ನೆರೆ ಬಂದು ಹೋದ ಮೇಲೆ

Team Udayavani, Aug 13, 2019, 12:20 PM IST

ರೋಣ: ಹೊಳೆಆಲೂರ ಗ್ರಾಮದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಯದ ಮಲಪ್ರಭಾ ನದಿ ನೀರು.

ರೋಣ: ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕಿ ಅಕ್ಷರಸಃ ನಲುಗಿ ಹೋಗಿರುವ ನೆರೆ ಸಂತ್ರಸ್ತರು ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಇನ್ನೂ ಹೆಚ್ಚು ನೀರು ಬರುವ ಸಂಭಂವವಿದೆ, ಯಾರೂ ಹಳೆಯ ಗ್ರಾಮಗಳಿಗೆ ತೆರಳಬೇಡಿ, ಇಲ್ಲಿಯೇ ವಾಸಿಸಿ ಎನ್ನುತ್ತಿದ್ದಾರೆ. ವಿಪರ್ಯಾಸವೆಂದರೆ ಸ್ಥಳಾಂತರಗೊಂಡ ‘ಆಸರೆ ಗ್ರಾಮ’ದಲ್ಲಿ ಈಗಿರುವ ಕುಟುಂಬಕ್ಕೆ ಅನುಗುಣವಾಗಿ ಮನೆಗಳಿಲ್ಲ.

2007-08ರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಅಂದು ಸರ್ಕಾರ ‘ಆಸರೆ ಗ್ರಾಮ’ವೆಂಬ ನಾಮಕರಣದೊಂದಿಗೆ ಹೊಸ ಗ್ರಾಮ ನಿರ್ಮಿಸಿಕೊಟ್ಟಿತು. ಅಮರಗೋಳ ಗ್ರಾಮದವರಿಗೆ 415 ಮನೆ, ಬಸರಕೋಡ-234, ಬಿ.ಎಸ್‌. ಬೇಲೆರಿ-389, ಹೊಳೆಆಲೂರ-473, ಹೊಳೆ ಮಣ್ಣೂರ-554, ಮಾಳವಾಡ-605, ಮೆಣಸಗಿ-1102, ಗಾಡ ಗೋಳಿ-504, ಯಾ.ಸ. ಹಡಗಲಿ-593, ಹೊಳೆಹಡಗಲಿ- 305, ಕುರವಿನಕೊಪ್ಪ-121 ಸೇರಿ ಒಟ್ಟು 5295 ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಹೊಳೆಆಲೂರಿನಲ್ಲಿ 2300 ಕುಟುಂಬ, ಬಸರಕೋಡ-300, ಬಿ.ಎಸ್‌. ಬೇಲೆರಿ-400, ಅಮರಗೋಳ- 450, ಬಸರಕೋಡ-350, ಮೇಣಸಗಿ-1250, ಹೊಳೆಹಡಗಲಿ- 385, ಕುರವಿನಕೊಪ್ಪ-150, ಗಾಡಗೋಳಿ-350, ಯಾ.ಸ.ಹಡಗಲಿ-650, ಹೊಳೆಮಣ್ಣೂರ- 664, ಮಾಳವಾಡ-710 ಕುಟುಂಬಗಳಿವೆ. ಗ್ರಾಮಗಳಲ್ಲಿ ಇರುವ ಕುಟುಂಬಗಳ ಸಂಖ್ಯೆ ಹತ್ತು ವರ್ಷದಲ್ಲಿ ಅಧಿಕವಾಗಿದ್ದು, ಸರ್ಕಾರ ನೀಡಿರುವ ಮನೆಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಸಂತ್ರಸ್ತರಿಗೆ ಇಲ್ಲಿ ಇರಲು ಜಾಗವಿಲ್ಲ. ಅಲ್ಲಿ ಇರಲು ಪ್ರವಾಹ ಮತ್ತು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಎಲ್ಲಿರಬೇಕು ಎಂಬ ಚಿಂತೆಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಇದರಿಂದ ನಿರಾಶ್ರೀತರಿಗೆ ಹೊಸ ಗ್ರಾಮದಲ್ಲಿದ್ದರು ನೋವೆ, ಹಳೆ ಗ್ರಾಮಕ್ಕೆ ಹೋದರು ನೋವೆ. ಇದರಿಂದಾಗಿ ಸಂತ್ರಸ್ತರ ಬದುಕು ನುಂಗಲಾದರ ಬಿಸಿ ತುಪ್ಪವಾಗಿದೆ.

