ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡ ಜನ: ಬೊಮ್ಮಾಯಿ
Team Udayavani, Sep 10, 2024, 4:56 PM IST
ಉದಯವಾಣಿ ಸಮಾಚಾರ
ಶಿರಹಟ್ಟಿ: ಒಂದು ಪಕ್ಷದ ಸಿದ್ಧಾಂತ ತಿಳಿಯಲು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಬಿಜೆಪಿ ಶಿರಹಟ್ಟಿ ಮಂಡಲದ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸದಸ್ಯತ್ವವನ್ನು ಯಾರು ಪಡೆದುಕೊಂಡಿರುತ್ತಾರೆ ಅವರು ಬಿಜೆಪಿ ಶ್ರೇಷ್ಠ ಪ್ರತಿನಿಧಿ ಎಂದು ಗುರುತಿಸಲಾಗುತ್ತದೆ.
ಇದು ಮಹತ್ವದ ಕೆಲಸವಾಗಿದೆ ಎಂದರು. ರಾಜ್ಯದ ಕಾಂಗ್ರೆಸ್ ಮೇಲೆ ಜನರ ನಂಬಿಕೆ ಇಲ್ಲದಂತಾಗಿದೆ. ಸರ್ಕಾರದ ವಿವಿಧ
ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಕೇವಲ ಪಂಚ ಗ್ಯಾರಂಟಿ ಯೋಜನೆ ಮಾತ್ರ ಜನರ ಮನಸ್ಸಿನಲ್ಲಿದೆ. ವಿವಿಧ ಮೂಲ ಸೌಕರ್ಯಗಳು ಜನರಿಗೆ ಮುಟ್ಟುತ್ತಿಲ್ಲ. ಸರ್ಕಾರಿ ನೌಕರರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸಂಬಳವಾಗುತ್ತಿಲ್ಲ ಅಂಗನವಾಡಿ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ, ರೈತರಿಗೆ ಬರಗಾಲ ಬಂದರು ಬರ ಪರಿಹಾರವಿಲ್ಲ. ಎಸ್ಸಿ ಎಸ್ಟಿ ಜನಾಂಗಕ್ಕೆ ಸೇರುವ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ.
ರಾಜ್ಯದ ಒಟ್ಟು 25 ಸಾವಿರ ಕೋಟಿ ಹಣ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೋಸ ಮಾಡಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿವೆ. ರಸ್ತೆ ದುರಸ್ತಿ ಮಾಡಲು ಮಣ್ಣು ಹಾಕಲು ಸಹ ಹಣವಿಲ್ಲ ಎಂದು ಹೇಳುತ್ತಾರೆ. ಗ್ರಾಮೀಣ ಭಾಗದ ಗ್ರಾಪಂಗಳಲ್ಲಿ ಮುಂದೆ ನಡೆಸಿಕೊಂಡು ಹೋಗುವ ವಿವಿಧ ಯೋಜನೆಗಳಿಗೆ ಹಣ ನೀಡಿಲ್ಲ.
ಈ ಹಿಂದಿನ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಹಣವಿಲ್ಲವೆಂದು ಹೇಳುವ ಸಂದರ್ಭ ಬಂದಿರಲಿಲ್ಲ. ಆದರೆ ಈಗ ರಾಜ್ಯಕ್ಕೆ ದುರ್ದೈವ ಪರಿಸ್ಥಿತಿ ಬಂದಿದೆ. ಒಂದು ಲಕ್ಷ ಐದು ಸಾವಿರ ಕೋಟಿ ಹಣ ಸಾಲ ಪಡೆದಿದ್ದಾರೆ ಆದರೆ ನಯಾಪೈಸೆ ಅಭಿವೃದ್ಧಿ ಕಾಣುತ್ತಿಲ್ಲ. ಎಲ್ಲಾ ರಂಗದಲ್ಲಿ ಆಡಳಿತ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದರು. ಶಿರಹಟ್ಟಿ ಶಾಸಕ ಡಾ|ಚಂದ್ರು ಲಮಾಣಿ, ಬಿಜೆಪಿ
ಪ್ರಧಾನ ಕಾರ್ಯದರ್ಶಿ ರಾಜು ಕುರುಡಗಿ, ಸುನಿಲ್ ವåಹಾಜನಶೆಟ್ಟರ್, ವಿಶ್ವನಾಥ್ ಕಪ್ಪತ್ತನವರ್, ಚಂದ್ರಕಾಂತ್ ನೂರಶೆಟ್ಟರ್, ನಾಗರಾಜ್ ಲಕ್ಕುಂಡಿ, ಪಕ್ಕೀರೇಶ ರಟ್ಟಿಹಳ್ಳಿ, ಎಂ ಎಸ್ ದೊಡ್ಡಗೌಡ, ಎಂ ಎಸ್ ಕರಿಗೌಡ್ರು, ಪ್ರಕಾಶ್ ಮಹಾಜನಶೆಟ್ಟರ್, ಬಿಡಿ ಪಲ್ಲೇದ, ನಾಗರಾಜ ಕುಲಕರ್ಣಿ ಹಾಗೂ ಪಕ್ಷದ ಕಾರ್ಯಕರ್ತ ಇದ್ದರು.
ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಸಿಎಂ ಪಟ್ಟ ಪಡೆಯಲು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಕುರ್ಚಿ
ಅಲ್ಲಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಮುಂದಿನ ಸಿಎಂ ನಾನೇ ಎನ್ನುತ್ತಾರೆ. ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟದ ಸಚಿವರ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿ ಕೆಲಸದ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತಿದೆ.
*ಬಸವರಾಜ ಬೊಮ್ಮಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: 14 ರಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ
Gadag: ಗಣಿಗಾರಿಕೆಯ ಪ್ರಸ್ತಾವಗಳನ್ನು ತಿರಸ್ಕರಿಸಬೇಕು: ತೋಂಟದ ಶ್ರೀಗಳು
Gadag: ಆರ್‌ಸಿ ಬ್ರಿಗೇಡ್ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್ ಸಮಾವೇಶ: ಈಶ್ವರಪ್ಪ
Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.