Udayavni Special

ಬೆಳೆಗಳ ಮೇಲೆ ವಿದೇಶಿ ಪಕ್ಷಿ ಗಳ ದಾಳಿ


Team Udayavani, Dec 12, 2019, 2:31 PM IST

gadaga-tdy-1

ಲಕ್ಷ್ಮೇಶ್ವರ: ತಾಲೂಕಿನ ಮಾಗಡಿ ಕೆರೆಗೆ ಆಗಮಿಸುವ ವಿದೇಶಿ ಪಕ್ಷಿಗಳು ರೈತರು ಬೆಳೆದ ಕಡಲೆ, ಶೇಂಗಾ, ಸೂರ್ಯಕಾಂತಿ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ. ಮಾಗಡಿ ಸುತ್ತಮುತ್ತಲಿನ ಗ್ರಾಮಗಳಾದ ಬಸಾಪುರ, ರಾಮಗೇರಿ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ಗೊಜನೂರ, ಲಕ್ಷ್ಮೇಶ್ವರದ ಯಳವತ್ತಿ, ಗುಂಜಳ ರಸ್ತೆಯ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಬೆಳೆಯ ಎಸೆಳನ್ನು ತಿಂದು ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿ ನಷ್ಟದಲ್ಲಿರುವ ರೈತ ಸಮುದಾಯ ಈಗ ವಿದೇಶಿ ಪಕ್ಷಿಗಳ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ.

ಬೆಳೆ ಉಳಿಸಿಕೊಳ್ಳಲು ರೈತರು ಚಳಿಯ ನಡುವೆಯೂ ನಸುಕಿನ ಜಾವ ಮತ್ತು ಸಂಜೆ ಗತ್ತಲ ಅವ ಧಿಯಲ್ಲಿ ಜಮೀನಿನಲ್ಲಿ ಹಕ್ಕಿ ಕಾಯುವುದು ಅನಿವಾರ್ಯವಾಗಿದೆ. ಅಲ್ಲದೇ ಜಮೀನಿನಲ್ಲಿ ಪ್ಲಾಸ್ಟಿಕ್‌ ಹಾಳೇ ಕಟ್ಟುವುದು, ಖಾಲಿ ಬೀರ್‌ ಬಾಟಲ್‌ ಕಟ್ಟಿ ಸಪ್ಪಳ ಮಾಡುವ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ಚಳಿಗಾಲಕ್ಕೆ ಆಗಮಿಸುವ ಈ ಪಕ್ಷಿಗಳು ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಆಹಾರ ಅರಸುತ್ತಾ ನೂರಾರು ಕಿ.ಮೀ ಸುತ್ತಾಡಿ ಕೊನೆಗೆ ಲಭ್ಯವಾಗುವ ಎಳೆಯ ಬೆಳೆ, ಶೇಂಗಾ, ಸೂರ್ಯಕಾಂತಿ ಬೆಳೆ ತಿನ್ನುತ್ತಿವೆ. ಈ ಬಾರಿ ಕೆರೆಯ ಆಸುಪಾಸಿನ ಗ್ರಾಮಗಳ ರೈತರು ಹಿಂಗಾರಿಗೆ ಬಹಳಷ್ಟು ಕಡಲೆ ಬೆಳೆ ಬೆಳೆದಿರುವುದರಿಂದ ಎಳೆಯ ಎಸಳನ್ನು ತಿಂದು ಹಾಕುತ್ತಿವೆ. ಈ ವರ್ಷ ಮೊದಲೇ ಬಿತ್ತನೆಗೆ ತಡವಾಗಿದ್ದು, ಇದೀಗ ನೆಲಬಿಟ್ಟು ಮೇಲೇಳುತ್ತಿರುವ ಕಡಲೆ ಬೆಳೆಯನ್ನೇ ಗುರಿಯಾಗಿಸಿ ಯಾರೂ ಇಲ್ಲದ ಸಮಯದಲ್ಲಿ ಜಮೀನಿಗಿಳಿದು ಸಾಲುಗಟ್ಟಿ ಮೇಯುತ್ತಿವೆ. ಇದರಿಂದಾಗಿ ರೈತರು ಯಾರನ್ನು ಕೇಳಬೇಕು ಎಂದು ರೈತರು ದಿಕ್ಕು ತೋಚದಂತಾಗಿದ್ದಾರೆ.

ಪಕ್ಷಿಗಳಿಂದ ಬೆಳೆಹಾನಿಗೀಡಾದ ಲಕ್ಷ್ಮೇಶ್ವರದ ರೈತ ರವಿ ಎಸ್‌ ಕುಡವಕ್ಕಲಿಗೇರ, ದುಂಡೇಶ ಕೊಟಗಿ ಅವರು ಮಾತನಾಡಿ, “ಮುಂಗಾರಿನಲ್ಲಿ ಯಾವುದೇ ಬೆಳೆಯನ್ನು ಬೆಳೆಯದೇ ಹಿಂಗಾರಿಗಾಗಿ ಸಿದ್ಧಪಡಿಸಿದ್ದ 16 ಎಕರೆ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಲಾಗಿತ್ತು. 20 ದಿನಗಳ ಅವಧಿಯ ಕಡಲೆ ಬೆಳೆ ಮಾಗಡಿ ಕೆರೆಯಲ್ಲಿರುವ ಪಕ್ಷಿಗಳು ತಿಂದು ಹಾಕಿದ್ದರಿಂದ ಬೆಳೆ ಹಾನಿಗೀಡಾಗಿದೆ. ಅದಕ್ಕಾಗಿ ಪ್ರತಿ ಎಕರೆಗೆ ಕನಿಷ್ಠ 6-8 ಸಾವಿರ ಖರ್ಚು ಮಾಡಿದ್ದು, ಹಿಂಗಾರಿಯ ಈ ಬೆಳೆಯ ಮೇಲೆ ನಂಬಿಕೊಂಡಿದ್ದ ಕನಸು ನುಚ್ಚು ನೂರಾಗಿದೆ ಎಂದು ನೋವು ತೋಡಿಕೊಂಡರು.

ಟಾಪ್ ನ್ಯೂಸ್

ಬಿಎಸ್‌ವೈ ಸಂಪುಟದ ಪಡಿಯಚ್ಚು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ghnfttryutr

ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

yrtyr

ಗದಗ:  ಜಿಲ್ಲೆಯ ದಶಕಗಳ ಬೇಡಿಕೆಗಳಿಗೆ ರೆಕ್ಕೆ-ಪುಕ್ಕ

ಉಕ್ಕಿದ ಬೆಣ್ಣೆಹಳ್ಳ; ಹೊಳೆಆಲೂರು- ಮೆಣಸಗಿ ಸಂಪರ್ಕ ಕಡಿತ

ಉಕ್ಕಿದ ಬೆಣ್ಣೆಹಳ್ಳ; ಹೊಳೆಆಲೂರು- ಮೆಣಸಗಿ ಸಂಪರ್ಕ ಕಡಿತ

20bgv-13

ರೈತ ಬಂಡಾಯದ “ಮೇಳಿ ಕಾಳಗ’ಕ್ಕೆ  41 ವರ್ಷ

Crop

ಹೆಚ್ಚಿದ ಮಳೆ: ರೈತರಿಗೆ ಬೆಳೆ ನಷ್ಟದ ಆತಂಕ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಬಿಎಸ್‌ವೈ ಸಂಪುಟದ ಪಡಿಯಚ್ಚು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.