೋಪಿಸಿದ್ದ ಬಿಜೆಪಿ ನಾಯಕರು ಇದೀಗ ಮೌನಕ್ಕೆ ಜಾರಿದ್ದೇಕೆ ಎಂದು ಪ್ರಶ್ನಿಸಿದರು.

ಸರ್ವಪಕ್ಷ ಸಭೆ ಕರೆಯಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳುವ ಮೂಲಕ ಅನಗತ್ಯ ವಿವಾದ ಸೃಷ್ಟಿಗೆ ಮುಂದಾಗಿದ್ದು, ರಾಜ್ಯ ಸರಕಾರ ಸರ್ವಪಕ್ಷ ಸಭೆ ಕರೆದು ಠಾಕ್ರೆ ಹೇಳಿಕೆಯನ್ನು ಖಂಡಿಸಿ ಹಾಗೂ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕೆಂಬ ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.

 ಇದನ್ನೂ ಓದಿ : ಹಿಂದೂ ಧರ್ಮಕ್ಕೆ ಅವಹೇಳನ ಆರೋಪ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಶಿವಸೇನಾದ ಕರ್ನಾಟಕ ಘಟಕದವರು, ಉದ್ಧವ ಠಾಕ್ರೆ ನೀಡಿರುವ ಹೇಳಿಕೆ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು.ರಾಜ್ಯದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲು ಸಾಧ್ಯವೇ ಇಲ್ಲ ಎಂದರು.

ಮುಖಂಡರಾದ ಗುರು ರಾಯನಗೌಡ್ರ, ಮಲ್ಲಿಕಾರ್ಜುನ ಆಲೇಕರ, ಸಿದ್ದಲಿಂಗೇಶ ಪಾಟೀಲ ಇನ್ನಿತರರಿದ್ದರು.

ಟಾಪ್ ನ್ಯೂಸ್

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

v

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

Congress MLA Santosh Mishra’s nephew

ಕಾಂಗ್ರೆಸ್ ಶಾಸಕ ಸಂತೋಷ್ ಸೋದರಳಿಯನ ಗುಂಡಿಕ್ಕಿ ಕೊಲೆ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.