ಬಸ್ ನ ಬ್ರೇಕ್ ವೈಫಲ್ಯವಾದರೂ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
Team Udayavani, Mar 18, 2021, 1:05 PM IST
ಗದಗ: ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯವಾದರೂ, ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರೀ ಅಪಾಯವೊಂದು ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿರಹಟ್ಟಿ ಯಿಂದ ಮುಂಡರಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಾಗೇವಾಡಿ ಗ್ರಾಮದ ಬಳಿ ಬಸ್ ಬ್ರೇಕ್ ವೈಫಲ್ಯವಾಗಿತ್ತು. ತಕ್ಷಣ ಎಚ್ವೆತ್ತುಕೊಂಡ ಬಸ್ ಚಾಲಕ ಸಿದ್ದಪ್ಪ ಗುದ್ದಿನ್, ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ಬಸ್ ಏರಿಸಿದ್ದಾರೆ. ಇದರಿಂದ ಬಸ್ ನ ವೇಗ ಕ್ರಮೇಣ ಕಡಿಮೆಯಾಗಿ ನಿಂತಿದೆ.
ಇದನ್ನೂ ಓದಿ:ಬೆಳಗಾವಿ ಉಪಚುನಾವಣೆ: ಹೈಕಮಾಂಡ್ ಹೇಳಿದರೆ ಸ್ಪರ್ಧೆಗೆ ಸಿದ್ದ ಎಂದ ಸತೀಶ್ ಜಾರಕಿಹೊಳಿ
ಚಾಲಕನ ಈ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಪ್ಪಿದೆ. ಬಳಿಕ ಮತ್ತೊಂದು ಬಸ್ ನಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ.
ಬಸ್ ಚಾಲಕನ ಚಾಣಾಕ್ಷತನಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ರೈಲು: ತಪ್ಪಿದ ಭಾರಿ ದುರಂತ