Udayavni Special

40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೋವಿಡ್ ಶೂನ್ಯ

ಪರ ಊರುಗಳಿಂದ ಬಂದವರ ಮೇಲೆ ನಿಗಾ, ­ಕೊರೊನಾಗೆ ಸಡ್ಡು ಹೊಡೆದ ಗ್ರಾಮಸ್ಥರು

Team Udayavani, May 30, 2021, 6:51 PM IST

4042241728gadag 3

ವರದಿ: ವೀರೇಂದ್ರ ನಾಗಲದಿನ್ನಿ

ಗದಗ: ಎಲ್ಲೆಡೆ ಅಬ್ಬರಿಸುತ್ತಿರುವ ಕೋವಿಡ್‌-19ರ 2ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ತನ್ನ ಕೆನ್ನಾಲಿಗೆ ಚಾಚಿದೆ. ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಇನ್ನು ಕೆಲ ಗ್ರಾಮಗಳಲ್ಲಿ ಸ್ಥಳೀಯರು ಮುನ್ನೆಚ್ಚರಿಕೆ ವಹಿಸಿದ್ದರಿಂದ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊರೊನಾ ಸುಳಿವೇ ಇಲ್ಲ. ಜಿಲ್ಲೆಯಲ್ಲಿ ಒಟ್ಟು 22428 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎರಡನೇ ಅಲೆಯಲ್ಲಿ ಜ.1ರಿಂದ ಮೇ 27ರವರೆಗೆ ಐದು ತಿಂಗಳ ಅವಧಿಯಲ್ಲಿ 11521ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಏಪ್ರಿಲ್‌-ಮೇ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೋಂಕು ಹರಡಿದ್ದು, ಗ್ರಾಮೀಣ ಪ್ರದೇಶಕ್ಕೂ ಚಾಚಿಕೊಂಡಿದೆ. ಜಿಲ್ಲೆಯ ಹುಲಕೋಟಿ ಮತ್ತು ಲಕ್ಕುಂಡಿ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ 150ಕ್ಕೂ ಹೆಚ್ಚಿದೆ.

40ಕ್ಕಿಂತ ಹೆಚ್ಚು ಸೋಂಕಿತ ಗ್ರಾಮಗಳು: ಗದಗ ತಾಲೂಕಿನ ಲಕ್ಕಿಂಡಿ-122, ಹುಲಕೋಟಿ 323, ಬಿಂಕದಕಟ್ಟಿ 63, ಮುಳಗುಂದ 40, ಕುರ್ತಕೋಟಿ 42, ಕಳಸಾಪುರ 43, ಹರ್ತಿ 43, ಮಲ್ಲಸಮುದ್ರ 34, ಮುಂಡರಗಿ ತಾಲೂಕಿನ ಡಂಬಳ-85, ಹಮ್ಮಿಗಿ- 49, ಪೇಠಾಲೂರು-40, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ 90, ಶಿರಹಟ್ಟಿ ತಾಲೂಕಿನ ಸೂರಣಗಿಯಲ್ಲಿ 59ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಇನ್ನುಳಿದ ಗ್ರಾಮಗಳಲ್ಲಿ 30ಕ್ಕಿಂತ ಕಡಿಮೆ ಪ್ರಕರಣಗಳಿವೆ. ರೋಣ ತಾಲೂಕಿನ ಅತಿ ದೊಡ್ಡ ಗ್ರಾಮಗಳಾಗಿರುವ ಹೊಳೆಆಲೂರಿನಲ್ಲಿ 50, ಅಬ್ಬಿಗೇರಿ 57, ಬೆಳವಣಿಕೆಯಲ್ಲಿ 68 ಪ್ರಕರಣಗಳು ದೃಢಪಟ್ಟಿವೆ. ಗಜೇಂದ್ರಗಡ ತಾಲೂಕಿನ ಸೂಡಿಯಲ್ಲಿ ಗರಿಷ್ಟ 44 ಪ್ರಕರಣಗಳು ಕಂಡು ಬಂದಿವೆ. ನರಗುಂದ ತಾಲೂಕಿನ ಚಿಕ್ಕನರಗುಂದ, ಹದ್ಲಿ ಗ್ರಾಮಗಳಲ್ಲಿ ಗರಿಷ್ಠ ಪ್ರಕರಣಗಳು ದೃಢಪಟ್ಟಿವೆ. ಕ್ರಮವಾಗಿ ಸುಮಾರು 90 ಮತ್ತು 45 ಪ್ರಕರಣಗಳು ಖಚಿತವಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಅತೀ ಕಡಿಮೆ ಪ್ರಕರಣಗಳು: ಗದಗ ತಾಲೂಕಿನ ಪಾಪನಾಶಿ ತಾಂಡಾ-2, ಅಡವಿಸೋಮಾಪುರ ತಾಂಡಾ-5, ಶಿರೋಳ-4, ಯಲಿಶಿರಂಜ-1, ಎಚ್‌.ಎಸ್‌.ವೆಂಕಟಾಪುರ-5, ದುಂದೂರು-4, ಮಹಲಿಂಗಪುರ, ಚಿಕ್ಕೊಪ್ಪ, ಕಲ್ಲೂರ, ನೀರಲಗಿ-2, ಮದಗಾನೂರ-3, ಕಬಲಾಯನಕಟ್ಟಿ- 4, ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನಲ್ಲಿ 8ಕ್ಕಿಂತ ಕಡಿಮೆ ಸೋಂಕಿತರ ಗ್ರಾಮಗಳೇ ಹೆಚ್ಚು. ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ 2 ರಿಂದ 8ರಷ್ಟು ಪ್ರಕರಣಗಳಿವೆ ಎನ್ನಲಾಗಿದೆ.

