2.70 ಕೋಟಿ ರೂ. ಪರಿಹಾರ ಬಿಡುಗಡೆ

•ಗದಗ ವಿಧಾನಸಭಾ ಕ್ಷೇತ್ರದಲ್ಲಿ 769 ಮನೆಗಳಿಗೆ ಹಾನಿ •ಪರಿಹಾರ ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ

Team Udayavani, Aug 14, 2019, 12:54 PM IST

ಗದಗ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಗದಗ ವಿಧಾನಸಭಾ ಮತಕ್ಷೇತ್ರದ 769 ಮನೆಗಳು ಹಾನಿಗೊಳಗಾಗಿವೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿಯೂ 15-18 ಮನೆಗಳಿಗೆ ಹಾನಿಯಾಗಿದೆ. ಈಗಾಗಲೇ ಸೊರಟೂರ, ಹಂಗನಕಟ್ಟಿ, ಮುಳಗುಂದ, ಚಿಂಚಲಿ, ನೀಲಗುಂದ, ಕುರ್ತಕೋಟಿ, ಹೊಸಳ್ಳಿ ಸೇರಿ ವಿವಿಧೆಡೆ ತೆರಳಿ ಹಾನಿ ವೀಕ್ಷಣೆ ಮಾಡಲಾಗಿದೆ. ಕೆಲವೆಡೆ ಭಾಗಶಃ, ಮತ್ತೆ ಕೆಲವೆಡೆ ಅರ್ಧ ಮತ್ತು ಕೆಲವು ಸಂಪೂರ್ಣ ಮನೆಗಳು ಬಿದ್ದಿವೆ. ಸೊರಟೂರು, ಹಂಗನಕಟ್ಟಿಯಲ್ಲಿ ಎರಡು ಆಕಳು, ಒಂದು ಎತ್ತು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.

2.70 ಕೋಟಿ ರೂ. ಪರಿಹಾರ ಬಿಡುಗಡೆ: ಗದಗ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಮನೆಗಳಿಗೆ 2.70 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಹಾನಿಗೊಳಗಾದ 769 ಮನೆಗಳ ಪೈಕಿ 577 ಮನೆಗಳಿಗೆ 89,77,540 ರೂ. ಪರಿಹಾರವನ್ನು ಫಲಾನುಭವಿಗಳ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಬಿಡುಗಡೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಳೆಗೆ ಹಾನಿಯಾದ ಮನೆಗಳ ಸಮೀಕ್ಷೆ ಮಾಡಲಾಗುತ್ತಿದೆ. ಶೇ. 15ರಷ್ಟು ಹಾನಿಯದ ಮನೆಗಳಿಗೆ ಕನಿಷ್ಠ 5,800 ರೂ. ಹಾಗೂ ಶೇ. 75ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ 95,000 ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಜಿ.ಪಂ. ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ಧು ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ತಾ.ಪಂ. ಸದಸ್ಯ ವಿದ್ಯಾಧರ ದೊಡ್ಡಮನಿ, ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ತಾಪಂ ಇಒ ಡಾ| ಎಚ್.ಎಸ್‌. ಜನಗಿ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌...

  • ಎಲ್ಲಿ ನಗರಗಳಿರುತ್ತವೆಯೋ ಅಲ್ಲಿ ಸ್ಲಂಗಳು ಇದ್ದೇ ಇರುತ್ತವೆ. ಸ್ಲಂ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದೇ ಅಲ್ಲಿನ ಕೊಳಚೆ ಪ್ರದೇಶ, ಮೂಲ ಸೌಕರ್ಯಗಳ ಕೊರತೆ,...

  • ಬೆಳೆಗಾರರು ಅಡಿಕೆ ಮತ್ತು ತೆಂಗು ಬೆಳೆಗಳ ಮಧ್ಯೆ ಕೊಕ್ಕೋ ಬೆಳೆದು ಯಶಸ್ವಿಯಾಗಿದ್ದರು. ಆದರೆ ಕೊಕ್ಕೋ ಬೆಳೆಯುವ ಪ್ರಮಾಣವನ್ನು ಹೆಚ್ಚಿಸಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ...

  • ಒಂದಾನೊಂದು ಕಾಲದಲ್ಲಿ ಒಬ್ಬ ಕೃಷಿಕ ಒಂದು ಊರಿನಲ್ಲಿ ಕೃಷಿ ಮಾಡುತ್ತಿದ್ದ. ತನ್ನ ಜಮೀನಿಗೆ ಬೇಕಾದಷ್ಟು ಜಾನುವಾರುಗಳನ್ನು ಸಾಕಿಕೊಂಡಿದ್ದ. ಅವನಲ್ಲಿ ಕೆಲವು...

  • ಎರಡು ವಿಭಿನ್ನ ಸಂಸ್ಕೃತಿಗಳಲ್ಲಿ ಮೊಳಕೆಯೊಡೆಯುವ ಪ್ರೇಮಕಥೆಗಳು ವಿಸ್ತಾರಗೊಳ್ಳುತ್ತ ಒಂದಕ್ಕೊಂದು ಹೆಣೆದುಕೊಂಡು ಕಡೆಗೆ ಸಂಧಿಸಿದರೂ ದೂರವಾಗಿಯೇ ಅಂತ್ಯವಾಗುವ...