Udayavni Special

ಗೊಬ್ಬರಕ್ಕೆ ಮುಗಿಬಿದ್ದ ರೈತರು; ಅಂತರ ಮಾಯ

Team Udayavani, Jun 5, 2021, 8:50 PM IST

4 lxr 7

ಲಕ್ಷ್ಮೇಶ್ವರ: ಡಿಎಪಿ ಗೊಬ್ಬರಕ್ಕೆ ರೈತರ ನೂಕುನುಗ್ಗಲು ತಪ್ಪದಂತಾಗಿದ್ದು, ಶುಕ್ರವಾರ ಬೆಳ್ಳಂಬೆಳಗ್ಗೆ ನೂರಾರು ಸಂಖ್ಯೆ ರೈತರು ಕೊರೊನಾ ಭೀತಿ, ಮಾರ್ಗಸೂಚಿ ಮರೆತು ಮುಗಿಬಿದ್ದ ದೃಶ್ಯ ಕಂಡುಬಂತು. ಆದರೆ ಗುರುವಾರವೇ ಎಲ್ಲ ಅಂಗಡಿಗಳಲ್ಲಿನ ಡಿಎಪಿ ಗೊಬ್ಬರದ ದಾಸ್ತಾನು ಖಾಲಿ ಆಗಿದ್ದರಿಂದ ಸರದಿ ಸಾಲಿನಲ್ಲಿ ನಿಂತ ರೈತರು ನಿರಾಸೆಯಿಂದ ಮರಳಿ ಹೋದರು.

ಇನ್ನು ಕುಂದಗೋಳ, ಸವಣೂರ ಇತರೇ ತಾಲೂಕಿನ ರೈತರಿಗೆ ಏಕೆ ಗೊಬ್ಬರ ಕೊಡುವುದಿಲ್ಲ. ನಾವು ಎಪಿಎಂಸಿ, ದಿನಸಿ ಸೇರಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಪಟ್ಟಣಕ್ಕೆ ಬರುತ್ತೇವೆ. ಅನೇಕ ವರ್ಷದಿಂದ ಇಲ್ಲಿಯೇ ಗೊಬ್ಬರ, ಬೀಜ ಖರೀದಿಸುತ್ತಾ ಬಂದಿದ್ದೇವೆ. ರೈತರನ್ನು ವಿಭಜಿಸದೇ ಸಕಾಲಿಕ ಬೀಜ, ಗೊಬ್ಬರ ಕೊಡಬೇಕು ಎಂದು ಪಶುಪತಿಹಾಳ ಗ್ರಾಮದ ಅಶೋಕ ಕಟಗಿ, ಯರೇಬೂದಿಹಾಳದ ಗ್ರಾಮದ ರೈತರು ಆಗ್ರಹಿಸಿದರು. ಆದರೆ ಡಿಎಪಿ ಗೊಬ್ಬರವೇ ಇಲ್ಲದ್ದರಿಂದ ರೈತರು ವಾಪಸ್‌ ಹೋದರು.

ಗುರುವಾರ ಪಟ್ಟಣದ ಎಲ್ಲ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ ಬಳಿಕ ವ್ಯಾಪಾರಸ್ಥರ ಸಭೆ ಮಾಡಿದ್ದರು. ಈ ವೇಳೆ ವ್ಯಾಪಾರಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹರಿಸುವಂತೆ ಮನವಿ ಮಾಡಿದ್ದರು. ಸಭೆಯ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಆಯಾ ತಾಲೂಕಿನ ಕೃಷಿ ಕ್ಷೇತ್ರ, ಸಾಮಾನ್ಯ ಬೇಡಿಕೆಗೆ ತಕ್ಕಂತೆ ಸಬ್ಸಿಡಿ ಗೊಬ್ಬರ ಸರಬರಾಜಾಗುತ್ತದೆ. ಕಾರಣ ಬರುವ ರೈತರಿಗೆ ತಮ್ಮದೇ ತಾಲೂಕಿನಲ್ಲಿ ಗೊಬ್ಬರ ಖರೀದಿಸುವಂತೆ ತಿಳಿಹೇಳಿ ಎಂದು ಸೂಚಿಸಿದ್ದರು. ಲೈಸನ್ಸ್‌ ರದ್ದು: ಒಂದೆಡೆ ಗೊಬ್ಬರಕ್ಕಾಗಿ ನೆರೆಯ ತಾಲೂಕಿನ ರೈತರು ಶುಕ್ರವಾರವೂ ಪರದಾಡಿದ್ದರೆ ಮತ್ತೂಂದೆಡೆ ಈ ಮೊದಲಿನಂತೆ ನೆರೆಯ ತಾಲೂಕಿನ ರೈತರಿಗೆ ಗೊಬ್ಬರ ಮಾರಾಟ ಮಾಡಿದ್ದರಿಂದ ತಾತ್ಕಾಲಿಕವಾಗಿ ವ್ಯಾಪಾರಸ್ಥರ ಲೈಸನ್ಸ್‌ ರದ್ದು ಮಾಡಲಾಗಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್‌. ರುದ್ರೇಶಪ್ಪ ಅವರು, ಬೇರೆ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಮಾರಾಟ ಮಾಡಿದ ಲಕ್ಷ್ಮೇಶ್ವರದ 3 ಅಂಗಡಿಗಳ ಪರವಾನಗಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಗೊಬ್ಬರ ನಿಯಂತ್ರಣ ಆಜ್ಞೆ 1985 ಉಲ್ಲಂಘನೆ ಮಾಡಿರುವ ಅಂಗಡಿಯವರು ಮುಂದಿನ ಆದೇಶದವರೆಗೂ ರಸಗೊಬ್ಬರ ಮಾರಾಟ, ದಾಸ್ತಾನು ಮಾಡಬಾರದು ಎಂದು ಹೇಳಿದರು.

ಟಾಪ್ ನ್ಯೂಸ್

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

italy

82 ವರ್ಷಗಳ‌ ಹಿಂದಿನ ಅಜೇಯ ದಾಖಲೆ ಸರಿದೂಗಿಸಿದ ಇಟಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

yoga

ಜೀವನದ ಚೈತನ್ಯಕ್ಕೆ ಸನಾತನ ಯೋಗ ಪೂರಕ

21-17

ವಕೀಲರ ಯೋಗವಿದ್ಯಾ

MUST WATCH

udayavani youtube

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ

udayavani youtube

ಲಡಾಖ್ ನಲ್ಲಿ ಬರೋಬ್ಬರಿ 18 ಸಾವಿರ ಅಡಿ ಎತ್ತರದ ಚಳಿಯ ನಡುವೆ ಯೋಗಾಭ್ಯಾಸ

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

ಹೊಸ ಸೇರ್ಪಡೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.