ಗ್ರಾಮಸ್ಥರಿಂದ ಕೊರೊನಾಗೆ ಸಡ್ಡು: ಎಲ್ಲೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೆ 2ನೇ ಅಲೆಯಲ್ಲಿ ಜಿಲ್ಲೆಯ 40ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕೊರೊನಾ ಸೋಂಕಿಗೆ ಗ್ರಾಮಸ್ಥರು ಸಡ್ಡು ಹೊಡೆದಿದ್ದಾರೆ. ಗದಗ ತಾಲೂಕಿನ ಹಂಗನಕಟ್ಟಿ, ವೆಂಕಟಾಪುರ ಮುಂಡರಗಿ ತಾಲೂಕಿನ ಡ.ಸ.ರಾಮೇನಹಳ್ಳಿ, ಯಕ್ಲಾಸಪುರ, ತಿಪ್ಪಾಪುರ, ನರಗುಂದ ತಾಲೂಕಿನ ಕಣಕಿಕೊಪ್ಪ, ಸಂಕದಾಳ, ಕಪ್ಪಲಿ, ಲಕಮಾಪುರ, ರೋಣ ತಾಲೂಕಿನ ಕರಕಿಕಟ್ಟಿ, ಮೇಲ್ಮಠ, ಅಮರಗೋಳ, ಕುರವಿನಕೊಪ್ಪ, ಗಜೇಂದ್ರಗಡ ತಾಲೂಕಿನ ವೀರಾಪುರ, ಚಿಲ್ಲಜೇರಿ, ಮಾಟರಂಗಿ, ನಾಗರಿಸಿಕೊಪ್ಪ ತಾಂಡಾ, ಮಲ್ಲಾಪುರ, ಬೊಮ್ಮಸಾಗರ, ದಿಂಡೂರ, ಕಾಲಕಾಲೇಶ್ವರ, ನೆಲ್ಲೂರ ಪ್ಯಾಟಿ ಸೇರಿದಂತೆ ಸುಮಾರು 40 ಗ್ರಾಮಗಳಲ್ಲಿ ಕೊರೊನಾ ಶೂನ್ಯವಾಗಿದೆ.

