ಕೈ ಅಭ್ಯರ್ಥಿ ಸ್ವಗ್ರಾಮ ಹುಲಕೋಟಿಯಲ್ಲಿ ಬಿಜೆಪಿ ಪ್ರಚಾರ

Team Udayavani, Apr 17, 2019, 12:25 PM IST

ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪ್ರಚಾರಾರ್ಥವಾಗಿ ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ಅವರ ಸ್ವಗ್ರಾಮ ಹುಲಕೋಟಿಯಲ್ಲಿ ಚುನಾವಣಾ ಬೃಹತ್‌ ರ್ಯಾಲಿ ನಡೆಸಿದರು.

ಹುಲಕೋಟಿ ಬಸ್‌ ನಿಲ್ದಾಣದಿಂದ ಸಂಜೆ 5ರ ಸುಮಾರಿಗೆ ಆರಂಭಗೊಂಡ ಬಿಜೆಪಿ ರ್ಯಾಲಿ ರಾತ್ರಿ 8ರ ವರೆಗೆ ನಡೆಯಿತು. ಕೆಲ ಗಂಟೆಗಳ ಕಾಲ ಗ್ರಾಮದ ಓಣಿ ಓಣಿಗೆ ಭೇಟಿ ನೀಡಿ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಚೌಕೀದಾರ್‌ ಪರ ಜಯಘೋಷಣೆಗಳನ್ನು ಮೊಳಗಿಸುತ್ತಾ ಮತಯಾಚಿಸಿದರು.

ಈ ನಡುವೆ ಅಲ್ಲಲ್ಲಿ ಗ್ರಾಮದ ಮಹಿಳೆಯರು, ಸಾರ್ವಜನಿಕರಿಗೆ ಬಿಜೆಪಿ ಚುನಾವಣಾ ಕರ ಪತ್ರ ತಲುಪಿಸಿದ ಅನಿಲ್‌ ಮೆಣಸಿನಕಾಯಿ, ಕೇಂದ್ರ ಬಿಜೆಪಿ ಸರಕಾರದ ಸಾಧನೆಗಳನ್ನು ವಿವರಿಸಿದರು. ರ್ಯಾಲಿ ಮಧ್ಯೆ ಅಲ್ಲಲ್ಲಿ ಎದುರಾದ ಗ್ರಾಮಸ್ಥರಿಗೆ ಬಿಜೆಪಿ ಕರ ಪತ್ರ ನಿಡುವುದರೊಂದಿಗೆ ಬಿಜೆಪಿ ಪ್ರಾಚಾರಕ್ಕೆ ಸಾಥ್‌ ನೀಡುವಂತೆ ಆಹ್ವಾನಿಸಿದರು. ಈ ವೇಳೆ ಕೆಲವರು ನಾಲ್ಕಾರು ಹೆಜ್ಜೆ ಹಾಕಿ, ತಮ್ಮ ಕಾರ್ಯಗಳತ್ತ ಮರಳಿದರು. ಅಲ್ಲದೇ, ಮನೆ ಮನೆ ಪ್ರಚಾರ ನಡೆಸಿದ ಬಿಜೆಪಿ ಕಾರ್ಯಕ ರ್ತರು ಅಲ್ಲಲ್ಲಿ ಕುಡಿಯಲು ನೀರು ಕೇಳುವೊಂದರೊಂದಿಗೆ ಗ್ರಾಮಸ್ಥರಲ್ಲಿ ಆತ್ಮೀಯತೆ ಬೆಳೆಸಲು ಪ್ರಯತ್ನಿಸಿದರು.

ಬಿಜೆಪಿ ಮುಖಂಡರಾದ ರಾಜು ಕುರಡಗಿ, ಅಶೋಕ ಸಂಕಣ್ಣವರ, ಮೋಹನ ಮಾಳಶೆಟ್ಟಿ, ರವಿ ದಂಡಿನ, ರಮೇಶ ಸಜ್ಜಗಾರ, ಭದ್ರೇಶ ಕುಸಲಾಪುರ, ಅರವಿಂದ ಹುಲ್ಲೂರ, ರಾಘವೆಂದ್ರ ಯಳವತ್ತಿ, ವಿನಾಯಕ ಮಾನ್ವಿ, ಸಿದ್ದು ಪಲ್ಲೇದ, ದ್ಯಾಮಣ್ಣ ನೀಲಗುಂದ, ತೊಟದ, ಬಸವಣ್ಣಯ್ಯ ಹಿರೇಮಠ, ಸುದೀರ ಕಾಟಿಗೇರ, ವಾಣಿ ಮೆಣಸಿನಕಾಯಿ, ಆಶ್ವಿ‌ನಿ ಜಗತಾಪ, ಶಾರದಾ ಹಿರೇಮಠ, ಜಯಶ್ರೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ ಅನೇಕರು ಇದ್ದರು.

