10 ವರ್ಷ ಬಳಿಕ ಹೂವರಳಿಸಿದ ಬಿಳಿ ಕಲ್ನಾರು

Team Udayavani, Aug 2, 2019, 9:13 AM IST

ಧಾರವಾಡ: ಕಾರ್ಗಿಲ್ ಸ್ತೂಪದ ಬಳಿ ಹೂವರಳಿಸಿದ ಬಿಳಿ ಕಲ್ನಾರು.

ಧಾರವಾಡ: ಬಿಳಿ ಕಲ್ನಾರು ಎಂಬ ಕನ್ನಡದ ಹೆಸರಿನ, ಅಗೇವ್‌ ಅಂಗುಸ್ಟಿ´ೋಲಿಯಾ ವೈಟ್ ಸೆಂಟರ್‌ 10 ವರ್ಷಗಳ ಬಳಿಕ ಪ್ರಥಮ ಬಾರಿಗೆ ಹೂವರಳಿಸಿ ದಾರಿಹೋಕರ ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಗಿಲ್ ಸ್ತೂಪದ ಆವರಣದಲ್ಲಿ ಪಂಡಿತ ಮುಂಜಿ ಅವರು ನೆಟ್ಟ ಎರಡು ಬಿಳಿ ಕಲ್ನಾರುಗಳ ಪೈಕಿ ಎಡಬದಿಯ ‘ಅಗೇವ್‌’ ಹೂವರಳಿಸಿ ತನ್ನ ಬದುಕಿನ ಸಂಧ್ಯಾಕಾಲ ತಲುಪಿದೆ. ಈ ಸೊಬಗನ್ನು ಒಂದು ತಿಂಗಳ ಕಾಲ ಸವಿಯಬಹುದು. ಕ್ರಮೇಣ ಈ ಅಲಂಕಾರಿಕ ಸಸ್ಯ ಒಣಗುತ್ತ ಬಂದು ಇಹದ ವ್ಯಾಪಾರ ಮುಗಿಸುತ್ತದೆ.

ಬಿಳಿ ಕಲ್ನಾರು ಬುಡದಲ್ಲಿ ಎಲೆ ಹೂವು ಆದರೆ, ತನ್ನ ಎತ್ತರದ ಕಾಂಡದ ಕೊಂಬೆಗಳಿಂದ ನೆಲಕ್ಕುರುಳಿಸುವ ಹೂವುಗಳಲ್ಲಿ ಬೇರು ಸಮೇತ ಮರಿ ಗಿಡ ಇರುವುದು ವಿಶೇಷ. ಸಾಧನಕೇರಿ-ಜಮಖಂಡಿಮಠ ಲೇಔಟ್‌ನ ಸಮುದಾಯ ಉದ್ಯಾನದಲ್ಲಿ ಪಂಡಿತ ಮುಂಜಿಯವರು ಇಪ್ಪತ್ತು ವರ್ಷಗಳ ಹಿಂದೆ ಈ ಬಿಳಿ ಬಣ್ಣದ ಅಲಂಕಾರಿಕ ಕಲ್ನಾರು ನೆಟ್ಟಿದ್ದರು. ಕಾರ್ಗಿಲ್ ಸ್ತೂಪ ನಿರ್ಮಾಣಗೊಳ್ಳುತ್ತಿದ್ದಂತೆ ಸ್ತೂಪದ ಆವಾರ ಅಂದಗೊಳಿಸಲು ಉದ್ಯಾನ ನಿರ್ಮಾಣದ ಹೊಣೆ ಮುಂಜಿಯವರೇ ಹೊತ್ತಿದ್ದರು. ಕಾಕತಾಳೀಯ ಎಂಬಂತೆ ಜಮಖಂಡಿಮಠ ಲೇಔಟ್ ಉದ್ಯಾನದಲ್ಲಿ ಬಿಳಿ ಕಲ್ನಾರು ಆಗ ಹೂ ಬಿಟ್ಟಿತು. ಆ ಪೈಕಿ ನೂರಾರು ಸಸಿಗಳನ್ನು ‘ಪಾಟಿಂಗ್‌’ ಮಾಡಿ, ಉಚಿತವಾಗಿ ಆಸಕ್ತರಿಗೆ ಹಂಚಿದವರು ಮುಂಜಿ. ಅವುಗಳ ಪೈಕಿ ಆಯ್ದ ಎರಡು ಸಸಿಗಳನ್ನು 10 ವರ್ಷಗಳ ಹಿಂದೆ ಕಾರ್ಗಿಲ್ ಸ್ತೂಪದ ಸ್ವಾಗತ ಕಮಾನಿನ ಬಳಿ ನೆಟ್ಟರು. ಮುಂದಿನ ಆರು ತಿಂಗಳಲ್ಲಿ ಬಲಬದಿಯ ಕಲ್ನಾರು ಕೂಡ ಹೂ ಬಿಡುವ ಸಿದ್ಧತೆಯಲ್ಲಿದೆ. ಈಗ ಮತ್ತೆ ಪುಟ್ಟ ಸಸಿ ಸಂಗ್ರಹಿಸಿ ಆಸಕ್ತರಿಗೆ ಒದಗಿಸುವ ಸಿದ್ಧತೆಯಲ್ಲಿದ್ದಾರೆ ಪಂಡಿತ ಮುಂಜಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಹನಿ ನೀರನ್ನು ಪರಿಪೂರ್ಣವಾಗಿ ಬಳಸಿ, ನಿಗದಿತ ಸಮಯದಲ್ಲಿ ಅದನ್ನು ಹಣವಾಗಿ ಪರಿವರ್ತಿಸುವ ಕೃಷಿ ವಿಧಾನವನ್ನು ಜಗತ್ತಿಗೆ ಮಾದರಿಯಾಗಿ ಕೊಟ್ಟಿದ್ದು ಇಸ್ರೇಲ್‌...

  • ಹುಬ್ಬಳ್ಳಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ...

  • ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು....

  • ಧಾರವಾಡ: ದ್ರಾಕ್ಷಾರಸ ಮದಿರೆಯಾಗಿ ಮತ್ತೇರಿಸುವುದು ಇತಿಹಾಸದಲ್ಲಿತ್ತು. ಅದೇ ದ್ರಾಕ್ಷಾರಸ ವೈನ್‌ ಎಂಬ ಹೆಸರಿನೊಂದಿಗೆ ಆಧುನಿಕ ಜಗತ್ತಿನಲ್ಲಿ ಹೆಸರಾಗಿದೆ. ಇದೀಗ...

  • ಧಾರವಾಡ: ಕೃಷಿ ವಿಶ್ವವಿದ್ಯಾಲಯಗಳು ರೈತರ ಜೊತೆ ಕೃಷಿ ಅಭಿವೃದ್ಧಿಗೆ ಜಂಟಿ ಪ್ರಯೋಗ ಮಾಡುವುದು ಹಾಗೂ ಕೃಷಿ ಪದವೀಧರರು ಹೊಲಗಳಿಗೆ ಮರಳಿ ಆಧುನಿಕ ಕೃಷಿ ಮಾಡಿದರೆ...

ಹೊಸ ಸೇರ್ಪಡೆ