Udayavni Special

ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ಬರೆ

• ಶಿರೋಳ ತೋಂಟದಾರ್ಯ ಐಟಿಐ ಕಾಲೇಜಿಗೆ ಹಾನಿ •ಯಂತ್ರೋಪಕರಣ ದುರಸ್ತಿ ಕಾರ್ಯ ಪ್ರಗತಿ

Team Udayavani, Aug 31, 2019, 11:21 AM IST

gadaga-tdy-2

ನರಗುಂದ: ಮಲಪ್ರಭಾ ಪ್ರವಾಹ ನದಿ ಪಾತ್ರದ ಗ್ರಾಮಗಳನ್ನು ತಲ್ಲಣಗೊಳಿಸಿವೆ. ತಾಲೂಕಿನ ಶಿರೋಳ ಗ್ರಾಮದ ತಾಂತ್ರಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ತಾಪತ್ರಯ ತಂದೊಡ್ಡಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶಿರೋಳ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಕಾಲೇಜಿನ ಸಾಕಷ್ಟು ಯಂತ್ರೋಪಕರಣಗಳು ಜಲಾವೃತದಿಂದ ಜಖಂಗೊಂಡಿದೆ. ಈಗ ಇವುಗಳ ಸುಧಾರಣೆ, ಸ್ವಚ್ಛತಾ ಕಾರ್ಯ ನಡೆದಿದೆ.

ಐಟಿಐ ಕಾಲೇಜು ಸುತ್ತ 6 ಅಡಿಯಷ್ಟು ನೀರು ನಿಂತಿದ್ದರಿಂದ ಕಾಲೇಜಿನ ಎಲ್ಲ ಕೊಠಡಿಗಳಿಗೂ ನೀರು ನುಗ್ಗಿತ್ತು. ಪರಿಣಾಮ ಕಾಲೇಜಿನ ಮೆಕ್ಯಾನಿಕ್‌ ಡೀಸೆಲ್ ಟ್ರೇಡ್‌ನ‌ ಜನರೇಟರ್‌, ಎಂಜಿನ್‌, ಕಾರ್‌, ಕಾರ್‌ ವಾಶರ್‌ ತುಕ್ಕು ಹಿಡಿದಿವೆ.

ಫಿಟ್ಟರ್‌ ವಿಭಾಗದ ವೆಲ್ಡಿಂಗ್‌, ಡ್ರಿಲ್ಲಿಂಗ್‌ ಬೆಲೆಬಾಳುವ ಯಂತ್ರೋಪಕರಣ, ಸ್ವೀಯಿಂಗ್‌ ಟೆಕ್ನಾಲಜಿ ವಿಭಾಗದ ಹೊಲಿಗೆ ಯಂತ್ರಗಳು ಪ್ರವಾಹ ಹೊಡೆತಕ್ಕೆ ಜಖಂಗೊಂಡಿವೆ. ಸಹಜವಾಗಿ ವಿದ್ಯಾರ್ಥಿಗಳ ತಾಂತ್ರಿಕ ವ್ಯಾಸಂಗಕ್ಕೆ ಧಕ್ಕೆಯಾಗಿದ್ದು, ಕ್ರಮೇಣ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆಸಲಾಗಿದೆ. ಸುಮಾರು 2.5 ಲಕ್ಷ ರೂ. ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.

ಕಾಲೇಜಿನ ಗ್ರಂಥಾಲಯಕ್ಕೂ ನೀರು ನುಗ್ಗಿದ್ದರಿಂದ ತಾಂತ್ರಿಕ ತರಬೇತಿಗೆ ಸಂಬಂಧಿಸಿದ ಬೆಲೆಬಾಳುವ ಪುಸ್ತಕಗಳು ಹಾನಿಯಾಗಿದ್ದು, ತಲಾ 200 ರೂ.ಗೂ ಹೆಚ್ಚು ಮೌಲ್ಯದ 200ಕ್ಕೂ ಹೆಚ್ಚು ಪುಸ್ತಕಗಳು ಹಾಳಾಗಿದೆ. ಅದೃಷ್ಟವಶಾತ್‌ ಪ್ರವಾಹ ಮುನ್ನೆಚ್ಚರಿಕೆಯಿಂದ ಕಾಲೇಜು ಸಿಬ್ಬಂದಿ ಕಚೇರಿ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣ ಪತ್ರಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಮೇಲಂತಸ್ತಿನ ಕಟ್ಟಡಗಳಿಗೆ ಸ್ಥಳಾಂತರಿಸಿದ್ದರಿಂದ ರಕ್ಷಣೆಯಾಗಿವೆ.

