ಅನುದಾನಿತ ಶಾಲೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹ

Team Udayavani, Nov 17, 2019, 12:00 PM IST

ಗದಗ: ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಕನ್ನಡ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ಆಡಳಿತ ಮಂಡಳಿ ಮತ್ತು ನೌಕರರಸಮನ್ವಯ ಹೋರಾಟ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಕಳೆದ 20 ವರ್ಷಗಳಿಂದ ಕನ್ನಡ ಭಾಷೆಯ ಅಳಿವು-ಉಳಿವಿಗಾಗಿ ಸಾವಿರಾರು ಕನ್ನಡ ಶಾಲೆಗಳ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸರಕಾರದ ಅನುದಾನ ಸಿಗದೇ ಸಾವಿರಾರು ಶಿಕ್ಷಕರ ಬದುಕು ಶೋಚನೀಯವಾಗಿದೆ.

2006-07ನೇ ಸಾಲಿನಲ್ಲಿ ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1987ರಿಂದ 1994-95ರ ವರೆಗೆ ಆರಂಭವಾದ 2,448 ಖಾಸಗಿ ಶಾಲಾ ಕಾಲೇಜುಗಳಗೆ ಅನುದಾನ ನೀಡುವಮೂಲಕ 23 ಸಾವಿರಕ್ಕೂ ಹೆಚ್ಚು ಶಿಕ್ಷಕ ಕುಟುಂಬಗಳಿಗೆ ಬದುಕಿನ ಭರವಸೆ ನೀಡಿದ್ದರೂ ಈವರೆಗೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಪಿಎಸ್‌ ರದ್ದತಿಮಾಡುವುದು, ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿಗೊಳಿಸಬೇಕು.

ಶಿಕ್ಷಕ   ಮತ್ತು ಮಕ್ಕಳ ಅನುಪಾತ 1:50 ಅನುಷ್ಠಾನಕ್ಕೆ ತರಬೇಕು. ಜ್ಯೋತಿ ಸಂಜೀವಿನಿ ಅನುದಾನಿತ ಶಾಲಾ ಸಿಬ್ಬಂದಿ, ಖಾಲಿ ಹುದ್ದೆಗಳ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಗೌರವಾಧ್ಯಕ್ಷ ಡಾ| ಬಸವರಾಜ ಧಾರವಾಡ, ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ಗೌರವಾಧ್ಯಕ್ಷ ಡಾ| ಬಸವರಾಜ ಧಾರವಾಡ, ಎಸ್‌. ಎಂ. ಕೊಟಗಿ, ಸಮಾಜ ಸೇವಕ ನಾಗರಾಜ ಕುಲಕರ್ಣಿ, ಎಂ.ಕೆ. ಲಮಾಣಿ, ಎಚ್‌.ಸಿ. ಚಕ್ಕಡಿಮಠ, ಝಡ್‌.ಎಂ. ಖಾಜಿ, ಎಸ್‌.ವೈ. ನಾಯಕ,ಎಸ್‌.ಎಲ್‌. ಹುಯಿಲಗೋಳ, ಕೊಟ್ರೇಶ ಮೆಣಸಿನಕಾಯಿ,ಎಲ್‌.ಎಸ್‌. ಅರಳಿಹಳ್ಳಿ, ಎ.ಎಸ್‌. ಪಾಟೀಲ, ಎಲ್‌.ಎಂ. ಕೊಷ್ಟಿ, ಸಂಚಾಲಕರಾದ ಎಸ್‌.ಎಸ್‌. ಸರ್ವಿ, ಗಂಗಾಧರ ಕೆ.ಸಿ. ಮತ್ತಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗದಗ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆಗಳು ಜನವಿರೋಧಿಯಾಗಿದ್ದು, ಕೂಡಲೇ ಅವುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

  • ಗಜೇಂದ್ರಗಡ: ರೈತ ಕಾಯಕ ಕೆರೆ, ಊಳುವ ಭೂಮಿ, ರಸ್ತೆ ಬದಿಯ ಜಾಗವೇ ಮುಕ್ತಿಧಾಮ. ಎರಡು ಕಿಮೀ ವರೆಗೂ ಹೋಗಿ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ. ಇದು ಸಮೀಪದ ಬೆಣಚಮಟ್ಟಿ...

  • ಗದಗ: ಸರಕಾರಿ ಶಾಲಾ ಮಕ್ಕಳಲ್ಲಿ ಅರಣ್ಯ ಮತ್ತು ಹಸಿರಿನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಪ ಅರಣ್ಯ ಅಧಿಕಾರಿಗಳು ಮಹತ್ವದ ಹೆಜ್ಜೆ ಇರಿಸಿದ್ದಾರೆ....

  • ಶಿರಹಟ್ಟಿ: ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಕೆಡಿಪಿ ತ್ತೈಮಾಸಿಕ ಸಭೆಯು ಅಧಿಕಾರಿಗಳ ಗೈರಿನಿಂದಾಗಿ ಆಕ್ರೋಶಗೊಂಡ ಶಾಸಕ ರಾಮಣ್ಣ...

  • ಲಕ್ಷ್ಮೇಶ್ವರ: ಬಾಲೇಹೊಸೂರ-ಇಚ್ಚಂಗಿ ರಸ್ತೆ ಮಧ್ಯ ಹರಿದಿರುವ ಮಠಪತಿ ಹಳ್ಳದ ನೀರು ಕಳೆದ ನಾಲ್ಕೈದು ತಿಂಗಳಿಂದ ನಿಂತು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಬಾಲೇಹೊಸೂರಿನಿಂದ...

ಹೊಸ ಸೇರ್ಪಡೆ