ಕುಡಿವ ನೀರು ಸಮರ್ಪಕ ಪೂರೈಕೆಗಾಗಿ ರಸ್ತೆ ತಡೆದು ಪ್ರತಿಭಟನೆ

Team Udayavani, May 22, 2019, 9:10 AM IST

ರೋಣ: ಪಟ್ಟಣದ 21ನೇ ವಾರ್ಡ್‌ ನಿವಾಸಿಗಳು ನೀರಿಗಾಗಿ ರಸ್ತೆಗಿಳಿದು ಪ್ರತಿಭಟಿಸಿದರು.

ರೋಣ: ಕಳೆದ ಮೂರು ವಾರಗಳಿಂದ ನೀರು ಬಾರದಿರುವುದನ್ನು ಖಂಡಿಸಿ ಪಟ್ಟಣದ 21ನೇ ವಾರ್ಡ್‌ ನಿವಾಸಿಗಳು ರೋಣ-ನರಗುಂದ ರಸ್ತೆ ತಡೆದು ಪ್ರತಿಭಟಿಸಿದರು.

ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪುರಸಭೆ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, 21ನೇ ವಾರ್ಡ್‌ಗೆ ನೀರು ಪೂರೈಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ಗೀತಾ ನವಲಗುಂದ, ರೇಣುಕಾ ಹಾಳಕೇರಿ, ಸಾವಿತ್ರಿ ಸೂಡಿ, ದಾವಲಬೀ ಡಲಾವತ, ಸಾವಿತ್ರಿ ಜಾಧವ, ಸೈನಾಜಬೀ ಮುಲ್ಲಾ, ಬಾಬು ದಳವಾಯಿ, ಪ್ರಭು ಸೂಡಿ, ಸಂಗಮೇಶ ಹಿರೇಮಠ, ಬಸವರಾಜ ಚೊಳಚಗುಡ್ಡ, ಪ್ರಭು ಪಾಟೀಲ, ಬುಡ್ನೇಸಾಬ ಕೊಲ್ಕಾರ, ಮಕ್ತುಮಸಾಬ ಮುಲ್ಲಾ, ಹುಸೇನಸಾಬ ಅರಮನಿ, ಮಕ್ತುಮಸಾಬ ಗೋನಾಳ, ಅಬ್ದುಲ್ ಇದ್ಲಿ ಸೇರಿದಂತೆ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಗದಗ: ಇಲ್ಲಿನ ಎಸ್‌.ಎಂ. ಕೃಷ್ಣಾ ನಗರದ ಸರಕಾರಿ ಪ್ರೌಢ ಶಾಲೆಯ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಗದಗ ಶಹರ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಪೊಲೀಸ್‌ ಇಲಾಖೆ ಕಾರ್ಯಚಟುವಟಿಕೆಗಳ...

  • ಗಜೇಂದ್ರಗಡ: ಕಿತ್ತು ಹೋದ ಡಾಂಬರ, ಅರ್ಧಂಬರ್ಧ ಜೋಡಿಸಿರುವ ಇಂಟರಲಾಕ್‌, ಅರ್ಧಕ್ಕೆ ನಿಂತ ಮುಖ್ಯ ರಸ್ತೆಯ ಕಾಮಗಾರಿಯಿಂದ ಗಜೇಂದ್ರಗಡ ಅಭಿವೃದ್ಧಿಗೆ ಮಂಕು ಕವಿದಿದೆ....

  • ನರೇಗಲ್ಲ: ನರೇಗಲ್ಲ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಕಳೆದ ಆರು ವರ್ಷದಿಂದ ಹುದ್ದೆ ಖಾಲಿ ಇದ್ದು, ಲೈನ್‌ ಮ್ಯಾನ್‌ಗಳೇ ಅಧಿಕಾರಿಗಳ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ...

  • ಪ್ರಹ್ಲಾದಗೌಡ ಗೊಲ್ಲಗೌಡರ ಗದಗ: ನಗರದ ಜಿಲ್ಲಾ ಪೊಲೀಸ್‌ ಕಚೇರಿಗೆ ಪ್ರವೇಶಿಸುತ್ತಿದಂತೆ ಔಷಧಿ ಸಸ್ಯಗಳ ಪರಿಮಳ ಘಮ ಘಮಿಸುತ್ತದೆ. ಅರೇ ಇದೇನಿದು ಎಂದು ಕುತೂಹಲದಿಂದ...

  • ನರೇಗಲ್ಲ: ರೈತ ಸಂಪರ್ಕ ಕೇಂದ್ರದ ಯಂತ್ರೋಪಕರಣ, ಬೀಜ-ಗೊಬ್ಬರ ಸೇರಿದಂತೆ ರೈತರಿಗೆ ಅನುಕೂಲವಾಗುವ ವಸ್ತುಗಳನ್ನು ದಾಸ್ತಾನು ಮಾಡುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ...

ಹೊಸ ಸೇರ್ಪಡೆ