ಉದಾಸಿ ಗೆಲುವಿಗಾಗಿ ಅಭಿಮಾನಿಗಳ ದೀಡ್‌ ನಮಸ್ಕಾರ


Team Udayavani, Apr 21, 2019, 3:10 PM IST

gad-1

ಗದಗ: ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವಿಗಾಗಿ ನಗರದ ರಾಚೋಟೇಶ್ವರ ದೇವಸ್ಥಾನದಿಂದ ಜೋಡು ಮಾರುತಿ ದೇವಸ್ಥಾನದ ವರೆಗೆ ದೀಡ್‌ ನಮಸ್ಕಾರ ಹಾಕುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಪಕ್ಷದ ಕಾರ್ಯಕರ್ತರಾದ ಪಂಚಾಕ್ಷರಿ ಅಂಗಡಿ, ಶ್ರೀಕಾಂತ ಹೆಬ್ಬಳ್ಳಿ, ನಾಗಪ್ಪ ದೊಡ್ಡಮನಿ, ಮಾರುತಿ, ಸಿದ್ದು ಸಫಾರೆ, ಚೇತನ ಅಬ್ಬಿಗೇರಿ ದೀಡ್‌ ನಮಸ್ಕಾರ ಹಾಕಿದರು.

ಈ ವೇಳೆ ಪಾಲ್ಗೊಂಡಿದ್ದ ಪಕ್ಷದ ನೂರಾರು ಕಾರ್ಯಕರ್ತರು, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಭಾರತ ಮಾತಾ ಕೀ ಜೈ ಎಂಬ ಘೊಷಣೆ ಕೂಗಿದರು. ಅಲ್ಲದೇ ದೇಶದ ಅಭಿವೃದ್ಧಿ ಮತ್ತು ಸದೃಢ ರಾಷ್ಟ್ರಕ್ಕಾಗಿ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಮತದಾರರಿಗೆ ಮನವರಿಕೆ ಮಾಡಿಕೊಟ್ಟು, ಬಿಜೆಪಿ ಪರ ಮತಯಾಚಿಸಿದರು.

ನಗರಸಭೆ ಮಾಜಿ ಸದಸ್ಯ ಸೋಂತಷ ಮೇಲಗಿರಿ, ಎಂ.ಎಂ. ಹಿರೇಮಠ, ಗಂಗಾಧರ ಮೇಲಗಿರಿ, ಸುರೇಶ ಹೆಬಸೂರ, ಮಲ್ಲು ಚಿಂಚಲಿ, ಗಣೇಶ ಸತ್ಯಪ್ಪನವರ, ಚನ್ನಪ್ಪ ದಾಂಪುರ, ಮಹಿಳಾ ಮೋರ್ಚಾದ ವಿಜಯಲಕ್ಷ್ಮೀ ಮಾನ್ವಿ, ಜ್ಯೋತಿ ಮೇಲಗಿರಿ, ಪಕ್ಷದ ಕಾರ್ಯಕರ್ತರು ಇದ್ದರು.

ಗೋವಿಂದ ಕಾರಜೋಳ ಮತಯಾಚನೆ: ದೇಶದ ಸಂಸ್ಕೃತಿ ಬಗ್ಗೆ ಅರಿವಿಲ್ಲದ ಹಾಗೂ ಗಡಿ ಕಾಯುವ ಯೋಧರ ಮೇಲೆ ನಂಬಿಕೆ ಇಲ್ಲದ ಕಾಂಗ್ರೆಸ್‌ ಪಕ್ಷವನ್ನು ಮತದಾರರು ತಿರಸ್ಕರಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ ಕರೆ ನೀಡಿದರು.

