ಮೊದಲ ಹಂತದಲ್ಲಿ 500 ಮನೆ ವಿತರಣೆ

•ಗಂಗಿಮಡಿಯಲ್ಲಿನ ವಸತಿ ಸಮುಚ್ಛಯ ಕಾಮಗಾರಿ ಪರಿಶೀಲನೆ

Team Udayavani, Jun 12, 2019, 10:24 AM IST

ಗದಗ: ಗಂಗಿಮಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಯೋಜನೆ ಕಾಮಗಾರಿಯನ್ನು ಶಾಸಕ ಎಚ್.ಕೆ. ಪಾಟೀಲ ಪರಿಶೀಲಿಸಿದರು.

ಗದಗ: ಇಲ್ಲಿನ ಗಂಗಿಮಡಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಛಯದಡಿ ಮೂರು ತಿಂಗಳಲ್ಲಿ ಮೊದಲ ಹಂತವಾಗಿ 500 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಗಂಗಿಮಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಛಯ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗಂಗಿಮಡಿಯಲ್ಲಿ ನೆಲ ಹಾಗೂ ಮೊದಲ ಮಹಡಿ ಸೇರಿದಂತೆ ಒಟ್ಟು 3630 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ 412 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಸುಣ್ಣ-ಬಣ್ಣ ಬಾಕಿ ಇವೆ. 1500 ಮನೆಗಳು ಪ್ಲಿಂತ್‌ ಲೇವಲ್, 720 ಮನೆಗಳು ಫ್ಲೋರಿಂಗ್‌, 998 ಮನೆಗಳು ತರ ತೆಗೆಯುವ ಹಂತದಲ್ಲಿವೆ.

ಮೋಲ್ಡ್ಗಳನ್ನು ಬಳಸಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ದಿನಕ್ಕೆ 6 ಮನೆಗಳು ಪೂರ್ಣಗೊಳ್ಳುತ್ತಿವೆ. ಆದರೆ, ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಮನೆಗಳನ್ನು ಕಲ್ಪಿಸುವ ಉದ್ದೇಶದಿಂದ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ನಿರ್ಮಿಸುವಂತೆ ಸೂಚನೆ ನೀಡಿದ್ದು, ಅದರಂತೆ ಮುಂದಿನ ಮೂರು ತಿಂಗಳಲ್ಲಿ ಮೊದಲ ಹಂತದಲ್ಲಿ ಸುಮಾರು 500 ಮನೆಗಳು ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

ಸದ್ಯ, ವಾಸಕ್ಕೆ ಯೋಗ್ಯವಿಲ್ಲದಂತಹ ಮುರುಕಲು ಗುಡಿಸಲುಗಳಲ್ಲಿ ನೆಲೆಸಿದವರಿಗೆ ಮೊದಲ ಹಂತದ ಮನೆ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಬಳಿಕ ಶೆಡ್‌ಗಳಲ್ಲಿ ವಾಸವಿರುವವರು, ಆ ನಂತರ ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಗಳಲ್ಲಿ ವಾಸವಿರುವವರನ್ನು ಪರಿಗಣಿಸಲಾಗುತ್ತದೆ. ಸರಕಾರಿ ನಿಯಾಮಾವಳಿಯಂತೆ ವಿಕಲಚೇತನರು, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿನ ಸಾಧಕರಿಗೂ ಅಲ್ಪಸ್ವಲ್ಪ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮನೆಗಳ ಹಂಚಿಕೆಗೂ ಮುನ್ನವೇ ಕುಡಿಯುವ ನೀರು, ಸಿಸಿ ರಸ್ತೆ, ಗ್ಯಾಸ್‌ ಸಂಪರ್ಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅದಕ್ಕಾಗಿ ಹೆಚ್ಚುವರಿಯಾಗಿ 50 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಿಲ್ಲಾಕಾರಿ ಎಂ.ಜಿ. ಹಿರೇಮಠ, ಎಸ್ಪಿ ಶ್ರೀನಾಥ ಜೋಶಿ, ನಗರಸಭೆ ಅಭಿಯಂತರರಾದ ಎಲ್.ಜಿ.ಪತ್ತಾರ, ಬಂಡಿವಡ್ಡರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರುಬುರೆ ಸೇರಿದಂತೆ ನಗರಸಭೆ ವಸತಿ ವಿಭಾಗದ ಅಧಿಕಾರಿಗಳು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನರೇಗಲ್ಲ: ಶ್ರೇಷ್ಠ ಸಾಹಿತಿ, ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ತವರು ಅಬ್ಬಿಗೇರಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗಿ 15 ವರ್ಷ ಕಳೆದರೂ ಶಾಶ್ವತ...

  • ನರೇಗಲ್ಲ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನ ಯಶಸ್ವಿಗೆ ಅಬ್ಬಿಗೇರಿ ಗ್ರಾಪಂ ಮುಂದಾಗಿದ್ದು, ಗ್ರಾಮದಲ್ಲಿನ...

  • ಗದಗ: ಇತ್ತೀಚೆಗೆ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ನಿರಾಶ್ರಿತರು ಎಲ್ಲವನ್ನೂ ಕಳೆದುಕೊಂಡಿದ್ದರೂ ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ....

  • ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿಯಿತು. ಮಂಗಳವಾರ ಸುರಿದ ಮಳೆಗೆ ಹಲವೆಡೆ ಜಮೀನುಗಳು ಜಲಾವೃತಗೊಂಡಿದ್ದು,...

  • ಗದಗ: ಎಲ್ಲೆಂದರಲ್ಲಿ ಬಿರುಕು ಬಿಟ್ಟ ಗೋಡೆಗಳು.. ಮೂಲೆ ಸೇರಿದ ಹೊಸ ಪುಸ್ತಕ ಮೂಟೆಗಳು..ಕುರ್ಚಿ ಇದ್ದರೂ ಇಡಲು ಜಾಗವಿಲ್ಲ..ಇದ್ದ ಪುಸ್ತಕಗಳ ರಕ್ಷಣೆಗೆ ನಿತ್ಯ ಹರಸಾಹಸ...

ಹೊಸ ಸೇರ್ಪಡೆ