ವಿದ್ಯಾರ್ಥಿಗಳ ನೆರವಿಗೆ ವಿನ್ನರ್‌ ಡ್ರೀಮ್ಸ್‌

ಜಂಟಿಯಾಗಿ ಆ್ಯಪ್‌ ಸಿದ್ಧಪಡಿಸಿದ 3 ಕಂಪನಿಗಳು! ­ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ವರದಾನ

Team Udayavani, May 4, 2021, 5:47 PM IST

fhtytr

ವರದಿ : ಶಿವಶಂಕರ ಕಂಠಿ

ಹುಬ್ಬಳ್ಳಿ: ಕೋವಿಡ್‌-19ರ ಲಾಕ್‌ಡೌನ್‌ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು, ಅಭ್ಯರ್ಥಿಗಳಿಗೆ ನೆರವಾಗಲು ಎಸ್‌ಎಚ್‌ಎಲ್‌ಆರ್‌ ಟೆಕ್ನೋಸಾಫ್ಟ್‌ ಕಂಪನಿ ಹಾಗೂ ಇನ್‌ಸ್ಟಿಟ್ಯೂಟ್‌ ಆಫ್‌ ವಿನ್ನರ್‌ ಡ್ರೀಮ್ಸ್‌ ಹಾಗೂ ವಿ ವರ್ಕ್ಸ್ ಸಾಫ್ಟ್‌ವೇರ್‌ ಕಂಪನಿಗಳು ಜಂಟಿಯಾಗಿ ವಿನ್ನರ್‌ ಡ್ರೀಮ್ಸ್‌ ಎಂಬ ಆ್ಯಪ್‌ ಸಿದ್ಧಪಡಿಸಿವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಶಿಕ್ಷಣ ಪಡೆಯುತ್ತಿರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ನೀಟ್‌, ಜೆಇಇ, ಎಫ್‌ಡಿಎ, ಪೊಲೀಸ್‌, ಪಿಎಸ್‌ಐ, ಕೆಪಿಎಸ್‌ಸಿ, ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ವಿನ್ನರ್‌ ಡ್ರೀಮ್ಸ್‌ ಆ್ಯಪ್‌ ವರದಾನವಾಗಿದೆ. ಈ ಆ್ಯಪ್‌ ಅನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿಯೇ ವಿಶೇಷವಾಗಿ ತಯಾರಿಸಲಾಗಿದೆ.

ವಿನ್ನರ್‌ ಡ್ರೀಮ್ಸ್‌ ಆ್ಯಪ್‌ನಲ್ಲಿ ಪ್ರತಿದಿನ ಅತ್ಯಂತ ಗುಣಮಟ್ಟದ ಪ್ರಶ್ನೆಪತ್ರಿಕೆಯೊಂದಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಾರೆ. ಕೇಂದ್ರ-ರಾಜ್ಯ ಸರಕಾರ ನಡೆಸುವ ವಿವಿಧ ಸರಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಪರಿಣಾಮಕಾರಿ ಹಾಗೂ ಅನುಕೂಲವಾದ ಆ್ಯಪ್‌ ಆಗಿದೆ. ಜತೆಗೆ ಅಭ್ಯರ್ಥಿಗಳು ತಮ್ಮ ಕಲಿಕೆಯ ಸ್ವಸಾಮರ್ಥಯ ಪರೀಕ್ಷಿಸಬಹುದಾಗಿದೆ. ಅಲ್ಲದೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯವೂ ಆಗುತ್ತದೆ.

ಈ ಆ್ಯಪ್‌ ಉಚಿತ ಚಂದಾದಾರರೊಂದಿಗೆ ಲಭ್ಯವಿದ್ದು, ಜತೆಗೆ ನಗದು ಬಹುಮಾನ ಕೂಡ ಪಡೆಯಬಹುದು. ವಿನ್ನರ್‌ ಡ್ರೀಮ್ಸ್‌ ಹೇಗೆ ಕೆಲಸ ಮಾಡುತ್ತೆ? ಕೋವಿಡ್‌-19ರ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ಯಾವುದೇ ಬಗೆಯ ತರಗತಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು, ತರಬೇತಿಯ ಕ್ಲಾಸ್‌ ಗಳು ನಡೆಯುತ್ತಿಲ್ಲ. ಇದನ್ನು ಮನಗಂಡು ಎಸ್‌ ಎಚ್‌ಎಲ್‌ಆರ್‌ ಟೆಕ್ನೋಸಾಫ್ಟ್‌ ಕಂಪನಿ ಹಾಗೂ ವಿ ವರ್ಕ್ಸ್ ಸಾಫ್ಟ್‌ವೇರ್‌ ಕಂಪನಿಗಳು ಜಂಟಿಯಾಗಿ ವಿನ್ನರ್‌ ಡ್ರೀಮ್ಸ್‌ ಆ್ಯಪ್‌ ಸಿದ್ಧಪಡಿಸಿದವು. ಈ ಆ್ಯಪ್‌ ನಲ್ಲಿ ಸಾಮಾನ್ಯ ಜ್ಞಾನ, ತಂತ್ರಜ್ಞಾನ, ಮಾರ್ಕೆಟಿಂಗ್‌ ಆಧಾರಿತ ಮೂರು ಭಾಗಗಳಿವೆ.

