Udayavni Special

ಬಿಂಕದಕಟ್ಟಿಯಲ್ಲಿ ಮೌಂಟೇನ್‌ ಬೈಕ್‌ ಸೈಕ್ಲಿಂಗ್

18ರಿಂದ 21ರವರೆಗೆ ಆಯೋಜನೆ­ ! ರಾಜ್ಯದಲ್ಲಿ ಇದೇ ಮೊದಲು­! ಮರಕ್ಕೆ ಧಕ್ಕೆಯಾಗದಂತೆ ಟ್ರ್ಯಾಕ್ ಗುರುತು

Team Udayavani, Feb 9, 2021, 6:44 PM IST

cycling

ಗದಗ: ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆ ಆತಿಥ್ಯ ವಹಿಸಿಕೊಳ್ಳುವುದರೊಂದಿಗೆ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಿರ್ಮಾಣ ಗೊಂಡಿರುವ ರಾಷ್ಟ್ರೀಯ ಮಟ್ಟದ ಎಂಟಿಬಿ ಟ್ರ್ಯಾಕ್ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೂ ಗದಗ ಪಾತ್ರವಾಗಲಿದೆ.

ಫೆ.18ರಿಂದ 21ರವರೆಗೆ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ 17ನೇ ರಾಷ್ಟ್ರೀಯ ಸೀನಿಯರ್‌, ಜ್ಯೂನಿಯರ್‌ ಮತ್ತು ಸಬ್‌ ಜ್ಯೂನಿಯರ್‌ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ಆಯೋಜಿಸಿದೆ. ಅದಕ್ಕಾಗಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ,  ಮಧ್ಯಪ್ರದೇಶ, ಸಿಕ್ಕಿಂ, ಮಿಜೋರಾಂ, ಕೇರಳ ಸೇರಿದಂತೆ ದೇಶದ ವಿವಿಧೆಡೆಯಿಂದ ಸುಮಾರು 600 ಸ್ಪ ರ್ಧಿಗಳು ಆಗಮಿಸುತ್ತಿದ್ದಾರೆ. ಆ ಪೈಕಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ   ಸೈಕ್ಲಿಸ್ಟ್‌ಗಳು ಆಗಮಿಸಲಿದ್ದಾರೆ ಎನ್ನಲಾಗಿದೆ.

ಎಂಟಿಬಿ ಸೈಕ್ಲಿಂಗ್‌ ವಿಶೇಷತೆ ಏನು?:  ಇಂಡಿಯನ್‌ ಒಲಿಂಪಿಕ್‌ ಅಥ್ಲೆಟಿಕ್‌ ಅಸೋಸಿಯೇಷನ್‌ ಪ್ರಕಾರ  ಸೈಕಿಂಗ್‌ನಲ್ಲಿ ಮೂರು ವಿಧಗಳಿವೆ. ಆ ಪೈಕಿ ಕ್ರೀಡಾಂಗಣದ ಟ್ರ್ಯಾಕ್ ಸೈಕ್ಲಿಂಗ್‌, ರೋಡ್‌ ಹಾಗೂ ಮೌಂಟೇನ್‌ ಬೈಕ್‌ (ಗುಡ್ಡಗಾಡು ಪ್ರದೇಶ) ಸೈಕ್ಲಿಂಗ್‌. ಈವರೆಗೆ ರಾಜ್ಯದಲ್ಲಿ ಐದಾರು ಬಾರಿ ರಾಷ್ಟ್ರೀಯ ಮಟ್ಟದ ರೋಡ್‌ ಸೈಕ್ಲಿಂಗ್‌ ಹಾಗೂ ಹಲವೆಡೆ ರಾಜ್ಯ ಮಟ್ಟದ ಮೌಂಟೇನ್‌ ಸೈಕ್ಲಿಂಗ್‌ ಸ್ಪರ್ಧೆ ಯಶಸ್ವಿಯಾಗಿ ಸಂಘಟಿಸಲಾಗಿದೆ. ಆದರೆ, ರಾಜ್ಯದಲ್ಲಿ ಸುಸಜ್ಜಿತ ಹಾಗೂ ನೈಸರ್ಗಿಕ ಬೆಟ್ಟಗುಡ್ಡಗಳು ಪತ್ತೆಯಾಗಿಲ್ಲ. ಆದರೆ, ಕಪ್ಪತ್ತಗುಡ್ಡದ ಭಾಗವಾಗಿರುವ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಎಂಟಿಬಿ ಸ್ಪರ್ಧೆಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಜಿಲ್ಲಾ ಸೈಕ್ಲಿಂಗ್‌ ಫೆಡರೇಷನ್‌ ಕಾರ್ಯದರ್ಶಿ ಎಂ.ಐ. ಕಣಕಿ.

