ಅನ್ನದಾತರಿಗೆ ನೆರವಾದ ನೇರಳೆ ಬೆಳೆ

•ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಹಣ್ಣಿದು •ಬಹುತೇಕ ತೋಟದ ಬದುವಿನಲ್ಲೇ ಇದನ್ನು ಬೆಳೆಯುತ್ತಾರೆ

Team Udayavani, Jun 20, 2019, 10:32 AM IST

gadaga-tdy-1..

ಗಜೇಂದ್ರಗಡ: ಶ್ರೀ ಕಾಲಕಾಲೇಶ್ವರ ವೃತ್ತದ ಬಳಿ ನೇರಳೆ ಹಣ್ಣು ಮಾರಾಟ ಮಾಡುತ್ತಿರುವುದು.

ಗಜೇಂದ್ರಗಡ: ಮಧುಮೇಹ, ಬಾಯಿ ದುರ್ಗಂಧ, ತೊದಲುವಿಕೆ, ಪಚನ ಕ್ರಿಯೆ ವೃದ್ಧಿ, ಗಂಟಲು ನೋವು ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ರಾಮಬಾಣವಾದ ನೇರಳೆ ಹಣ್ಣಿನ ಮಾರಾಟ ಜೋರಾಗಿ ನಡೆದಿದ್ದು, ನೇರಳೆ ರೈತರಿಗೆ ನೆರವಾಗಿದೆ.

ನೇರಳೆಗೆ ಯಾವುದೇ ರೋಗಬಾಧೆ ತಗುಲದು. ಜತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಹಣ್ಣು ಇದಾಗಿದೆ. ಹೀಗಾಗಿ ಕೊಳವೆಬಾವಿ ಆಶ್ರಿತ, ನೀರಾವರಿ ಅವಲಂಬಿತ ಬಹುತೇಕ ರೈತರು ತಮ್ಮ ತೋಟದ ಬದುವಿಗೆ ನೇರಳೆ ಬೆಳೆಯುತ್ತಾರೆ. ತಾಲೂಕಿನ ಗಜೇಂದ್ರಗಡ ಪಟ್ಟಣ ಹಾಗೂ ಸುತ್ತಲಿನ ಜವಳು (ಮಸಾರಿ)ಭೂಮಿಯಲ್ಲಿ ಬೆಳೆಯುವ ನೇರಳೆ ಹಲವಾರು ರೈತರ ಕೈ ಹಿಡಿದಿದೆ.

ಸದ್ಯ ನೇರಳೆಗೆ ಪಟ್ಟಣದ ಮಾರುಕಟ್ಟೆಯಲ್ಲಿ ಕೆಜಿ ಒಂದಕ್ಕೆ 140 ರಿಂದ 160ವರೆಗೆ ಇದ್ದು, ಹಣ್ಣಿನ ಗಾತ್ರದ ಆಧಾರದ ಮೇಲೆ ದರವಿದೆ. ಕೆಲವು ಕಡೆ ಸೇರುಗಳ ಮೂಲಕವೂ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿ ಬುಟ್ಟೆಯಲ್ಲಿಟ್ಟು ಮಾರುವವರು ಸೇರು, ಅಚ್ಚೇರು, ಚಟಾಕುಗಳ ಅಳತೆಯಲ್ಲಿ ಕೆಲವೊಮ್ಮೆ ಹಣದ ಬದಲಿಗೆ ಜೋಳ, ಗೋಧಿ, ಅಕ್ಕಿಗೂ ಮಾರಾಟ ಮಾಡುತ್ತಾರೆ.

