Udayavni Special

ರೈತ ಬಂಡಾಯದ “ಮೇಳಿ ಕಾಳಗ’ಕ್ಕೆ  41 ವರ್ಷ

ಇಂದು ರೈತ ಹುತಾತ್ಮ ದಿನಾಚರಣೆ! ­ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ನಮನ

Team Udayavani, Jul 21, 2021, 8:22 PM IST

20bgv-13

ವರದಿ : ಸಿದ್ಧಲಿಂಗಯ್ಯ ಮಣ್ಣೂರಮಠ

ನರಗುಂದ: 1980ರಲ್ಲಿ “ಮೇಳಿ ಕಾಳಗ’ ಎಂದೇ ಪ್ರತೀತಿ ಪಡೆದ ನರಗುಂದ ರೈತ ಬಂಡಾಯಕ್ಕೆ ಜುಲೈ 21 ಕ್ಕೆ 41 ವರ್ಷ ಗತಿಸಿದೆ. ರೈತ ಕುಲದ ಏಳ್ಗೆಗೆ ನೆತ್ತರು ಹರಿಸಿದ ರೈತ ಬಂಡಾಯದ ನೆಲದಲ್ಲಿ ಬುಧವಾರ ರೈತ ಹುತಾತ್ಮ ದಿನ ಆಚರಿಸಲಾಗಿದೆ.

ನೆತ್ತರು ಹರಿಸಿದ ಆ ದಿನಗಳು: 1980ರಲ್ಲಿ ನವಿಲುತೀರ್ಥ ಜಲಾಶಯದಿಂದ ಕಾಲುವೆ ನೀರು ರೈತರ ಭೂಮಿಗೆ ದೊರಕದಿದ್ದರೂ ಅಂದಿನ ಗುಂಡೂರಾವ್‌ ಸರ್ಕಾರ ಬೆಟರ್‌ ಮೆಂಟ್‌ ಲೇವಿ(ನೀರಿನ ಕರ ಆಕರಣೆ) ಜಾರಿಗೊಳಿಸಿತು.ನೀರು ಸಿಗದಿದ್ದರೂ ಕರ ಏಕೆ ಕಟ್ಟಬೇಕು? ಎಂಬ ತಾರ್ಕಿಕ ನಿಲುವು ರೈತರ ಚಳವಳಿಗೆ ನಾಂದಿ ಹಾಡಿತು. ಅತ್ತ ನವಲಗುಂದದಲ್ಲೂ ಚಳವಳಿ ಶುರುವಾಗಿ, 1980ರ ಜು.21ರಂದು ನರಗುಂದದಲ್ಲಿ ಅಂದಿನ ತಹಶೀಲ್ದಾರರು ಕಚೇರಿ ಪ್ರವೇಶಕ್ಕೆ ನಿರಾಕರಿಸಿದ ರೈತರನ್ನು ಲೆಕ್ಕಿಸದೇ ಕಚೇರಿ ಪ್ರವೇಶ ಮಾಡಿದ್ದೇ ಬಂಡಾಯಕ್ಕೆ ನಾಂದಿಯಾಯಿತು. ಇದು ರೈತರ ಸಹನೆ ಕೆರಳಿಸಿತ್ತು ಎಂಬ ಹಿನ್ನೆಲೆ ರೈತ ಬಂಡಾಯಕ್ಕಿದೆ. “ಬಡವನ ಕೋಪ ದವಡೆಗೆ ಮೂಲ’ ಎಂಬಂತೆ ಮೇಳಿ(ಕೃಷಿ ಪರಿಕರ) ಹಿಡಿದು ಕುಳಿತಿದ್ದ ರೈತರ ಆಕ್ರೋಶ ತಾರಕಕ್ಕೇರಿದಾಗ ಪೊಲೀಸರ ಗುಂಡಿಗೆ ಚಿಕ್ಕನರಗುಂದ ರೈತ ಈರಪ್ಪ ಕಡ್ಲಿಕೊಪ್ಪ, ನವಲಗುಂದಲ್ಲಿ ಅಳಗವಾಡಿ ರೈತ ಬಸಪ್ಪ ಲಕ್ಕುಂಡಿ ಬಲಿಯಾದರು. ಇದೇ ವೇಳೆ ಓರ್ವ ಪೊಲೀಸ್‌ ಅಧಿಕಾರಿ ಸೇರಿ 4 ಮಂದಿ ಪೊಲೀಸರು ಹತರಾಗಿದ್ದು ಬಂಡಾಯದ ಹಾದಿಯಲ್ಲಿ ಅಚ್ಚೊತ್ತಿದೆ.

ತೀರದ ಗೋಳು: ರೈತ ಬಂಡಾಯದ ನೆಲದಲ್ಲೇ 6 ವರ್ಷದಿಂದ ಮಹದಾಯಿ ಹೋರಾಟ ಹುಟ್ಟಿಕೊಂಡಿದೆ. 2015ರ ಜು.16ರಂದು ಮಹದಾಯಿ ಮತ್ತು ಕಳಸಾ-ಬಂಡೂರಿ ಜೀವಜಲಕ್ಕಾಗಿ ನಡೆಯುತ್ತಿರುವ ಹೋರಾಟ 7ನೇ ವರ್ಷಕ್ಕೆ ಕಾಲಿಟ್ಟಿದೆ. ಜನಾಂದೋಲನ ಸ್ವರೂಪ ಪಡೆದು, ದೇಶದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದು ವಿಶ್ವ ದಾಖಲೆ ಸೃಷ್ಟಿಸಿದ ಹೋರಾಟ ಸರ್ಕಾರಗಳ ಅಸಡ್ಡೆ ಧೋರಣೆಗೆ ನಿದರ್ಶನವಾಗಿದೆ. ಸುಧಾರಿಸದ ವೀರಗಲ್ಲು: ಈ ನೆಲದ ಹಲವಾರು ನಾಯಕರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಅಧಿ ಕಾರದ ಚುಕ್ಕಾಣಿ ಹಿಡಿದರೂ ಹೆದ್ದಾರಿ ಬದಿಗಿರುವ ಹುತಾತ್ಮ ರೈತನ ವೀರಗಲ್ಲು ಮಾತ್ರ ಸುಧಾರಣೆ ಕಂಡಿಲ್ಲ. ಇಲ್ಲಿ ರೈತ ಸ್ಮಾರಕ ಭವನ ನಿರ್ಮಿಸಬೇಕೆಂಬ ರೈತರ ಕೂಗು ಇಂದಿಗೂ ಈಡೇರಿಲ್ಲ.

ಟಾಪ್ ನ್ಯೂಸ್

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

MUST WATCH

udayavani youtube

ವಿಶ್ವಸಂಸ್ಥೆಯಲ್ಲಿ ಪ್ರಧಾನ ಮೋದಿ ಭಾಷಣ

udayavani youtube

ಕೇಂದ್ರ ಆಯುಷ್ ಸಚಿವರಿಂದ ವೆನ್‍ಲಾಕ್ ಆಯುಷ್ ಆಸ್ಪತ್ರೆ ಉದ್ಘಾಟನೆ

udayavani youtube

3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವ

udayavani youtube

ಬಿಜೆಪಿ ಸೇವೆ ಮತ್ತು ಸಮರ್ಪಣಾ ಕಾರ್ಯದಲ್ಲಿ ತೊಡಗಿಕೊಂಡಿದೆ : ನಾಗರಾಜ ನಾಯ್ಕ

udayavani youtube

ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ

ಹೊಸ ಸೇರ್ಪಡೆ

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.