ಕ್ರಿಯಾಶೀಲ ಕುಬೇರಪ್ಪರನ್ನು ಗೆಲ್ಲಿಸಿ


Team Udayavani, Oct 23, 2020, 6:18 PM IST

gadaga-tdy-1

ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಮತಕ್ಷೇತ್ರ ನನ್ನ ರಾಜಕೀಯದ ಮಹತ್ತರ ಮೈಲುಗಲ್ಲಾಗಿದೆ. ನಾಲ್ಕು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ನನಗೆ ಕಾರ್ಯಕರ್ತರೆಲ್ಲರೂ ಸೇರಿ ಮತ್ತೆ ಈ ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಲ್ಲಿ ಪಕ್ಷದ ಅಭ್ಯರ್ಥಿ ಕುಬೇರಪ್ಪನವರಿಗಿಂತ ಹೆಚ್ಚು ಖುಷಿ ಪಡುವ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಪಟ್ಟಣದ ಚನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ| ಆರ್‌.ಎಂ.ಕುಬೇರಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪಕ್ಷ ರಾಜಕಾರಣವನ್ನು ಮೀರಿ ನಿಂತು ಕೆಲಸ

ಮಾಡುವ ಅವಕಾಶ ಈ ಕ್ಷೇತ್ರದಲ್ಲಿದೆ ಮತ್ತು ಅಂತಹ ವ್ಯಕ್ತಿತವ್ವನ್ನು ಕುಬೇರಪ್ಪ ಹೊಂದಿದ್ದಾರೆ. ಪದವೀಧರರ ನೋವು, ನಲಿವುಗಳಿಗೆ ಸ್ಪಂದಿಸುವ ಉತ್ತಮ ಆಡಳಿತಗಾರ ಕುಬೇರಪ್ಪನವರಿಗೆ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು. ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಎರಡು ಬಾರಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಪಡೆದುಕೊಂಡಿದೆ. ಇದೀಗ ಪದವೀಧರ ಮತದಾರರಿಗೆ ಬಿಜೆಪಿ ಬಗ್ಗೆ ಇದ್ದ ನಂಬಿಕೆ ದೂರವಾಗಿದ್ದು, ಪದವೀಧರರಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ. ಈ ಬಾರಿ ಕಾಂಗ್ರೇಸ್‌ ಪಕ್ಷ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಬಿ.ಆರ್‌.ಯಾವಗಲ್‌, ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಮಾತನಾಡಿ, ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯದಲ್ಲಿ ತುಘಲಕ್‌ ದರ್ಬಾರ್‌ ನಂತೆ ಆಡಳಿತ ನಡೆಸುತ್ತಿವೆ. ಕೃಷಿ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸುರ್ಗಿವಾಜ್ಞೆ ಮೂಲಕ ಜಾರಿಗೊಳಿಸಿರುವುದು ಜನ ವಿರೋಧಿಯಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಚುನಾವಣೆಗಳು ಅಸ್ತ್ರವಾಗಿವೆ. ಈ ವೇಳೆ ಮತದಾರರಲ್ಲಿ ತೆರಳಿ ಮತಯಾಚಿಸುವ ಪ್ರಾಮಾಣಿಕ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಸಿದ್ದು ಪಾಟೀಲ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ಪಶ್ಚಿಮ ಪದವೀಧರ ಕ್ಷೇತ್ರದ ಉಸ್ತುವಾರಿ ಆನಂದಸ್ವಾಮಿ ಗಡ್ಡದೇವರಮಠ, ಎಸ್‌.ಪಿ.ಬಳಿಗಾರ, ರಾಜಣ್ಣ ಕುಂಬಿ ಎಂ.ಎಸ್‌.ದೊಡ್ಡಗೌಡ್ರ, ಹುಮಾಯೂನ್‌ ಮಾಗಡಿ, ಸುಜಾತಾ ದೊಡ್ಡಮನಿ, ನೀಲಮ್ಮ ಕೋಣನವರ, ಜಯಕ್ಕ ಕಳ್ಳಿ, ವಿರುಪಾಕ್ಷಪ್ಪ ಪಡಗೇರಿ, ಭಾಗ್ಯಶ್ರೀ ಬಾಬಣ್ಣ, ಸೋಮಣ್ಣ ಬೆಟಗೇರಿ, ವೀರೇಂದ್ರ ಪಾಟೀಲ, ಚನ್ನಪ್ಪ ಜಗಲಿ, ವೀರನಗೌಡ್ರ ನಾಡಗೌಡ್ರ, ರಾಜು ಪಾಟೀಲ, ರಾಮಣ್ಣ ಲಮಾಣಿ(ಶಿಗ್ಲಿ), ಬಸವರಾಜ ಬಾಳೇಶ್ವರಮಠ, ವಿಜಯ ಕರಡಿ, ವಿರೂಪಾಕ್ಷಪ್ಪ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಬಸವರಾಜ ಕಡೆಮನಿ, ಸುರೇಶ ಬೀರಣ್ಣವರ, ಅಮರೇಶ ತೆಂಬದಮನಿ, ಸೇರಿದಂತೆ ಅನೇಕ ಮುಖಂಡರು ನೂರಾರು ಕಾರ್ಯಕರ್ತರು ಹಾಜರಿದ್ದರು.

 

ಟಾಪ್ ನ್ಯೂಸ್

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಒಮಿಕ್ರಾನ್‌ ಆತಂಕ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ಒಮಿಕ್ರಾನ್‌ ಆತಂಕ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ಬೊಮ್ಮಾಯಿ ರಾಜೀನಾಮೆ ಖಚಿತ: ಡಿಕೆಶಿ

ಬೊಮ್ಮಾಯಿ ರಾಜೀನಾಮೆ ಖಚಿತ: ಡಿಕೆಶಿ

ಲೈಫ್ ಸರ್ಟಿಫಿಕೇಟ್‌ಗೆ ಪರ್ಯಾಯ ತಂತ್ರಜ್ಞಾನ; ಜಿತೇಂದ್ರ ಸಿಂಗ್‌

ಲೈಫ್ ಸರ್ಟಿಫಿಕೇಟ್‌ಗೆ ಪರ್ಯಾಯ ತಂತ್ರಜ್ಞಾನ; ಜಿತೇಂದ್ರ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ನಿಯಮ ಮರೆತ ಜನ

ಕೋವಿಡ್‌ ನಿಯಮ ಮರೆತ ಜನ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

19school

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

18old

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

17daliths

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಸರಾಗವಾಗಿ ಸಂಸತ್‌ ಅಧಿವೇಶನ ನಡೆಯಲಿ

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಸರಗೋಡು ರೈಲು ನಿಲ್ದಾಣ

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಸರಗೋಡು ರೈಲು ನಿಲ್ದಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.