ನಗರದ ವಾರ್ಡ್‌ ನಂ. 4 ಮತ್ತು 16ರಲ್ಲಿ ನಡೆದ ಬಿಜೆಪಿ ಪ್ರತ್ಯೇಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಬಡತನದಿಂದ ಮುಕ್ತಗೊಳಿಸುವುದು ಬಿಜೆಪಿ ಗುರಿಯಾಗಿದೆ. ಮೋದಿ ಸರಕಾರದಿಂದ ಮಾತ್ರ ಎಲ್ಲರಿಗೂ ಸೂರು ದೊರೆಯಲಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಬಿಜೆಪಿ ಮುಖಂಡರಾದ ಮಂಜುನಾಥ ಮುಳಗುಂದ, ಹನುಮಂತಪ್ಪ ಅಳವಂಡಿ, ವೀರೇಶ, ಶ್ರೀನಿವಾಸ ಹುಬ್ಬಳ್ಳಿ, ಅಶೋಕ ಮುಳಗುಂದ, ಶರಣಪ್ಪಾ ಚುರ್ಚಪ್ಪನವರ, ಗಿರೀಶ ಕಾರಬಾರಿ, ರಾಜೇಂದ್ರ ಬೋರ್ಡೆ, ರಾಜೇಶ ಮುಟಗಾರ, ಇರ್ಷಾದ ಮಾನ್ವಿ, ಭಗತಸಿಂಗ ದೊಡ್ಡಮನಿ, ಲಕ್ಷ್ಮಣ ದೊಡಮನಿ, ಮೋಹನ್‌ ಆಲ್ಮೇಲಕರ್‌, ರಾಜು ಕುರಡಗಿ, ಸಂತೋಷ ಮೇಲಗಿರಿ, ಇರ್ಶಾದ್‌ ಮಾನ್ವಿ, ಶಾರದಾ ಹಿರೇಮಠ, ರಾಜೇಶ ಮುತಗಾರ, ಸುರೇಶ ಮುಗದುಮ್‌, ಅಶೋಕ ಕುಡತಿನಿ ಹಾಗೂ ಮಾದಿಗ ಸಮಾಜದ ತಾಯಂದಿರು, ಯುವಕರು ಇದ್ದರು.

ನಿಲ್ ಮೆಣಸಿನಕಾಯಿ ಪ್ರಚಾರ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಮತದಾರರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಬಿಜೆಪಿ ಯುವ ನಾಯಕ ಅನೀಲ ಮೆಣಸಿನಕಾಯಿ ಹೇಳಿದರು.

ಗದಗ ತಾಲೂಕಿನ ಹೊಂಬಳ ಗ್ರಾಮದ ವಿವಿಧ ಪಕ್ಷಗಳ ಯುವಕರನ್ನು ಬಿಜೆಪಿಗೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಅನೇಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಗ್ರಾಮದ ಬಿಜೆಪಿ ಹಿರಿಯರು ಹಾಗೂ ಯುವಕರು ಇದ್ದರು.

ವಾರ್ಡ್‌ ನಂ.14ರಲ್ಲಿ ಬಿಜೆಪಿ ಪ್ರಚಾರ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ನಗರದ 14ನೇ ವಾರ್ಡ್‌ನಲ್ಲಿ ಮನೆ ಮನೆಗೆ ತರೆಳಿ ಮತಯಾಚಿಸಿದರು.

ನಗರಸಭೆ ಮಾಜಿ ಸದಸ್ಯೆ ಜಯಶ್ರೀ ಬೈರವಾಡೆ, ಬಿಜೆಪಿ ಯುವ ನಾಯಕ ರಮೇಶ ಸಜ್ಜಗಾರ, ಅಣ್ಣಿಗೇರಿ, ಅಶೋಕ ದೊಡ್ಡಣ್ಣವರ, ಎಸ್‌.ಬಿ.ಇಟಗಿ, ಬಾಬು ದಹಿಂಡೆ, ಪರಶುರಾಮ ವಡ್ಡರ, ಸರಸ್ವತಿ ರೆವಡಿಯಾಳ, ಸುನೀತಾ ದಹಿಂಡೆ, ಅಕ್ಕಮ್ಮಾ ಪಾಪನಾಳ, ಸಚಿನ್‌ ದಹಿಂಡೆ ಮತ್ತಿತರರು ಇದ್ದರು.

