ಬೂದಿಹಾಳ ನವಗ್ರಾಮಕ್ಕೂ ಬಂತು ಪ್ರವಾಹ!

•ಮಲಪ್ರಭೆಯ ಕರಾಳ ಛಾಯೆ•ತಟದ ಜನರಲ್ಲಿ ಹೆಚ್ಚುತ್ತಿದೆ ಆತಂಕ

Team Udayavani, Aug 9, 2019, 12:03 PM IST

ನರಗುಂದ: ಬೂದಿಹಾಳ ಸಂತ್ರಸ್ತರು ನವಗ್ರಾಮದಿಂದ ಕೊಣ್ಣೂರ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿದ್ದಾರೆ.

ನರಗುಂದ: ಮಲಪ್ರಭಾ ನದಿ ಪ್ರವಾಹ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪ್ರಭಾವ ಬೀರಿದ್ದು, ತಾಲೂಕಿನ ಬೂದಿಹಾಳ ಗ್ರಾಮ ಸ್ಥಳಾಂತರ ಮಾಡಲಾಗಿದ್ದ ನವಗ್ರಾಮಕ್ಕೂ ಆಗಮಿಸಿದೆ. ಪ್ರವಾಹ ನೀರು ಆವರಿಸಿದ್ದರಿಂದ ನವಗ್ರಾಮದಲ್ಲಿದ್ದ ಸಂತ್ರಸ್ತರನ್ನು ಮತ್ತೂಂದು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

2007, 2009ರಲ್ಲಿ ಮಲಪ್ರಭಾ ನದಿ ಪ್ರವಾಹ ಪರಿಸ್ಥಿತಿಗೆ ಹಲವಾರು ಬಾರಿ ನಡುಗಡ್ಡೆಯಾಗಿದ್ದ ಬೂದಿಹಾಳ ಗ್ರಾಮವನ್ನು ನವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು. ಗ್ರಾಮದಿಂದ ಸುಮಾರು 2 ಕಿಮೀ ದೂರದಲ್ಲಿ ಶಿರೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ನಿವೇಶನದಲ್ಲಿ ಸುಮಾರು 400ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲಾಗಿತ್ತು. ಕೆಲವು ಗ್ರಾಮಸ್ಥರು ಸ್ಥಳಾಂತರವಾಗಿದ್ದರೆ ಬಹುತೇಕ ಜನರು ಹಳೆ ಗ್ರಾಮದಲ್ಲೇ ಇದ್ದರು. ಪ್ರವಾಹ ಮುನ್ಸೂಚನೆಯಿಂದ ಬುಧವಾರವೇ ಗ್ರಾಮದ‌ ಜನರನ್ನು ನವಗ್ರಾಮಕ್ಕೆ ಸ್ಥಳಾಂತರಗೊಳಿಸಿದ್ದರು.

ಮಕ್ಕಳು ಮರಿ ಹಾಗೂ ಜಾನುವಾರುಗಳೊಂದಿಗೆ ಸಾಮಾನು ಸರಂಜಾಮು ಹೊತ್ತುಕೊಂಡು ನವಗ್ರಾಮದಲ್ಲಿ ಬೀಡು ಬಿಟ್ಟಿದ್ದ ಬೂದಿಹಾಳ ಸಂತ್ರಸ್ತರು ಸುರಿವ ಮಳೆ, ಬೀಸುವ ಛಳಿಯಲ್ಲೇ ನವಗ್ರಾಮದಲ್ಲಿ ಜಾಗ ಪಡೆದಿದ್ದರು. ಆದರೆ ಇಲ್ಲೂ ಪ್ರವಾಹ ಬಂದಿದೆ. ಗುರುವಾರ ಬೆಳಗ್ಗೆ ಉಕ್ಕಿ ಹರಿದ ಮಲಪ್ರಭಾ ನದಿ ನೀರು ಶಿರೋಳ ಮುಖ್ಯರಸ್ತೆ ದಾಟಿಕೊಂಡು ನವಗ್ರಾಮ ಪ್ರವೇಶಿಸಿದೆ. ತೀವ್ರ ಕಂಗಾಲಾದ ಸಂತ್ರಸ್ತರನ್ನು ಟ್ರ್ಯಾಕ್ಟರ್‌ಗಳಲ್ಲಿ ಕೊಣ್ಣೂರ ಎಪಿಎಂಸಿ ಪ್ರಾಂಗಣಕ್ಕೆ ಕರೆತರಲಾಗಿದೆ. ಸುರಕ್ಷಿತ ಸ್ಥಳದಲ್ಲಿ ನಿರ್ಮಿಸಿದ ನವಗ್ರಾಮಕ್ಕೂ ಪ್ರವಾಹ ಕರಾಳ ಬಾಹು ಹಸ್ತ ಚಾಚಿದ್ದರಿಂದ ನದಿ ಪಾತ್ರದಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವುದಕ್ಕೆ ನಿದರ್ಶನವಾಗಿದೆ.