ಸಸ್ಯೋದ್ಯಾನದಲ್ಲಿ ಸ್ಪರ್ಧೆ ಆರಂಭಿಕ ಹಾಗೂ ಮುಕ್ತಾಯದ ಪಾಯಿಂಟ್‌ ಹೊರತುಪಡಿಸಿ ಇನ್ನುಳಿದಂತೆ ಎಲ್ಲೆಡೆ ಒಟ್ಟೊಟ್ಟಿಗೆ ಕೇವಲ ಎರಡೇ ಸೈಕಲ್‌ಗ‌ಳು ಚಲಿಸುವಂತೆ ಟ್ರ್ಯಾಕ್ ಮಾಡಲಾಗಿದೆ.  ಟ್ರ್ಯಾಕ್ ಸಂಪೂರ್ಣ ಕಾಲುದಾರಿಯಂತಿದ್ದು, ಟ್ರ್ಯಾಕ್ಗೆ ಹೊಂದಿಕೊಂಡಿದ್ದ ಜಾಲಿ ಕಂಟಿ ಮಾತ್ರ  ತೆರವುಗೊಳಿಸಲಾಗಿದೆ.

ಇದನ್ನೂ ಓದಿ :ರೋಣ; ಚೈತನ್ಯ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಅರಣ್ಯದಲ್ಲಿ ಯಾವುದೇ ಮರಕ್ಕೆ ಧಕ್ಕೆಯಾಗದಂತೆ ಅಚ್ಚುಕಟ್ಟಾಗಿ ಟ್ರ್ಯಾಕ್ ಗುರುತು ಮಾಡಲಾಗಿದೆ. ಹಚ್ಚಹಸಿರಿನಿಂದ ಕೂಡಿರುವ ಉದ್ಯಾನದಲ್ಲಿ ಒಟ್ಟು 5 ಕಿ.ಮೀ. ಉದ್ದದ ಸೈಕಲ್‌ ಟ್ರ್ಯಾಕ್ ನಿರ್ಮಿಸಲಾಗಿದೆ. ಹತ್ತಾರು ಕಡೆ ಬೃಹತ್‌ ತಗ್ಗು, ದಿನ್ನೆಗಳಿಂದ ಕೂಡಿದೆ. ಬೆಟ್ಟದ ಇಳಿಜಾರಿನೊಂದಿಗೆ ಭೂ ಪ್ರದೇಶದ ಏರಿಳಿತಗಳು ಸೈಕ್ಲಿಸ್ಟ್‌ಗಳನ್ನು ರೋಮಾಂಚನಗೊಳಿಸುತ್ತದೆ. ಕಡಿದಾದ ಮತ್ತು ಎದುಸಿರಿನೊಂದಿಗೆ ದಿನ್ನೆಗಳಿಂದ ಮೇಲೆ ಬರುವ ಸೈಕ್ಲಿಸ್ಟ್‌ಗಳ ಸಾಹಸ ಬೆರಗು ಮೂಡಿಸುತ್ತದೆ. ಕೆಲವೆಡೆ ಸುಮಾರು 40 ಕಿ.ಮೀ. ಶರವೇಗದಲ್ಲಿ ಸೈಕಲ್‌ಗ‌ಳು ನೋಡುಗರ ಮೈನವಿರೇಳಿಸುತ್ತದೆ. ಜೊತೆಗೆ ಮೌಂಟೇನ್‌ ಟ್ರ್ಯಾಕ್ ಬೈಕ್‌ ಸೈಕ್ಲಿಂಗ್‌ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಮೂಲಕ ಅರಣ್ಯ ಇಲಾಖೆ ಪರಿಸರ ಸಂರಕ್ಷಣೆ ಸಂದೇಶ ಸಾರುತ್ತಿದೆ.

ಟಾಪ್ ನ್ಯೂಸ್

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.