Udayavni Special

ಚುರ್ಚಿಹಾಳದ ಏಕೈಕ ಶಾಲೆಗೆ ತೂಗುಗತ್ತಿ

ಪರಿಹಾರ ನೀಡುವಂತೆ ಭೂ ದಾನಿಗಳ ಪಟ್ಟು ,ಡಿಸಿ ಗ್ರಾಮ ವಾಸ್ತವ್ಯದಲ್ಲಿ ಬಗೆಹರಿಯುವುದೇ ಸಮಸ್ಯೆ?

Team Udayavani, Feb 17, 2021, 6:17 PM IST

ಚುರ್ಚಿಹಾಳದ ಏಕೈಕ ಶಾಲೆಗೆ ತೂಗುಗತ್ತಿ

ಗದಗ: ಗ್ರಾಮದ ಏಕೈಕ ಜ್ಞಾನ ದೇಗುಲವೆಂಬ ಹಿರಿಮೆ ಹೊಂದಿರುವ ಜಿಲ್ಲೆಯ ಚುರ್ಚಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಗ್ರಾಮದಲ್ಲಿ ಸರಕಾರಿ ಶಾಲೆ ಸ್ಥಾಪನೆಗಾಗಿ ದಶಕಗಳ ಹಿಂದೆ ಭೂ ದಾನ ನೀಡಿದ್ದ ದಾನಿಗಳು ಈಗ ಭೂಮಿಗೆ ಪರಿಹಾರಒತ್ತಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ಶಾಲೆಯಲ್ಲಿ ಹೊಸ ಕೋಣೆಗಳ ನಿರ್ಮಾಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯ ಹಮ್ಮಿಕೊಂಡಿರುವುದು ಶಾಲೆ ವಿವಾದ ಸೇರಿದಂತೆ ಮತ್ತಿತರೆ ಸಮಸ್ಯೆ ಬಗೆಹರಿಯುವ ಕನಸು ಚಿಗುರೊಡೆದಿದೆ.ಮುಂಡರಗಿ ತಾಲೂಕಿನ ಕಂದಾಪುರ ಗ್ರಾಪಂ ವ್ಯಾಪ್ತಿಯ ಚುರ್ಚಿಹಾಳ ಗ್ರಾಮದಲ್ಲಿ 1955ರಲ್ಲಿ ಊರಿನ ಪ್ರಮುಖ ಆಸಕ್ತಿಯಿಂದಾಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. ಶಾಲೆಯಲ್ಲಿ ಮಕ್ಕಳ ಹಾಜರಾತಿಹಾಗೂ ಕಲಿಕಾ ಮಟ್ಟವೂ ಉತ್ತಮವಾಗಿತ್ತು. ಹೀಗಾಗಿಅಂದಿನ ಸರಕಾರ ಪ್ರಾಥಮಿಕ ಶಾಲೆ ಮತ್ತು ಎರಡುಕೊಠಡಿಗಳನ್ನೂ ಮಂಜೂರು ಮಾಡಿತ್ತು. 22-7-1973ರಲ್ಲಿಮೈಸೂರು ರಾಜ್ಯ ಸರಕಾರದ ಸಮಾಜ ಕಲ್ಯಾಣ ಮತ್ತುಅಭಿವೃದ್ಧಿ ಸಚಿವರಾಗಿದ್ದ ಎಂ.ಮಲ್ಲಿಕಾರ್ಜುನ ಅವರುಶಂಕುಸ್ಥಾಪನೆ ನೆರವೇರಿಸಿದ್ದರು. ಗ್ರಾಮದ ಮಕ್ಕಳಿಗೆ ಜ್ಞಾನದ ಜ್ಯೋತಿ ಬೆಳಗಿರುವ ಶಾಲೆಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

ಗ್ರಾಮದ ಏಕೈಕ ಶಾಲೆ :