ಬಿಗುವಿನ ವಾತಾವರಣ ರಾತ್ರಿ 8 ಗಂಟೆಗೆ ಗ್ರಾಮದಲ್ಲಿ ಪ್ರಚಾರ ಮುಗಿಸಿ ಬಿಜೆಪಿ ಕಾರ್ಯಕರ್ತರು ಹೆದ್ದಾರಿಗೆ ಮರಳುತ್ತಿದ್ದಂತೆ ಯಾರೋ ಕಿಡಿಗೇಡಿಗಳು ಬಿಜೆಪಿ ಕಾರ್ಯ ಕರ್ತರನ್ನು ಉದ್ದೇಶಿಸಿ ಅವಹೇಳನಕಾರಿ ಪದ ಬಳಸಿದರು ಎನ್ನಲಾಗಿದೆ. ಇದರಿಂದ ಕೆರಳಿದ ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ, ಇಲ್ಲಿಗೆ ಗೂಂಡಾಗಿರಿ ಮಾಡಲು ಬಂದಿಲ್ಲ. ನಿಮ್ಮ ಗೂಂಡಾಗಿರಿಯೂ ನಡೆಯಲ್ಲ. ಕಿಡಿಗೇಡಿಗಳನ್ನು ತಕ್ಷಣವೇ ಪೊಲೀಸರು ಬಂಧಿ ಸಬೇಕು ಎಂದು ಒತ್ತಾಯಿಸಿದರು. ಇದರಿಂದ ಕ್ಷಣಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ವೇಳೆ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು ಎಂದು ತಿಳಿದು ಬಂದಿದೆ. ಹುಲಕೋಟಿಯಲ್ಲಿ ಬಿಜೆಪಿ ಪ್ರಚಾರಕ್ಕೆ ಅಗತ್ಯ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುಂಡರಗಿ: ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಡೆಂಘೀ ಜ್ವರದ ಬಾಧೆಯಿಂದ ಬಳಲುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ. ಜ್ವರದ ಭೀತಿಯಿಂದ ಜನ ಆತಂಕಗೊಂಡಿದ್ದಾರೆ. ಕಳೆದ...

  • ನರೇಗಲ್ಲ: ಸ್ಥಳೀಯ ಪಟ್ಟಣ ಪಂಚಾಯತ್‌ ಹಾಗೂ ನಾಡ ಕಚೇರಿ ಮೈದಾನದಲ್ಲಿ ವಿವಿಧ ಅನುದಾನ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ.ಪಂ ವತಿಯಿಂದ ನಿರ್ಮಿಸಿರುವ ಬಯಲು...

  • ಗದಗ: ಹತ್ತಾರು ಕುಂದುಕೊರತೆ ಹೊತ್ತು ಬರುವ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸುವ ಜಿಲ್ಲಾಡಳಿತ ತನ್ನ ಭವನದಲ್ಲೇ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಪ್ರತಿನಿತ್ಯ...

  • ಲಕ್ಷ್ಮೇಶ್ವರ: ಕನ್ನಡ ಸಾರಸ್ವತ ಲೋಕಕ್ಕೆ ತಿರುಳ್ಗನ್ನಡ ಭಾಷೆ ನೀಡಿದ ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವಾದ ಪುಲಿಗೆರೆ(ಲಕ್ಷೇಶ್ವರ)ಯಲ್ಲಿ ಆದಿಕವಿ ಪಂಪನ ಹೆಸರಿನಲ್ಲಿ...

  • ಗದಗ: ಜಿಲ್ಲೆಯಲ್ಲಿ ಡಿಬಿಒಟಿ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ನದಿ ನೀರು ಪೂರೈಕೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎನ್ನುತ್ತಿದ್ದಿರಿ. ಆದರೆ, ಇನ್ನೂ 20 ಗ್ರಾಮಗಳಲ್ಲಿ...

ಹೊಸ ಸೇರ್ಪಡೆ