ಹಲವಾರು ಮಹಿಳೆಯರು ನೇರಳೆ ಹಣ್ಣು ಬುಟ್ಟಿಯಲ್ಲಿ ತುಂಬಿಕೊಂಡು ಬಂದು ಪಟ್ಟಣದ ಜೋಡು ರಸ್ತೆ, ಮುಖ್ಯ ಮಾರುಕಟ್ಟೆ ಫುಟ್ಪಾತ್‌ ಮೇಲೆ ಕುಳಿತು ಉರಿ ಬಿಸಿಲನ್ನೂ ಲೆಕ್ಕಿಸದೇ ಮಾರಾಟ ಮಾಡಿ ಬಂದ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಾರೆ. ಗಜೇಂದ್ರಗಡ ಪಟ್ಟಣದ ವಿವಿಧೆಡೆ ಮಾರುಕಟ್ಟೆಯಲ್ಲಿ ಈಗ ನೇರಳೆ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ ಎನ್ನುತ್ತಾರೆ ನೇರಳೆ ಹಣ್ಣು ಮಾರುವ ದೇವವ್ವ ಗೌಡರ.

ನಿರ್ವಹಣೆಯ ವಿಧಾನ: ಒಂದು ಅಡಿ ಚೌಕಾಕಾರದ ತಗ್ಗು ಅಗೆದು, ಎಂಟು ಅಡಿ ಅಂತರದಲ್ಲಿ ಎಕರೆಗೆ 100 ಸಸಿ ನೆಡಬಹುದು. ಕೊಟ್ಟಿಗೆ, ಎರೆಹುಳು ಗೊಬ್ಬರ ಹಾಕಿ, ನೀರುಣಿಸಿ ಸಸಿ ಬೆಳೆಸಬೇಕು. ನಾಲ್ಕು ವರ್ಷಗಳ ಕಾಲ ಸಸಿಯನ್ನು ಪೋಷಿಸಿದರೆ ಹಣ್ಣು ಕೊಡಲು ಆರಂಭಿಸುತ್ತದೆ. ಪ್ರತಿ ವರ್ಷ ಗಿಡದ ಸುತ್ತ 500 ಗ್ರಾಂ ಯೂರಿಯಾ, 300 ಗ್ರಾಂ ಪೊಟ್ಯಾಸಿಯಂ ಗೊಬ್ಬರ ಹಾಕಿ ನೀರುಣಿಸಬೇಕು. ಇದಕ್ಕೆ ವಾರ್ಷಿಕ 1.20 ಲಕ್ಷ ಖರ್ಚಾಗುತ್ತದೆ. ಖರ್ಚಿನ ದುಪ್ಪಟ್ಟು ಹಣ ಸಂಪಾದನೆಯಾಗುತ್ತದೆ ಎನ್ನುವುದು ನೇರಳೆ ಹಣ್ಣು ಬೆಳೆಗಾರರ ಲೆಕ್ಕಾಚಾರ. ಸಾಮಾನ್ಯವಾಗಿ ನೇರಳೆ ಜನವರಿ, ಫೆಬ್ರುವರಿ ತಿಂಗಳಲ್ಲಿ ಹೂ ಬಿಟ್ಟು ಮಾರ್ಚ್‌ ತಿಂಗಳಲ್ಲಿ ಕಾಯಿ ಕಟ್ಟಿ ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣು ಹೇರಳವಾಗಿ ಸುರಿಯುತ್ತದೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಮರಕ್ಕೆ 20 ಕೆಜಿ ಉಪ್ಪು ಕಟ್ಟಿದರೆ ಹಣ್ಣುಗಳನ್ನು ಹೆಚ್ಚಿಗೆ ನೀಡುತ್ತದೆ. ಕಾಯಿ ಹಣ್ಣಾಗುವ ಕಾಲಕ್ಕೆ ನೀಲಿ-ಕೇಸರಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಗಿಡ ನಾಲ್ಕರಿಂದ ಐದು ವರ್ಷಕ್ಕೆ ಹಣ್ಣು ಬಿಡಲಾರಂಭಿಸಿ ಸುದೀರ್ಘ‌ ಅರವತ್ತು ವರ್ಷಗಳವರೆಗೆ ಗುಣಮಟ್ಟದ ಹಣ್ಣು ಕೊಡುತ್ತದೆ.

•ಡಿ.ಜಿ ಮೋಮಿನ್‌

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.