ತೋಂಟದಾರ್ಯ ಮಠದ ಕಟ್ಟಡಗಳಿಗೂ ಪ್ರವಾಹ ನೀರಿನಿಂದ ಧಕ್ಕೆಯಾಗಿದ್ದು, ಮಠದ ಒಳಾಂಗಣದ‌ ಆಂಗ್ಲ ಮಾಧ್ಯಮ ಶಾಲೆ ಹಳೆಯ ಕಟ್ಟಡ ಸಂಪೂರ್ಣ ಜಲಾವೃತವಾಗಿದ್ದರಿಂದ ಕಟ್ಟಡದ ಗೋಡೆಗಳಿಗೆ ಸಾಕಷ್ಟು ಧಕ್ಕೆಯಾಗಿದೆ. 15 ದಿನಗಳ ಕಾಲ ಸ್ಥಗಿತಗೊಂಡಿದ್ದ ಐಟಿಐ ವಿದ್ಯಾರ್ಥಿಗಳ ತಾಂತ್ರಿಕ ವ್ಯಾಸಂಗ ಇದೀಗ ಸಾಂಗವಾಗಿ ಮುಂದುವರೆದಿದೆ.

 

•ಸಿದ್ಧಲಿಂಗಯ್ಯ ಮಣ್ಣೂರಮಠ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

raana

ನವದಾಂಪತ್ಯಕ್ಕೆ ಕಾಲಿಟ್ಟ ರಾಣಾ-ಮಿಹಿಕಾ: ವಿವಾಹ ಸಂಭ್ರಮದ ಲೇಟೆಸ್ಟ್ ಫೋಟೋಗಳು ಇಲ್ಲಿವೆ…!

ಮಣ್ಣಿನ ಪದರ ತೆಳುವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ

ಮಣ್ಣಿನ ಪದರ ತೆಳುವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ

ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

High-Court-of-Karnataka

ಪ್ರವಾಸಿ ವೀಸಾ ಪಡೆದು ಧರ್ಮಪ್ರಚಾರ: 9 ಮಂದಿ ತಬ್ಲಿಘಿ ವಿದೇಶಿಯರಿಗೆ ನಿರ್ಬಂಧ

ಸಂಘಟನೆ ಕಾರ್ಯಕ್ಕೆ ಆದ್ಯತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಲಹೆ

ಸಂಘಟನೆ ಕಾರ್ಯಕ್ಕೆ ಆದ್ಯತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಲಹೆ

ಹೈ ಸಮರ ತಂತ್ರಕ್ಕೆ ಭಾರತೀಯ ಸೇನೆ ಸಜ್ಜು

ಹೈ ಸಮರ ತಂತ್ರಕ್ಕೆ ಭಾರತೀಯ ಸೇನೆ ಸಜ್ಜು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಕೇರ್‌ನಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ

ಕೋವಿಡ್‌ ಕೇರ್‌ನಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ

ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳ ಭೇಟಿ

ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳ ಭೇಟಿ

ಮುಸ್ಲಿಂ ಕಲಾವಿದನಿಂದ ಶ್ರೀರಾಮ ಜಪ

ಮುಸ್ಲಿಂ ಕಲಾವಿದನಿಂದ ಶ್ರೀರಾಮ ಜಪ

ಮತ್ತೆ 99 ಜನರಿಗೆ ಸೋಂಕು ಪತ್ತೆ

ಮತ್ತೆ 99 ಜನರಿಗೆ ಸೋಂಕು ಪತ್ತೆ

ಕೋವಿಡ್ ಭೀತಿ ನಡುವೆ ರಕ್ಷಾ  ಬಂಧನದ ಸಂಭ್ರಮ

ಕೋವಿಡ್ ಭೀತಿ ನಡುವೆ ರಕ್ಷಾ ಬಂಧನದ ಸಂಭ್ರಮ

MUST WATCH

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavaniಹೊಸ ಸೇರ್ಪಡೆ

raana

ನವದಾಂಪತ್ಯಕ್ಕೆ ಕಾಲಿಟ್ಟ ರಾಣಾ-ಮಿಹಿಕಾ: ವಿವಾಹ ಸಂಭ್ರಮದ ಲೇಟೆಸ್ಟ್ ಫೋಟೋಗಳು ಇಲ್ಲಿವೆ…!

ಮಣ್ಣಿನ ಪದರ ತೆಳುವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ

ಮಣ್ಣಿನ ಪದರ ತೆಳುವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ

ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

High-Court-of-Karnataka

ಪ್ರವಾಸಿ ವೀಸಾ ಪಡೆದು ಧರ್ಮಪ್ರಚಾರ: 9 ಮಂದಿ ತಬ್ಲಿಘಿ ವಿದೇಶಿಯರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.