ಮುಂಡರಗಿ ತಾಲೂಕಿನ ಚುರ್ಚಿಹಾಳ ಅತ್ಯಂತ ಪುಟ್ಟ ಗ್ರಾಮ. 2010ರ ಜನಗಣತಿ ಪ್ರಕಾರ 870 ಜನಸಂಖ್ಯೆ ಇದ್ದು, ಗ್ರಾಮದ ಏಕೈಕ ಶಾಲೆ ಇದಾಗಿದೆ. 1ರಿಂದ 8ನೇ ತರಗತಿ ವರೆಗಿನ ಈಶಾಲೆ, ಸುಸಜ್ಜಿತ ಕಟ್ಟಡ ಹಾಗೂ ಗುಣಮಟ್ಟದಕಲಿಕೆಗೆ ಖ್ಯಾತಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳುಕದಾಂಪುರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ.ಅಲ್ಲದೇ, ಸರಕಾರಿ ಶಾಲೆ ಮೇಲಿನ ಗ್ರಾಮಸ್ಥರ ಒಲವಿನಿಂದಾಗಿ ಖಾಸಗಿ ಶಾಲೆಗಳು ನೆಲೆಯೂರಲುಸಾಧ್ಯವಾಗಿಲ್ಲ ಎಂಬುದು ವಿಶೇಷ.

ಶಾಲೆಯ ವಿವಾದವೇನು? :

ಆರು ದಶಕಗಳ ಹಿಂದೆ ಗ್ರಾಮಕ್ಕೆ ಸರಕಾರ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಆಗ ಗ್ರಾಮದ ಪ್ರಮುಖರಾಗಿದ್ದ ಅಂದಾನಪ್ಪ ವೀರಪ್ಪ ಕವಲೂರ ಎಂಬುವರರು ಶಾಲೆಗೆ 20 ಗುಂಟೆ ಜಮೀನು ದಾನವಾಗಿ ನೀಡಿದ್ದರು. ಅಂದಿನಿಂದ ಈವರೆಗೆ ಅದೇ ಜಾಗೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದೆ. ದಾನಿ ಅಂದಾನಪ್ಪ ಅವರ ದತ್ತ ಪುತ್ರನೂ ಶಾಲೆಯಲ್ಲಿ ಅಭಿವೃದ್ಧಿಗಾಗಿ

ಗ್ರಾಮಸ್ಥರೊಂದಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಆದರೆ, ಅಂದಾನಪ್ಪ ಅವರು ಭೂಮಿ ದಾನ ನೀಡಿರುವ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆದಿಲ್ಲ. ಕೇವಲ ಮೌಖೀಕ ಒಪ್ಪಿಗೆ ಮೇರೆಗೆಸರಕಾರದಿಂದ ವಿವಿಧ ಹಂತದಲ್ಲಿ ಒಟ್ಟು 10 ಕೊಠಡಿಗಳು ತಲೆ ಎತ್ತಿವೆ. ಆದರೆ, ಶಾಲೆಗೆ ಜಮೀನು ಕಾನೂನಾತ್ಮಕವಾಗಿ ಹಸ್ತಾಂತರವಾಗಿಲ್ಲ ಎಂಬುದನ್ನು ಅರಿತಿರುವ ದಾನಿಗಳ ವಾರಸುದಾರರು ಭೂಮಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪರಿಹಾರನೀಡುವವರಿಗೆ ಹೊಸದಾಗಿ ಮಂಜೂರಾಗಿರುವ ಮೂರು ಕೊಠಡಿಗಳ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲವೆಂದು ಅಂದಾನಪ್ಪ ಅವರ ಪುತ್ರ ಶರಣಪ್ಪ ಎ.ಕವಲೂರ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಶಾಲೆಯ ಜಮೀನು ವಿವಾದದ ರೂಪ ಪಡೆದಿದೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ಎನ್‌.ಎ.ನದಾಫ್‌

ಚರಂಡಿ-ವಸತಿ ಮನೆಗಳ ಬೇಡಿಕೆ :