ಸ್ವಯಂ ಪ್ರೇರಿತ ನಿರ್ಬಂಧ: ವಿವಿಧ ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಿತ ನಿಯಂತ್ರಣಕ್ಕೆ ಹಲವು ನಿಯಮಗಳನ್ನು ವಿಧಿಸಿದ್ದಾರೆ. ಪರ ಊರುಗಳಿಂದ ಬಂದವರ ಮೇಲೆ ನಿಗಾ, ಪಟ್ಟಣಗಳಿಂದ ವಾಪಾಸ್ಸಾಗಿರುವ ಕಾರ್ಮಿಕರ ಕುಟುಂಬಗಳಿಗೆ ಗ್ರಾಪಂಗಳು ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್‌ ವಿಧಿ ಸಿವೆ. ಜನರು ಗುಂಪು ಗೂಡದಿರುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿಸಿ ಸ್ವತ್ಛತೆಗೆ ಒತ್ತು ನೀಡಲಾಗಿದೆ. ಈ ರೀತಿಯ ಸಾಮಾನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಶೂನ್ಯ ಪ್ರಕರಣಗಳಿರುವ ಗ್ರಾಮಗಳಲ್ಲಿ 2 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿದ್ದು, ಆಡಳಿತ ನಿರ್ವಹಣೆಯೂ ಸುಲಭವಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

04

ಯಾರ್ಯಾರ ಹೇಳಿಕೆಗೆ ಪ್ರತಿಕ್ರಿಯಿಸಬೇಕಿಲ್ಲ : ಸಿ.ಟಿ ರವಿ

ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ

ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ

ರಮೇಶ ಜಾರಕಿಹೊಳಿ‌ಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಒಂಟೆ ಸವಾರಿ ಪ್ರತಿಭಟನೆ

ರಮೇಶ ಜಾರಕಿಹೊಳಿ‌ಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಒಂಟೆ ಸವಾರಿ ಪ್ರತಿಭಟನೆ

ದ್ವಿತೀಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ

ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ

renukcharya

ಯಾರೋ ಒಂದಿರಿಬ್ಬರು ಬಿಟ್ಟರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ: ರೇಣುಕಾಚಾರ್ಯ

5

‘ಅದ್ದೂರಿ’ ಬಳಿಕ ಮತ್ತೊಮ್ಮೆ ಕಮಾಲ್ ಮಾಡಲು ಧ್ರುವ- ಅರ್ಜುನ್ ಸಜ್ಜು ?

ಮಂತ್ರಾಲಯ: ಜೂ. 22ರಿಂದ ರಾಯರ ದರ್ಶನ ಪುನಾರಂಭ

ಮಂತ್ರಾಲಯ: ಜೂ. 22ರಿಂದ ರಾಯರ ದರ್ಶನ ಪುನಾರಂಭ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid vaccination

2 ಡೋಸ್‌ ಲಸಿಕೆ ಪಡೆದವರಿಗೆ ಡ್ಯೂಟಿ

covid news

ರಾಜ್ಯದಲ್ಲಿ ತಗ್ಗಿದ ಕೊರೊನಾ ತೀವ್ರತೆ

04

ಯಾರ್ಯಾರ ಹೇಳಿಕೆಗೆ ಪ್ರತಿಕ್ರಿಯಿಸಬೇಕಿಲ್ಲ : ಸಿ.ಟಿ ರವಿ

bangalore news

ದೇಗುಲ ಬಳಿ ಶಬ್ದ ಮಾಲಿನ್ಯಕ್ಕೆ ವಾಹನಗಳೇ ಕಾರಣ!

ರಮೇಶ ಜಾರಕಿಹೊಳಿ‌ಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಒಂಟೆ ಸವಾರಿ ಪ್ರತಿಭಟನೆ

ರಮೇಶ ಜಾರಕಿಹೊಳಿ‌ಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಒಂಟೆ ಸವಾರಿ ಪ್ರತಿಭಟನೆ

MUST WATCH

udayavani youtube

ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ ಅ ಅ

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

ಹೊಸ ಸೇರ್ಪಡೆ

covid vaccination

2 ಡೋಸ್‌ ಲಸಿಕೆ ಪಡೆದವರಿಗೆ ಡ್ಯೂಟಿ

covid news

ರಾಜ್ಯದಲ್ಲಿ ತಗ್ಗಿದ ಕೊರೊನಾ ತೀವ್ರತೆ

04

ಯಾರ್ಯಾರ ಹೇಳಿಕೆಗೆ ಪ್ರತಿಕ್ರಿಯಿಸಬೇಕಿಲ್ಲ : ಸಿ.ಟಿ ರವಿ

bangalore news

ದೇಗುಲ ಬಳಿ ಶಬ್ದ ಮಾಲಿನ್ಯಕ್ಕೆ ವಾಹನಗಳೇ ಕಾರಣ!

ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ

ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.