Udayavni Special

ಆಧಾರ್‌ ಕಾರ್ಡ್‌ ವ್ಯವಸ್ಥೆ ಸರಿಪಡಿಸಲು ಆಗ್ರಹ


Team Udayavani, Jul 21, 2019, 11:48 AM IST

gadaga-tdy-4

ಲಕ್ಷ್ಮೇಶ್ವರ: ಆಧಾರ್‌ ಕಾರ್ಡ್‌ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಹೊಸ ಆಧಾರ್‌ ಕಾರ್ಡ್‌ ಪಡೆಯುವುದು ಮತ್ತು ತಿದ್ದುಪಡಿ ಗೊಂದಲದ ಗೂಡಾಗಿದ್ದು, ಪಟ್ಟಣ ಸೇರಿ ಗ್ರಾಮೀಣ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಆದರೆ ಆಧಾರ್‌ ಕಾರ್ಡ್‌ ನವೀಕರಣ, ತಿದ್ದುಪಡಿ ಮತ್ತು ಹೊಸ ಕಾರ್ಡ್‌ ಪಡೆಯಲು ಜನರು ನಿಗದಿತ ಕಚೇರಿಗಳಿಗೆ ಸಾಲು ನಿಲ್ಲುತ್ತಿದ್ದಾರೆ.

ತಾಲೂಕಿನಾಧ್ಯಂತ ಜನರಿಗೆ ಪಟ್ಟಣದಲ್ಲಿನ ನೆಮ್ಮದಿ ಕೇಂದ್ರ, ಕೆವಿಜಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಗೆ ಆಧಾರ್‌ ಕಾರ್ಡ್‌ ಕೊಡುವ ಅಧಿಕಾರ ನೀಡಿದೆ. ಆದರೆ ನೆಮ್ಮದಿ ಕೇಂದ್ರದಲ್ಲಿ ನಿತ್ಯ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಸೆಪ್ಟೆಂಬರ್‌ ವರೆಗೂ ಪಾಳಿ ಚೀಟಿ ಕೊಟ್ಟಿದ್ದಾರೆ. ಇನ್ನು ಕೆವಿಜಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾರಣ ನೀಡಿ ಆಗೊಮ್ಮೆ ಈಗೊಮ್ಮೆ ನಾಲ್ಕಾರು ಕಾರ್ಡ್‌ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಚುನಾವಣಾ ಪೂರ್ವದಲ್ಲಿ ಎಲ್ಲ ಗ್ರಾಪಂಗಳಲ್ಲಿ ಮತ್ತು ಖಾಸಗಿ ಕಂಪ್ಯೂಟರ್‌ ಕೇಂದ್ರಗಳಿಗೆ ಆಧಾರ್‌ ವ್ಯವಸ್ಥೆ ಸರಿಪಡಿಸುವ ವ್ಯವಸ್ಥೆ ನೀಡಲಾಗಿತ್ತು. ಆದರೆ ನೀತಿ ಸಂಹಿತೆ ಕಾರಣದಿಂದ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ದ್ವಿಗುಣಗೊಂಡಿದೆ. ಆದ್ದರಿಂದ ಆಧಾರ್‌ ವ್ಯವಸ್ಥೆ ಸರಿಪಡಿಸುವ ಕೇಂದ್ರಗಳನ್ನು ಇನ್ನಷ್ಟು ಆರಂಭಿಸಿ ಜನರಿಗೆ ಅನಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇಸ್ಮಾಯಿಲ್ ಆಡೂರ, ಮೋಹನ ನಂದೆಣ್ಣವರ, ಸದಾಶಿವ ಮುಡಿಯಮ್ಮನವರ, ಪರಮೇಶ ಲಮಾಣಿ, ಸರೋಜಾ ನಾವಿ, ಸರಸ್ವತಿ ಪಾಟೀಲ, ಜರೀನಾ ಮುಲ್ಲಾ, ರಾಜೇಶ್ವರಿ ಮುಂದಿನಮನಿ ಮತ್ತಿತರರಿದ್ದರು. ತಹಶೀಲ್ದಾರ್‌ ಪರವಾಗಿ ಸಿಬ್ಬಂದಿ ಕಗ್ಗಲಗೌಡರ ಮನವಿ ಸ್ವೀಕರಿಸಿದರು.

ಟಾಪ್ ನ್ಯೂಸ್

Untitled-1

ಪುತ್ತೂರು: ಯುವತಿಯರೇ ಹೆಚ್ಚಿರುವ ಬಸ್‌ನಲ್ಲಿ ಅಸಭ್ಯ ವರ್ತನೆ : ಆರೋಪಿ ಬಂಧನ

154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

hd-kumarswaamy

2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

Jyotiraditya Scindia Responds To Rahul Gandhi’s “BJP Backbencher” Taunt

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಣ್ಣಿಗೆ ಹೆಣ್ಣೇ ಶತ್ರು ಆಗದಿರಲಿ

ಹೆಣ್ಣಿಗೆ ಹೆಣ್ಣೇ ಶತ್ರು ಆಗದಿರಲಿ

ಬೇಡಿದ್ದು ಬೆಟ್ಟದಷ್ಟು; ಸಿಕ್ಕಿದ್ದು ಬೊಗಸೆಯಷ್ಟು ..

ಬೇಡಿದ್ದು ಬೆಟ್ಟದಷ್ಟು; ಸಿಕ್ಕಿದ್ದು ಬೊಗಸೆಯಷ್ಟು ..

ನರೇಗಾದಡಿ ರೈತ ಸಂಪರ್ಕ ರಸ್ತೆ ನಿರ್ಮಿಸಿ

ನರೇಗಾದಡಿ ರೈತ ಸಂಪರ್ಕ ರಸ್ತೆ ನಿರ್ಮಿಸಿ

ಪೊಲೀಸರು ಉತ್ತಮ ಆರೋಗ್ಯ ಬೆಳೆಸಿಕೊಳ್ಳಲಿ

ಪೊಲೀಸರು ಉತ್ತಮ ಆರೋಗ್ಯ ಬೆಳೆಸಿಕೊಳ್ಳಲಿ

Town panchayat emergency general meeting

ಪಟ್ಟಣ ಪಂಚಾಯಿತಿ ತುರ್ತು ಸಾಮಾನ್ಯ ಸಭೆ

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

Untitled-1

ಪುತ್ತೂರು: ಯುವತಿಯರೇ ಹೆಚ್ಚಿರುವ ಬಸ್‌ನಲ್ಲಿ ಅಸಭ್ಯ ವರ್ತನೆ : ಆರೋಪಿ ಬಂಧನ

154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.