ಗ್ರಾಮದ ದ್ಯಾವಮ್ಮ ದೇವಸ್ಥಾನ ರಸ್ತೆಯಲ್ಲಿ ಸುಸಜ್ಜಿತ ರಸ್ತೆ, ಚರಂಡಿಗಳಿಲ್ಲ. ಹೀಗಾಗಿ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದು, ದೊಡ್ಡ ಗಟಾರು ಮತ್ತು ರಸ್ತೆ ನಿರ್ಮಿಸಬೇಕು. ಚರಂಡಿಗಳನ್ನು ನಿಯಮಿತವಾಗಿ ಸ್ವತ್ಛತೆಗೊಳಿಸಬೇಕು.ಗ್ರಾಮದ ಕೆಲ ಫಲಾನುಭವಿಗಳ ಮಾಸಾಶನ ಸ್ಥಗತಿಗೊಂಡಿದ್ದು, ಮಾಸಾಶನ ಪುನಾರಂಭಿಸಬೇಕು. ವಸತಿ ರಹಿತರಿಗೆ ನಿವೇಶನ ಒದಗಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾಗಿವೆ.

ಡಿಸಿ ಗ್ರಾಮವಾಸ್ತವ್ಯ ಹೆಚ್ಚಿಸಿದ ನಿರೀಕ್ಷೆ :  ಶಾಲೆಯ ಹೊಸ ಕೋಣೆಗಳು

ಮುಕ್ತಾಯ ಹಂತಕ್ಕೆ ತಲುಪಿವೆ. ಈ ನಡುವೆ ದಾನಿಗಳ ವಾರಸುದಾರರು ತಡೆಯಾಜ್ಞೆತಂದಿದ್ದರಿಂದ ಅಭಿವೃದ್ಧಿ ಕಾರ್ಯಕ್ಕೆ ಗ್ರಹಣ ಹಿಡಿದಿದೆ. ಇದರ ಬೆನ್ನಲ್ಲೇಫೆ.20ರಂದು ಗ್ರಾಮದಲ್ಲಿ ಜಿಲ್ಲಾ ಧಿಕಾರಿಎಂ. ಸುಂದರೇಶ್‌ ಬಾಬು ವಾಸ್ತವ್ಯಹೂಡುತ್ತಿರುವುದು ಗ್ರಾಮಸ್ಥರಲ್ಲಿ ಭರವಸೆ ಹೆಚ್ಚಿಸಿದೆ.

 

-ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…

ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8.14 ಲಕ್ಷ ಉಳಿತಾಯ ಬಜೆಟ್‌ ಮಂಡನೆ

8.14 ಲಕ್ಷ ಉಳಿತಾಯ ಬಜೆಟ್‌ ಮಂಡನೆ

puttaraja

ಪಂ|ಪುಟ್ಟರಾಜರ 107ನೇ ಜಯಂತೋತ್ಸವ: ಭವ್ಯ ಮೆರವಣಿಗೆ

ಕೆಲಸ ಮಾಡಲು ಇಚ್ಛೆ ಇಲ್ಲದಿದ್ರೆ ವರ್ಗವಾಗಿ ಹೋಗಿ

ಕೆಲಸ ಮಾಡಲು ಇಚ್ಛೆ ಇಲ್ಲದಿದ್ರೆ ವರ್ಗವಾಗಿ ಹೋಗಿ

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

ಸರ್ವಜ್ಞನ ವಚನಗಳಿಂದ ಸಮಾಜ ಬದಲಾವಣೆ

ಸರ್ವಜ್ಞನ ವಚನಗಳಿಂದ ಸಮಾಜ ಬದಲಾವಣೆ

MUST WATCH

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

ಹೊಸ ಸೇರ್ಪಡೆ

ಗದ್ದೆಗೆ ನುಗ್ಗಿದ ಉಪ್ಪುನೀರು: ನಾಶವಾದ ಮಟ್ಟುಗುಳ್ಳ ಬೆಳೆ!

ಗದ್ದೆಗೆ ನುಗ್ಗಿದ ಉಪ್ಪುನೀರು: ನಾಶವಾದ ಮಟ್ಟುಗುಳ್ಳ ಬೆಳೆ!

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…

ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.