2007, 2009ರಲ್ಲಿ ಮಲಪ್ರಭಾ ನದಿ ಪ್ರವಾಹ ಪರಿಸ್ಥಿತಿಗೆ ಹಲವಾರು ಬಾರಿ ನಡುಗಡ್ಡೆಯಾಗಿದ್ದ ಬೂದಿಹಾಳ ಗ್ರಾಮವನ್ನು ನವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಬೆಣ್ಣಿಹಳ್ಳ ಸಮೀಪದ ತಾಲೂಕಿನ ಬನಹಟ್ಟಿ ಗ್ರಾಮಕ್ಕೂ ಪ್ರವಾಹ ಭೀತಿ ಆವರಿಸಿದೆ. ಗುರುವಾರ ಮಧ್ಯಾಹ್ನ ವೇಳೆಗೆ ಗ್ರಾಮದ ರುದ್ರಸ್ವಾಮಿ ಮಠದವರೆಗೂ ಪ್ರವಾಹ ಆವರಿಸಿದೆ ಎನ್ನಲಾಗಿದೆ. ಅಲ್ಲದೇ ಹದಲಿ ಗ್ರಾಮಕ್ಕೂ ಪ್ರವಾಹ ಕರಾಳ ಛಾಯೆ ಬೀರುತ್ತಿದೆ ಎಂದು ತಿಳಿದುಬಂದಿದೆ.

ಬೆಳ್ಳೇರಿ ಗ್ರಾಮದ ಸಂತ್ರಸ್ತರನ್ನು ಭೈರನಹಟ್ಟಿ ಸರಕಾರಿ ಶಾಲೆಗೆ, vಕುರ್ಲಗೇರಿ ಸಂತ್ರಸ್ತರನ್ನು ನರಗುಂದ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಲಖಮಾಪುರ, ಬೆಳ್ಳೇರಿ, ವಾಸನ ಗ್ರಾಮಗಳೂ ಪ್ರವಾಹಕ್ಕೆ ತತ್ತರಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಉಡುಪಿ: ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರ ಪದಗ್ರಹಣ ಸಮಾರಂಭ ಫೆ. 24ರ ಸಂಜೆ 4 ಗಂಟೆಗೆ ಹೊಟೇಲ್‌ ಕಿದಿಯೂರಿನ ಶೇಷಶಯನ ಸಭಾಭವನದಲ್ಲಿ...

  • ಕಡಬ: ರಾಜ್ಯದಲ್ಲಿ ಘೋಷಣೆಯಾಗಿರುವ ಎಲ್ಲ 50 ನೂತನ ತಾಲೂಕುಗಳು ಅನುದಾನದ ಕೊರತೆಯಿಂದ ಕಾರ್ಯಾರಂಭ ಮಾಡಿಲ್ಲ. ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕಿನ...

  • ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ...

  • ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ "ಸುದಿನ' ತಂಡವು ರಿಯಾಲಿಟಿ ಚೆಕ್‌ ನಡೆಸಿದೆ....

  • ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು...