ಶುದ್ಧ ಕುಡಿವ ನೀರಿನ ಯೋಜನೆ ಕಾಮಗಾರಿ ಸ್ಥಗಿತ


Team Udayavani, Apr 12, 2021, 3:32 PM IST

ಶುದ್ಧ ಕುಡಿವ ನೀರಿನ ಯೋಜನೆ ಕಾಮಗಾರಿ ಸ್ಥಗಿತ

ಮುಂಡರಗಿ: ಪಟ್ಟಣದ ಜನರಿಗೆ ನಿರಂತರವಾಗಿ24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವಯೋಜನೆ ಕಾಮಗಾರಿ ಕಳೆದ ಮೂರುವರ್ಷಗಳಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡಿದೆ.ಇದರಿಂದ ಪಟ್ಟಣ ವ್ಯಾಪ್ತಿಯ ಸುಮಾರು 25ಸಾವಿರ ಜನರು ನಿರಂತರ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ.

ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜನರು ಶುದ್ಧ ಕುಡಿಯುವ ನೀರುಯೋಜನೆಯಿಂದ ವಂಚಿತ ವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿರುವಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಣೆ ಇಲ್ಲದೇ ಇರುವುದರಿಂದಶುದ್ಧ ಕುಡಿಯುವ ನೀರು ಕುಡಿಯಲುಯೋಗ್ಯವೋ ಅಲ್ಲವೋ ಎಂದು ಜನರು ಪ್ರಶ್ನಿಸುವಂತಾಗಿದೆ.

17.26 ಕೋಟಿ ರೂ. ಕಾಮಗಾರಿ: ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತುಹಣಕಾಸು ಮಂಡಳಿಯಡಿ 17.43 ಕೋಟಿವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ಜನರಿಗೆ 24ಗಂಟೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ 2018ರ ಫೆಬ್ರವರಿಯಲ್ಲಿಆರಂಭವಾಗಿ ಸ್ಥಗಿತಗೊಂಡಿದೆ. ಮೇಲ್ಮಟ್ಟದಜಲಸಂಗ್ರಹಾಗಾರದ ಕಾಮಗಾರಿಗೆ ಕಾಲಂಹಾಕಿರುವುದು ಮತ್ತು ಪಟ್ಟಣದ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಹಾಕಿದ್ದು ಬಿಟ್ಟರೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಇಲ್ಲವಾಗಿದೆ.

23 ವಾರ್ಡ್‌ಗಳಿಗೆ ಶುದ್ಧ ನೀರು: ಪಟ್ಟಣದ 23 ವಾರ್ಡ್‌ಗಳಲ್ಲಿರುವ ಮನೆಗಳ 5509ನಲ್ಲಿಗಳಿಗೆ ನಿರಂತರವಾಗಿ ದಿನದ 24 ಗಂಟೆ ಶುದ್ಧಕುಡಿಯುವ ನೀರು ಒದಗಿಸುವ ಈ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ವಾರ್ಡ್‌ನಲ್ಲಿ ನೀರುಸರಬರಾಜು ಮಾಡಲು ಅಂದಾಜು 121 ಕಿಮೀಪೈಪ್‌ಲೈನ್‌ ಕಾಮಗಾರಿ ಪೂರ್ಣವಾಗಬೇಕಿದೆ.ಆದರೆ, ಈಗ ಬರೀ 69 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್‌ ಕಾಮಗಾರಿ ನಡೆದಿದೆ ಎನ್ನಲಾಗುತ್ತಿದೆ. ಅಂದರೆ, ಶೇ. 50ರಷ್ಟು ಪೈಪ್‌ಲೈನ್‌ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ(ಟ್ಯಾಂಕ್‌)ದ ಕಾಮಗಾರಿ ನೆಲ ಬಿಟ್ಟು ಮೇಲಕ್ಕೆ ಏಳುತ್ತಿಲ್ಲ.

ಪಟ್ಟಣದ ಜನತೆಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದ್ದು,ಜಲ ಸಂಗ್ರಹಾಗಾರದ ಕಾಲಮ್‌ಗಳು ಕಾಣುತ್ತಿವೆ.ಪಟ್ಟಣದ ಜನರು ಇನ್ನೆಷ್ಟು ದಿನ ಶುದ್ಧ ಕುಡಿಯುವ ನೀರಿಗೆ ಕಾಯಬೇಕೋ ಎನ್ನುವಂತಾಗಿದೆ.

ಕಾಮಗಾರಿ ನಡೆಸುತ್ತಿರುವ ಖಾಸಗಿ ಕಂಪನಿಗೆಈಗಾಗಲೇ ನಾಲ್ಕೈದು ನೋಟಿಸ್‌ಗಳನ್ನು ನೀಡಲಾಗಿದೆ. ವಿಳಂಬದಕುರಿತು ಯಾವದೇ ಸ್ಪಷ್ಟಕಾರಣವನ್ನು ಕಂಪನಿ ನೀಡುತ್ತಿಲ್ಲ. –ಸಂತೋಷ ಕುಮಾರ ಎಸ್‌., ಕಾಮಗಾರಿ ಮೇಲುಸ್ತುವಾರಿ ಅಧಿಕಾರಿ

ನಿರಂತರವಾಗಿ ಶುದ್ಧ ಕುಡಿಯುವ ನೀರುಯೋಜನೆ ಕರ್ನಾಟಕ ನಗರ ಮೂಲಭೂತಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ.ಕಾಮಗಾರಿ ವಿಳಂಬದ ಬಗ್ಗೆ ನೋಟೀಸ್‌ ನೀಡಿದ್ದರೂ,ಕಾಮಗಾರಿ ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಸ್ಪಂದಿಸುತ್ತಿಲ್ಲ.ವೀರೇಂದ್ರಸಿಂಗ್‌ ಕಾಟೇವಾಲೆ, ಪುರಸಭೆ ಅಭಿಯಂತರ

ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಮೂರು ಸಭೆಗಳು ನಡೆದಿವೆ. ಕಾಮಗಾರಿ ಪೂರ್ಣಗೊಳಿಸಲು ನೋಟಿಸ್‌ ಕೂಡಾ ನೀಡಲಾಗಿದೆ. ಹೈದರಾಬಾದಿನ ಖಾಸಗಿ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿದೆ.ಎನ್‌.ಕೆ. ಡೊಂಬರ, ಪುರಸಭೆ ಮುಖ್ಯಾಧಿಕಾರಿ

 

ಹು.ಬಾ. ವಡ್ಡಟ್ಟಿ

ಟಾಪ್ ನ್ಯೂಸ್

1begging

ಭಿಕ್ಷಾಟನೆಯಲ್ಲಿ ತೊಡಗಿದ್ದ 720 ಮಕ್ಕಳು ಪತ್ತೆ!

ಅಪಾಯದ ಮಟ್ಟದತ್ತ ನೇತ್ರಾವತಿ: ತಗ್ಗು ಪ್ರದೇಶ ಜಲಾವೃತ

ಅಪಾಯದ ಮಟ್ಟದತ್ತ ನೇತ್ರಾವತಿ: ತಗ್ಗು ಪ್ರದೇಶ ಜಲಾವೃತ

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು

david warner likely to miss Big Bash league

ತನ್ನದೇ ದೇಶದ ಬಿಗ್‌ ಬಾಶ್‌ ತ್ಯಜಿಸುತ್ತಾರಾ ಡೇವಿಡ್‌ ವಾರ್ನರ್‌?

rain

ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ನವಜಾತ ಶಿಶುವಿನಲ್ಲಿ ಹಲ್ಲು !

ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?

10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್‌ಗೆ

10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್‌ಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಅವಳಿ ನಗರದಲ್ಲಿ ಮೂತ್ರಾಲಯ ಸಮಸ್ಯೆ

ಗದಗ: ಅವಳಿ ನಗರದಲ್ಲಿ ಮೂತ್ರಾಲಯ ಸಮಸ್ಯೆ

ಗಜೇಂದ್ರಗಡ ಪುರಸಭೆ ಮಳಿಗೆ ಪಡೆಯಲು ಭಾರೀ ಪೈಪೋಟಿ

ಗಜೇಂದ್ರಗಡ ಪುರಸಭೆ ಮಳಿಗೆ ಪಡೆಯಲು ಭಾರೀ ಪೈಪೋಟಿ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ

18

ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ ಯುವ ಪೀಳಿಗೆ

17

ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

1begging

ಭಿಕ್ಷಾಟನೆಯಲ್ಲಿ ತೊಡಗಿದ್ದ 720 ಮಕ್ಕಳು ಪತ್ತೆ!

ಅಪಾಯದ ಮಟ್ಟದತ್ತ ನೇತ್ರಾವತಿ: ತಗ್ಗು ಪ್ರದೇಶ ಜಲಾವೃತ

ಅಪಾಯದ ಮಟ್ಟದತ್ತ ನೇತ್ರಾವತಿ: ತಗ್ಗು ಪ್ರದೇಶ ಜಲಾವೃತ

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು

david warner likely to miss Big Bash league

ತನ್ನದೇ ದೇಶದ ಬಿಗ್‌ ಬಾಶ್‌ ತ್ಯಜಿಸುತ್ತಾರಾ ಡೇವಿಡ್‌ ವಾರ್ನರ್‌?

rain

ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.