Udayavni Special

ಬೆಳ್ಳಟ್ಟಿ ಬಸ್‌ ನಿಲ್ದಾಣ ಥೂ.. ಗಬ್ಬು..!

ಕ್ಯಾರೇ ಎನ್ನುತ್ತಿಲ್ಲ ಅಧಿಕಾರಿಗಳು ಮೂಗು ಮುಚ್ಚಿಕೊಂಡೇ ಹೋಗುವುದು ಅನಿವಾರ್ಯ

Team Udayavani, Jul 12, 2019, 2:32 PM IST

gadaga-tdy-4..

ಶಿರಹಟ್ಟಿ: ಬೆಳ್ಳಟ್ಟಿ ಗ್ರಾಮದ ಬಸ್‌ ನಿಲ್ದಾಣದ ಮೂತ್ರ ವಿಸರ್ಜನೆ ಹಾಗೂ ಶೌಚಾಲಯ ಪೈಪ್‌ಲೈನ್‌ ಒಡೆದಿದ್ದರಿಂದ ರಸ್ತೆಯುದ್ದಕ್ಕೂ ಗಲೀಜು ನೀರು ಹರಿಯುತ್ತಿದೆ.

ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಪೈಪ್‌ಲೈನ್‌ ಒಡೆದು ಬ್ಲಾಕ್‌ ಆಗಿದ್ದರಿಂದ ಮಲಮೂತ್ರ ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಬೆಳ್ಳಟ್ಟಿ ಸುಮಾರು 10ಸಾವಿರ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ದಿನದಿಂದ ದಿನಕ್ಕೆ ವ್ಯಾಪಾರು-ವಹಿವಾಟು ಹೆಚ್ಚುತ್ತಿದೆ. ಆದರೆ ಬಸ್‌ ನಿಲ್ದಾಣದಲ್ಲಿರುವ ಗಲೀಜು ಮಾತ್ರ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಮೂಗು ಮುಚ್ಚಕೊಂಡೇ ಹೋಗಬೇಕು: ಗ್ರಾಮದ ಕೇಂದ್ರ ಸ್ಥಳದಲ್ಲಿ ಬಸ್‌ ನಿಲ್ದಾಣ ಇರುವುದರಿಂದ ಸುತ್ತಮುತ್ತಲಿನ 30-35 ಗ್ರಾಮಗಳ ಜನರು ನಿತ್ಯ ತಮ್ಮ ವ್ಯಾಪಾರ-ವಹಿವಾಟು ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಂದ ಗ್ರಾಮದ ಯಾವುದೇ ಭಾಗಗಳಿಗೆ ಹೋಗಬೇಕೆಂದರೂ ಇಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ಗಲೀಜನ್ನು ತುಳಿದೇ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಅದು ಅಲ್ಲದೇ ಇಲ್ಲಿ ನಡೆದುಕೊಂಡು ಹೋಗುವವರು ಮೂಗು ಮುಚ್ಚಿಕೊಂಡು ಅಕಾರಿಗಳಿಗೆ ಶಾಪ ಹಾಕುತ್ತ ಸಂಚರಿಸುತ್ತಿದ್ದಾರೆ.

ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ: ಮೂತ್ರ ವಿಸರ್ಜನೆ ಪೈಪ್‌ಲೈನ್‌ ದುರಸ್ತಿಗೊಳಿಸಿ ಶುಚಿತ್ವ ಕಾಪಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಮ್ಮ ಮೊಬೈಲ್ನ್ನು ತಮ್ಮ ಸಿಬ್ಬಂದಿ ಕೈಯಲ್ಲಿ ನೀಡಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈ ಕೂಡಲೇ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದೇ ಹೋದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಪಂ ಸದಸ್ಯರು ಎಚ್ಚರಿಸಿದ್ದಾರೆ.

ಎಚ್ಚೆತ್ತುಕೊಳ್ಳುವುದು ಅವಶ್ಯ: ಸದ್ಯ ಮುಂಗಾರು ಮಳೆ ಪ್ರವೇಶವಾಗಿದ್ದರಿಂದ ಆಗಾಗ ಮಳೆ ಬರುತ್ತಿರುವುದರಿಂದ, ರಸ್ತೆಯುದ್ದಕ್ಕೂ ಈ ಗಲೀಜು ನೀರು ಹರಿದುಕೊಂಡು ಹೋಗುತ್ತಿರುವ ಪರಿಣಾಮ ಸಾರ್ವಜನಿಕರ ಆರೋಗ್ಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಸಾರಿಗೆ ಸಂಸ್ಥೆ ಈ ಕುರಿತು ಎಚ್ಚೆತ್ತುಕೊಳ್ಳುವುದು ಅವಶ್ಯವಿದೆ.

•ಪ್ರಕಾಶ.ಶಿ.ಮೇಟಿ

ಟಾಪ್ ನ್ಯೂಸ್

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಸೋಂಕು : ಕೇಂದ್ರದ ಅಧ್ಯಯನದಿಂದಲೇ ದೃಢ

ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಸೋಂಕು : ಕೇಂದ್ರದ ಅಧ್ಯಯನದಿಂದಲೇ ದೃಢ

gthrtht

ಸೋಮವಾರದ ನಿಮ್ಮ ರಾಶಿಫಲ ಹೇಗಿದೆ ಗೊತ್ತಾ : ಇಲ್ಲಿದೆ ಓದಿ

ganguly

ಇಂಗ್ಲೆಂಡ್‌ನ‌ಲ್ಲಿ ಐಪಿಎಲ್‌ ಮುಂದುವರಿಯುವುದು ಅಸಾಧ್ಯ: ಗಂಗೂಲಿ ಸ್ಪಷ್ಟನೆ

ಚೀನದ‌ ಜೈವಿಕ ಸಮರದ ಹುನ್ನಾರ: ಮನುಕುಲಕ್ಕೇ ಮಾರಕ

ಚೀನದ‌ ಜೈವಿಕ ಸಮರದ ಹುನ್ನಾರ: ಮನುಕುಲಕ್ಕೇ ಮಾರಕ

ಮುಂಬಯಿ ಕೋವಿಡ್ ಗೆದ್ದಿದ್ದು ಹೇಗೆ?

ಮುಂಬಯಿ ಕೋವಿಡ್ ಗೆದ್ದಿದ್ದು ಹೇಗೆ?

ಎಸ್‌ಬಿಐ: 5,237 ಹುದ್ದೆಗಳಿಗೆ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೇ 17 ಕಡೆಯ ದಿನ

ಎಸ್‌ಬಿಐ: 5,237 ಹುದ್ದೆಗಳಿಗೆ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೇ 17 ಕಡೆಯ ದಿನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiuyiyu

ಕೋವಿಡ್ ವಿರುದ್ಧ ಸಮರ ಸಾರಲು “ಕಿಯಾಸ್ಕ್’

ipiopipio

ಆಕ್ಸಿಜನ್‌-ರೆಮ್‌ಡಿಸಿವರ್‌ ಮಿತವಾಗಿ ಬಳಸಿ  : ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

uyuty6u

ಜಿಮ್ಸ್‌ ಗೆ ಶೀಘ್ರ 10 ವೆಂಟಿಲೇಟರ್‌ ಆಗಮನ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಸೋಂಕು : ಕೇಂದ್ರದ ಅಧ್ಯಯನದಿಂದಲೇ ದೃಢ

ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಸೋಂಕು : ಕೇಂದ್ರದ ಅಧ್ಯಯನದಿಂದಲೇ ದೃಢ

gthrtht

ಸೋಮವಾರದ ನಿಮ್ಮ ರಾಶಿಫಲ ಹೇಗಿದೆ ಗೊತ್ತಾ : ಇಲ್ಲಿದೆ ಓದಿ

ganguly

ಇಂಗ್ಲೆಂಡ್‌ನ‌ಲ್ಲಿ ಐಪಿಎಲ್‌ ಮುಂದುವರಿಯುವುದು ಅಸಾಧ್ಯ: ಗಂಗೂಲಿ ಸ್ಪಷ್ಟನೆ

ಚೀನದ‌ ಜೈವಿಕ ಸಮರದ ಹುನ್ನಾರ: ಮನುಕುಲಕ್ಕೇ ಮಾರಕ

ಚೀನದ‌ ಜೈವಿಕ ಸಮರದ ಹುನ್ನಾರ: ಮನುಕುಲಕ್ಕೇ ಮಾರಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.