ದೇಶಿ ಸಂಸ್ಕೃತಿ ಉಳಿಸಿ-ಬೆಳೆಸಿ

•ಭೀಮಾ ತೀರದ ನಾಗರಿಕರು ಧರ್ಮ ರಕ್ಷಕರು •ಗುರುವಿನೊಂದಿಗೆ ಗುರಿ ಅಗತ್ಯ

Team Udayavani, Jul 15, 2019, 4:36 PM IST

ಇಂಚಗೇರಿ:ತದ್ದೇವಾಡಿಯಲ್ಲಿ ಭಾರತೀಯ ಸಂಸ್ಕೃತಿ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಇಂಚಗೇರಿ: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹಿಂದೂ ಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

ಗುರು ಪೂರ್ಣಿಮೆ ನಿಮಿತ್ತ ತದ್ದೇವಾಡಿ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂತರು ಸಾಗರ ಸಮಾನವಿದ್ದಂತೆ. ಸಂತರಲ್ಲಿ ನಾವು ಭಕ್ತಿಯನ್ನು ಹಾಗೂ ಸಂಸ್ಕೃತಿಯನ್ನುಕಾಣುತ್ತೇವೆ ಎಂದರು.

ಗಡಿನಾಡಿನ ತದ್ದೇವಾಡಿ ಗ್ರಾಮ ಭೀಮಾ ನದಿ ದಡದಲ್ಲಿದ್ದು ಇಲ್ಲಿಯ ಮಠ ಧಾರ್ಮಿಕ ಆಚರಣೆಯಧಾಮವಾಗಿದೆ. ಭೀಮಾ ತೀರದ ನಾಗರಿಕರು ಧರ್ಮ ರಕ್ಷಕರು, ಸಂಸ್ಕೃತಿವಂತರು. ಈ ಮಠಕ್ಕೆ ಸ್ಥಳವನ್ನು ಒಬ್ಬ ಮುಸ್ಲಿಂ ಭಕ್ತರು ದಾನ ಮಾಡಿದ್ದು ಭಕ್ತಿಯನ್ನು ತೋರಿಸುತ್ತದೆ ಎಂದರು.

ಧರ್ಮ ಎಂದರೆ ಆತ್ಮ, ಆಚಾರ ವಿಚಾರಗಳು ಪರಿಪಾಲಿಸುವುದೇ ಭಾರತದ ಜೀವನ ಪದ್ಧತಿಯಾಗಿದೆ. ಭಾರತದ ಸಂಸ್ಕೃತಿಯನ್ನುಅನುಸರಿಸಬೇಕು. ಹಳೆಯದನ್ನು ಬಿಟ್ಟು, ಹೊಸ ಪ್ರಪಂಚದ ಪದ್ಧತಿ ಅನುಕರಣೀಯ ಸಲ್ಲದು. ಎಲ್ಲ ಮಹಿಳೆಯರು ಪ್ರಾಚೀನ ಉಡುಪುಗಳೊಂದಿಗೆ ಜೀವನ ಸಾಗಿಸಿರಿ. ಇದರಿಂದ ನಿಮ್ಮ ಸಂಸ್ಕೃತಿ ತೋರಿಸಿದಂತಾಗುತ್ತದೆ ಎಂದರು.

ಗುರುವನ್ನು ಸ್ಮರಿಸುವ ಭಾವ ನಮ್ಮಲ್ಲಿರಬೇಕು. ದಿನಕ್ಕೊಬ್ಬರು ಸಂತ ಜನಿಸುವುದು ಶ್ರೇಷ್ಠ ದಿವಸ. ಸನ್ಯಾಸಿಯನ್ನು ಗುರು ಎಂದು ಭಾವಿಸುವುದು ನಮ್ಮ ಸಂಸ್ಕೃತಿಯ ಆಚಾರ ವಿಚಾರ. ಸೃಷ್ಟಿಗೆ ಮೊದಲು ಗುರು. ಗುರುವಿನೊಂದಿಗೆ ಗುರಿ ಇರಬೇಕು ಎಂದರು.

ನಮ್ಮ ಮಕ್ಕಳ ಜೀವನವನ್ನು ನಾವೇ ನಾಶ ಮಾಡುತ್ತಿದ್ದೇವೆ. ತಾಯಿಯೇ ಮೊದಲ ಗುರು ನಂತರ ಶಿಕ್ಷಕ. ಮಕ್ಕಳನ್ನು ಸ್ವತಂತ್ರವಾಗಿ ಬದುಕಲು ಬಿಡಬೇಕು. ಒಳ್ಳೆ ಬದುಕಲು ಮಾರ್ಗದರ್ಶನ ಮಾಡಿರಿ. ಬದುಕನ್ನು ಧೈರ್ಯದಿಂದಎದುರಿಸುವುದೇ ಭಾರತೀಯ ಸಂಸ್ಕೃತಿ. ಮಕ್ಕಳಿಗೆ ಇಂಗ್ಲಿಷ್‌ ಭಾಷೆಯಿಂದ ದೂರವಿಡಬೇಕು. ಇದರೊಂದಿಗೆ ಧೈರ್ಯದ ನೀತಿಯ ಪಾಠ ಬೋಧನೆಯಾಗಬೇಕು ಎಂದರು.

ನಮ್ಮ ಭಾರತೀಯ ಸಂಸ್ಕೃತಿ ಎಲ್ಲದರಲ್ಲಿಯೂ ಶ್ರೇಷ್ಠವಾಗಿದೆ. ಅದನ್ನು ಉಳಿಸಿಕೊಂಡು ಹೋಗಬೇಕು. ನಮ್ಮ ಸಂಸ್ಕೃತಿಯಲ್ಲಿ ಗೌರವ ಪ್ರೀತಿ ಪ್ರೇಮ ಬಾಂಧವ್ಯ ಕಾಣಬಹುದು ಎಂದು ಹೇಳಿದರು.

ಶಿವಾನಂದ ಭೈರಗೊಂಡ ಉದ್ಘಾಟಿಸಿದರು. ಶಂಕರಗೌಡ ಪಾಟೀಲ, ಶಿಕ್ಷಕ ಎಸ್‌.ಎಸ್‌. ಪಾಟೀಲ, ಚಿದಾನಂದ ಬಿರಾದಾರ, ಸಾಹೇಬಗೌಡ ಬಿರಾದಾರ ಜ್ಯೋತಿ ಬೆಳಗಿದರು. ವಂದೇ ಮಾತರಂ ಗೀತೆಯನ್ನು ರಾಜಶೇಖರ ಪಾಟೀಲ ಹಾಡಿದರು.

ಕಾರ್ಯಕ್ರಮ ಸಾನ್ನಿಧ್ಯವನ್ನು ಉಜ್ಜಯಿನಿ ಪೀಠದ ಜಗದ್ಗರು ಸಿದ್ದಲಿಂಗ ರಾಜದೇಶಿ ಕೇಂದ್ರ ಭಗವತ್ಪಾದರು ವಹಿಸಿದ್ದರು. ಮಂದೃಪ ಮಠದ ರೇಣುಕಾ ಶಿವಯೋಗಿ ಮಹಾಸ್ವಾಮಿಗಳು, ಅಭಿನವ ಮುರುಘೇಂದ್ರ ಶಿರಶ್ಯಾಡ, ರೇಣುಕ ದೇವರು, ರಾಜುಗೌಡ ಝಳಕಿ, ಚಂದ್ರಶೇಖರ ನಿರಾಳೆ, ಮಹಾದೇವ ಕರ್ಲಮಳ ಇದ್ದರು. ಮಹಾಂತೇಶ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