ನೆರೆ ಪರಿಹಾರದಲ್ಲಿ ಕರ್ತವ್ಯ ಲೋಪ-ಅಧಿಕಾರಿ ಅಮಾನತು: ನೆರೆ ಪರಿಹಾರ ಕರ್ತವ್ಯದಲ್ಲಿ ಲೋಪವೆಸಗಿದ ರೊಣ ತಾಲೂಕಿನ ಹೊಳೆ ಮಣ್ಣೂರಿನ ಪಿಡಿಒ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಹೊಳೆಮಣ್ಣೂರ ಪಿಡಿಒ ಬಿ.ಎಸ್‌. ತೋಟಗಂಟಿ ಹಾಗೂ ಗ್ರೇಡ್‌-2 ಕಾರ್ಯದರ್ಶಿ ಎಂ.ಆರ್‌. ತಿಮ್ಮನಗೌಡ್ರ ಅವರನ್ನು ಅಮಾನತುಗೊಳಿಸಲಾಗಿದೆ. ಮಲಪ್ರಭಾ, ಬೆಣ್ಣಿಹಳ್ಳ ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ಸೂಚಿತ ಕಾರ್ಯಕ್ಕೆ ಗೈರು ಹಾಜರಾಗಿ ಕರ್ತವ್ಯ ಲೋಪ ಎಸಗಿದ್ದರಿಂದ ಅವರನ್ನು ಅಮಾನತುಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಆದೇಶ ಹೊರಡಿಸಿದ್ದಾರೆ.

ನಮ್ಮ ಬಳಿ 2008ರಲ್ಲಿ ನೆರೆಹಾವಳಿಗೆ ಮನೆಯನ್ನು ಕಳೆದುಕೊಂಡವರ ಪಟ್ಟಿಯಿದೆ. ಆ ಪ್ರಕಾರ ಅವರಿಗೆ ಈಗಾಗಲೇ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಿ, ಆ ಮನೆಗಳಿಗೆ ಮೂಲ ಸೌಕರ್ಯ ನೀಡುತ್ತೇವೆ. ನಂತರ ಪಟ್ಟಿಯಲ್ಲಿ ಯಾರಿಗೆ ವಸತಿ ಸಿಗುವುದಿಲ್ಲ ಅಂತವರಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಿಕೊಟ್ಟು, ನಂತರ ಅವರಿಗೂ ಮನೆ ಕಟ್ಟಿಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ.•ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

•ಯಚ್ಚರಗೌಡ ಗೋವಿಂದಗೌಡ್ರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಎರಡು ವಿಭಿನ್ನ ಸಂಸ್ಕೃತಿಗಳಲ್ಲಿ ಮೊಳಕೆಯೊಡೆಯುವ ಪ್ರೇಮಕಥೆಗಳು ವಿಸ್ತಾರಗೊಳ್ಳುತ್ತ ಒಂದಕ್ಕೊಂದು ಹೆಣೆದುಕೊಂಡು ಕಡೆಗೆ ಸಂಧಿಸಿದರೂ ದೂರವಾಗಿಯೇ ಅಂತ್ಯವಾಗುವ...

  • ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು...

  • ಕಾಂಪೋಸ್ಟ್‌ ಗೊಬ್ಬರವನ್ನು ಹರಡುವ ಯಂತ್ರಚಾಲಿತ ಉಪಕರಣ ಇದು. ಇದರ ಹೆಸರು "ಕಾಂಪೋಸ್ಟ್‌ ಸ್ಪ್ರೆಡ್ಡರ್‌'. ದೊಡ್ಡ ಪ್ರಮಾಣದಲ್ಲಿ ಕಾಂಪೋಸ್ಟ್‌ ಗೊಬ್ಬರವನ್ನು...

  • ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯಾಧ್ಯಯನ, ಸಾಹಿತ್ಯಿಕ-ಸಾಮಾಜಿಕ ಮೌಲ್ಯಗಳನ್ನು ಸಮೀಕ್ಷಿಸುವ ಉದ್ದೇಶದ ಸಂಶೋಧನ ಕಾರ್ಯಗಳಲ್ಲಿ ನಿರತರಾಗಿ ಹಲವು ವರ್ಷಗಳ...

  • ಕನ್ನಡ ನಾಡು ಕಂಡಿರುವ ಬಹುಮುಖಿ ಆಸಕ್ತಿಯ ರೇಖಾಚಿತ್ರ ಕಲಾವಿದ ಕಮಲೇಶ್‌ (1943-2014) ನಿಸರ್ಗದೃಶ್ಯ, ಸ್ಮಾರಕ ದೃಶ್ಯ, ವಿಶಿಷ್ಟ ಶಿಲ್ಪ ವೈಭವ ಕಾಣಿಸುವ ಚಿತ್ರಗಳ ರಚನೆಯ...