ಸಾಮಾನ್ಯ ಜ್ಞಾನದಲ್ಲಿ ನುರಿತ ಶಿಕ್ಷಕರು, ಐಎಎಸ್‌, ಕೆಎಸ್‌ಎಸ್‌ ತಜ್ಞರಿಂದ ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ವಿಶೇಷವೆಂದರೆ ತನ್ನಷ್ಟೆ ತಾನೇ ಆನ್‌ಲೈನ್‌ ಪರೀಕ್ಷೆ ಬಿಡುಗಡೆ ಮಾಡುತ್ತದೆ. ಇದರಲ್ಲಿ ಒಂದೇ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಬಹುವಿಧದ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ಯಾರು ಎಷ್ಟು ಸಮಯದಲ್ಲಿ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಎಷ್ಟು ತಪ್ಪು ಮಾಡಿದ್ದಾರೆ. ಮೊದಲಿಗೆ ಯಾರು ಸರಿಯಾದ ಉತ್ತರ ಕೊಟ್ಟು ಪ್ರಥಮರಾಗಿದ್ದಾರೆ ಎಂಬುದರ ಬಗ್ಗೆ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.

ವಿನ್ನರ್‌ ಡ್ರೀಮ್ಸ್‌ ಆ್ಯಪ್‌ನಲ್ಲಿ ಪ್ರತಿದಿನ ಅಥವಾ 2 ಇಲ್ಲವೆ 3 ದಿನಕ್ಕೊಮ್ಮೆ 25, 50, 100 ಅಂಕಗಳುಳ್ಳ 20-25 ನಿಮಿಷದ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸುತ್ತದೆ. ಇದರಲ್ಲಿ ಸಮಾಜ ವಿಜ್ಞಾನ, ಸಾಮಾನ್ಯಜ್ಞಾನ, ಗಣಿತ, ಜೀವಶಾಸ್ತ್ರ, ಅನಾಲೇಟಿಕಲ್‌, ರಿಜನಿಂಗ್‌ ಎಬಿಲಿಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರಶ್ನೆಪತ್ರಿಕೆಗಳುಳ್ಳ ಪರೀಕ್ಷೆ ನಡೆಸುತ್ತದೆ. ಇನ್‌ಸ್ಟಿಟ್ಯೂಟ್‌ ಆಫ್‌ ವಿನ್ನರ್‌ ಡ್ರೀಮ್ಸ್‌ನವರು ನುರಿತ ಬೋಧನಾ ವಿಭಾಗದ ತಂಡದೊಂದಿಗೆ ಎಸ್‌ ಎಸ್‌ಎಲ್‌ಸಿ, ಪಿಯುಸಿ, ನೀಟ್‌, ಜೆಇಇ, ಎಫ್‌ಡಿಎ, ಪೊಲೀಸ್‌, ಪಿಎಸ್‌ಐ, ಕೆಪಿಎಸ್‌ಸಿ, ಯುಪಿಎಸ್‌ ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪರೀಕ್ಷೆಗಳನ್ನು ನಡೆಸುತ್ತದೆ. ಸರ್ಕಾರದೊಂದಿಗೆ ಒಡಂಬಡಿಕೆಗೆ ಚರ್ಚೆ: ವಿನ್ನರ್‌ ಡ್ರೀಮ್ಸ್‌ ಆ್ಯಪ್‌ ಸಿದ್ಧಪಡಿಸಿರುವ ಕಂಪನಿಯವರು ಇದನ್ನು ರಾಜ್ಯಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ತಲುಪಿಸುವ ಸಲುವಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಕೋವಿಡ್‌-19ರ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗಿದೆಯಂತೆ.

ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಉಚಿತ: ವಿನ್ನರ್‌ ಡ್ರೀಮ್ಸ್‌ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆಸಕ್ತರು ಕೂಡಲೇ ವಿನ್ನರ್‌ ಡ್ರೀಮ್ಸ್‌ ಎಂದು ಟೈಪ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಆ್ಯಪ್‌ನ ಟೆಕ್ನಿಕಲ್‌ ಪಾರ್ಟನರ್‌ ಎಸ್‌ಎಚ್‌ ಎಲ್‌ಆರ್‌ ಟೆಕ್ನೋಸಾಫ್ಟ್‌ ಕಂಪನಿಯಾಗಿದ್ದರೆ, ಇನ್‌ಸ್ಟಿಟ್ಯೂಟ್‌ ಆಫ್‌ ವಿನ್ನರ್‌ ಡ್ರೀಮ್ಸ್‌ ನ್ವಾಲೇಜ್‌ ಪಾರ್ಟನರ್‌ ಹಾಗೂ ವಿ ವರ್ಕ್ಸ್ ಸಾಫ್ಟ್‌ವೇರ್‌ ಕಂಪನಿಯು ಮಾರ್ಕೇಟಿಂಗ್‌ ಪಾರ್ಟನರ್‌ ಆಗಿದೆ. ಈ ಮೂರೂ ಸಂಸ್ಥೆಗಳು ಸೇರಿ ವಿನ್ನರ್‌ ಡ್ರೀಮ್ಸ್‌ ಆ್ಯಪ್‌ ಸಿದ್ಧಪಡಿಸಿವೆ.

ಟಾಪ್ ನ್ಯೂಸ್

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಉಡುಪಿ ಜಿಲ್ಲೆ : ಮಳೆ ಎದುರಿಸಲು ಸರ್ವ ಸಿದ್ಧತೆ

ಉಡುಪಿ ಜಿಲ್ಲೆ: ಮಳೆ ಎದುರಿಸಲು ಸರ್ವ ಸಿದ್ಧತೆ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಉಡುಪಿ ಜಿಲ್ಲೆ : ಮಳೆ ಎದುರಿಸಲು ಸರ್ವ ಸಿದ್ಧತೆ

ಉಡುಪಿ ಜಿಲ್ಲೆ: ಮಳೆ ಎದುರಿಸಲು ಸರ್ವ ಸಿದ್ಧತೆ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.