ಬೆಟಗೇರಿಯಲ್ಲಿ ರಾಜುಕುಡರಗಿ ಮತಯಾಚನೆ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಬೆಟಗೇರಿಯ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ ಮತಯಾಚಿಸಿದರು.

ಯುವ ಮುಖಂಡ ರಮೇಶ ಸಜ್ಜಗಾರ ವಾರ್ಡ್‌ನ ಪ್ರಮುಖರಾದ ಪ್ರಕಾಶ ಅಂಗಡಿ, ಬಸಯ್ಯ ಬಣ್ಣದನೂರಮಠ, ಮಲ್ಲು ಕೋಟಿ, ಶಿವಪ್ಪ, ರವಿ ಮುದಗಲ, ರಾಹುಲ ಅರಳಿ, ಪ್ರಬಾಕರ ಉಡುಪಿ, ಸುರೇಶ ಪಾಪನಾಳ, ವಿಠuಲ ದಹಿಂಡೆ, ಜಗ್ಗು ಜನಾದ್ರಿ, ಬಿ.ಎಚ್.ಲದವಾ, ಜಯಶ್ರಿ ಅಣ್ಣಿಗೇರಿ ಇದ್ದರು.

ನಾಗಾವಿ, ಬೆಳದಡಿಯಲ್ಲಿ ಮತಯಾಚನೆ: ಗದಗ ತಾಲೂಕಿನ ನಾಗಾವಿ, ಬೆಳದಡಿ, ಕಳಸಾಪೂರ ಮತ್ತು ತಾಂಡಾದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಕಾರ್ಯಕರ್ತರು ಮತಯಾಚಿಸಿದರು.

ಅನಿಲ್ ಮೆಣಸಿನಕಾಯಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ, ಮೋಹನ ಮಾಳಶೆಟ್ಟಿ, ಕುಮಾರ ಕೋಟಿಗೌಡರ, ರವಿ ದಂಡಿನ, ರಮಶೇ ಸಜ್ಜಗಾರ, ಅನೀಲ ಅಬ್ಬಿಗೇರಿ, ಎಂ.ಎಂ.ಹಿರೇಮಠ, ಪ್ರಶಾಂತ ನಾಯ್ಕರ, ಬೂದಪ್ಪ ಹಳ್ಳಿ, ಭದ್ರೇಶ ಕೂಸಲಾಪೂರ, ಆಶ್ವಿ‌ೕನಿ ಜಗತಾಪಪೂರ, ರಾಜು ಹೊಸಮಠ, ಸುರೇಶ ಹೆಬಸೂರ, ಡಿ.ಬಿ.ಕರೇಗೌಡ್ರ, ಬಾಬು ಯಲಿಗಾರ, ರವಿ ವಗ್ಗನವರ ಇದ್ದರು.

ರವಿ ದಂಡಿನ ಮತಯಾಚನೆ: ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಉದಾಸಿ ಪರವಾಗಿ ಬಿಜೆಪಿ ಯುವ ನಾಯಕ ರವಿ ದಂಡಿನ ಮನೆ ಮನೆಗೆ ತೆರಳಿ ಮತಯಾಚಿಸಿದರು.

ರಮೇಶ ಸಜ್ಜಗಾರ, ಮಾಲೀಪಾಟೀಲ್, ಸಜ್ಜನ, ಮಲ್ಲಪ್ಪಾ ಕುರಿ, ಅರುಣ ಅಣ್ಣಿಗೇರಿ, ಬಸವರಾಜ ಕುರಿ, ರವಿ ವಗ್ಗನವರ, ಮಂಜುನಾಥ ಗಂಗಿಮಡಿ ಇದ್ದರು.

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.