ರೈತರನ್ನು ಕಡೆಗಣಿಸಿದರೆ ಸರ್ಕಾರಕ್ಕಿಲ್ಲ ಉಳಿಗಾಲ

Team Udayavani, Jul 21, 2019, 4:57 PM IST

ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ನಿರಂತರ ಸತ್ಯಾಗ್ರಹದಲ್ಲಿ ರೈತ ಮಹಿಳೆ ಶೋಭಾ ಕದಂ ಮಾತನಾಡಿದರು.

ನರಗುಂದ: ಜೀವ ಜಲಕ್ಕಾಗಿ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಸರ್ಕಾರಗಳಿಗೆ ಕಿಂಚಿತ್ತು ಕಾಳಜಿಯಿಲ್ಲ. 1980ರಲ್ಲಿ ಇದೇ ರೀತಿ ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ ನೆಲವಿದು. ರೈತರನ್ನು ಕಡೆಗಣಿಸುವ ಯಾವುದೇ ಸರ್ಕಾರಗಳಿಗೆ ಉಳಿಗಾಲವಿಲ್ಲ ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ ಕಿಡಿಕಾರಿದರು.

ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1465ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಹಿಂದೆ ಸರ್ಕಾರಗಳು ರೈತರ ವಿಷಯದಲ್ಲಿ ನಡೆದುಕೊಂಡ ಹಾದಿಯಲ್ಲೇ ಇಂದಿನ ಸರ್ಕಾರಗಳು ಕೂಡ ರೈತರನ್ನು ಕಡೆಗಣಿಸುತ್ತಿವೆ ಎಂದು ಆರೋಪಿಸಿದರು.

ಇನ್ನಾದರೂ ಮಹದಾಯಿ ಯೋಜನೆ ಬಗ್ಗೆ ಗಮನ ಹರಿಸಬೇಕು. ಕೂಡಲೇ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೂಡ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ರೈತ ಮಹಿಳೆ ಶೋಭಾ ಕದಂ ಮಾತನಾಡಿದರು. ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಯಲ್ಲಪ್ಪ ಗುಡದರಿ,ಲಕ್ಷ್ಮಣ, ಮನೇನಕೊಪ್ಪ, ವೆಂಕಪ್ಪ ಹುಜರತ್ತಿ, ಮಲ್ಲಪ್ಪ ಐನಾಪುರ, ವಾಸು ಚವ್ಹಾಣ, ವೆಂಕಟೇಶ ಸಾಬಳೆ, ಈರಣ್ಣ ಗಡಗಿ, ಮಲ್ಲೇಶಪ್ಪ ಬಾಳಿಕಾಯಿ, ಹನಮಂತ ಸರನಾಯ್ಕರ, ಹನಮಂತ ಕೋರಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾಯಿ, ಮಾಬೂಬಿ ಕೆರೂರ, ಚನ್ನವ್ವ ಕರ್ಜಗಿ ಮುಂತಾದವರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗದಗ: ಮಾ. 14 ಹಾಗೂ 15ರಂದು ಲಕ್ಕುಂಡಿ ಉತ್ಸವವನ್ನು ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ...

  • ಗಜೇಂದ್ರಗಡ: ಯುವ ಶಕ್ತಿಯಿಂದ ಸಾಮಾಜಿಕ ಬದಲಾವಣೆ ಆಗಬೇಕಾದರೆ ಯುವಜನ ಮೇಳಗಳ  ಪಾತ್ರ ಮುಖ್ಯ. ಈ ನಿಟ್ಟಿನಲ್ಲಿ ಆಧುನಿಕತೆ ಜತೆಗೆ ಪಾರಂಪರಿಕ ಸಂಸ್ಕೃತಿ ಉಳಿಸಿ,...

  • ಗದಗ: ಅಂಗವಿಕಲರಿಗೆ ಹೊಸದಾಗಿ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ ಕಾರ್ಡ್‌) ವಿತರಣೆಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ವೈದ್ಯರು ವಿನಾಃಕಾರಣ ವಿಳಂಬ ಮಾಡಿದರೆ...

  • ಗದಗ: ಕೊರೊನಾ ಸೋಂಕಿನಿಂದಾಗಿ (ವೈರಸ್‌) ಚೀನಾದಲ್ಲಿ ಅಲ್ಲೋಲಕಲ್ಲೋಲನ್ನೇ ಎಬ್ಬಿಸಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ರಾಜ್ಯದ ವಿವಿಧೆಡೆ...

  • ಮುಳಗುಂದ: ಉತ್ಪನ್ನಗಳನ್ನು ಸರ್ಕಾರ ಸಹಕಾರಿ ಸಂಘಗಳ ಮೂಲಕ ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ...

ಹೊಸ ಸೇರ್ಪಡೆ