Gadag; ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಬಿತ್ತು ಧರ್ಮದೇಟು!
Team Udayavani, Aug 6, 2024, 5:39 PM IST
ಗದಗ: ಆರು ಮಂದಿ ವಿದ್ಯಾರ್ಥಿಗಳ ಮಕ್ಕಳ ಕೂದಲು ಕಟ್ ಮಾಡಿದ್ದ ಕಂಪೂಟರ್ ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ನಗರದ ಬೆಟಗೇರಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬಿನೋಯ್ ಎಂಬ ಶಿಕ್ಷಕ ಸ್ಕೂಲ್ ಮಕ್ಕಳ ಹೇರ್ ಕಟ್ ಮಾಡುವ ಮೂಲಕ ಉದ್ಧಟತನ ಮೆರೆದಿದ್ದ. ಕೂದಲು ಕಟ್ ಮಾಡುವ ವೇಳೆ 7ನೇ ತರಗತಿ ಆದಿತ್ಯ ಎಂಬ ವಿದ್ಯಾರ್ಥಿ ಹಣೆಗೆ ಕತ್ತರಿಯಿಂದ ಗಾಯವಾಗಿದೆ. ಕೂದಲು ಕಟ್ ಮಾಡಬೇಡಿ ಎಂದು ಬಾಲಕ ಗೋಗರೆದು ಒದ್ದಾಡಿದರೂ ಬಿಡದೆ ತುಂಡರಿಸಿದ್ದ. ಈ ವೇಳೆ ಹಣೆಗೆ ಗಾಯವಾಗಿದೆ. ವಿದ್ಯಾರ್ಥಿಗೆ ದೃಷ್ಟಿ ಕಡಿಮೆ ಇದೆ ನಂಜಾದರೆ ಏನು ಮಾಡುವುದು? ಏನಾದ್ರೂ ಆದರೆ ಹೇಗೆ ಎಂದು ಪಾಲಕರು ಕಿರಿಕ್ ಮಾಡಿದ್ದರು.
ನಾವು ಕಳೆದ 15 ದಿನಗಳ ಹಿಂದೆಯಷ್ಟೇ ಕಟಿಂಗ್ ಮಾಡಿಸಿದ್ದೇವೆ. ಕೂದಲು ಹೆಚ್ಚು ಬಂದಿರಲಿಲ್ಲ. ಆದರೂ ಶಿಕ್ಷಕ ಕಟ್ ಮಾಡುವ ಅವಶ್ಯಕತೆ ಏನಿತ್ತು? ಪಾಲಕರಿಗೆ ಹೇಳಬೇಕಿತ್ತು. ಏಕಾಏಕಿ ಕೂದಲು ಕಟ್ ಮಾಡಿರುವುದು ಯಾವ ಎಷ್ಟರ ಮಟ್ಟಿಗೆ ಸರಿ ಅಂತ ತಗಾದೆ ತೆಗೆದಿದ್ದರು. ಸ್ಥಳಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಸ್ಕೂಲ್ ಆವರಣದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ನಂತರ ಸ್ಥಳಕ್ಕೆ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್ ಬುರಡಿ ಆಗಮಿಸಿದರು.
ಮೊದಲು ಶಿಕ್ಷಕನಾದವರು ಚೆನ್ನಾಗಿರಬೇಕು. ಶಿಕ್ಷಕನಾದವನು ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡಿದ್ದಿ, ಮಕ್ಕಳಿಗೆ ಕಟಿಂಗ್ ಮಾಡಿಸಿಕೊಂಡು ಬಾ ಎನ್ನುವುದು ಯಾವ ನ್ಯಾಯ? ಮೊದಲು ನೀನು ಸರಿಯಾಗಿರು ಎಂದು ಕೂಡಿದ ಜನರು ಬಿಇಒ ಸಮ್ಮುಖದಲ್ಲೇ ಶಿಕ್ಷಕನಿಗೆ ಧರ್ಮದೇಟು ನೀಡಿದರು.
ಬಿನೋಯ್ ವಿರುದ್ದ ಕೇಸ್ ದಾಖಲಾಗಬೇಕು, ವೃತ್ತಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ನಂತರ ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅವರು ವರದಿ ಪಡೆದುಕೊಂಡರು. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಶಿಕ್ಷಕ ಬಿನೋಯ್ ನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡರು. ಈ ವೇಳೆ ಅನೇಕ ಪಾಲಕರು, ಸಂಘಟಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಸಾ-ಬಂಡೂರಿ: ಮಹದಾಯಿ ಜಾರಿಗೆ ಕರವೇ ಪಾದಯಾತ್ರೆ ಆರಂಭ
Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ
Gadag; ಮಾನವ ಸರಪಳಿ ವೇಳೆ ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ
ಜನರಿಗೆ ಪ್ರಜಾಪ್ರಭುತ್ವ ಅರಿವು ಮೂಡಿಸಿ, ಬಲ ತುಂಬುವ ಕಾರ್ಯಕ್ರಮ ಪ್ರಜಾಪ್ರಭುತ್ವ ದಿನಾಚರಣೆ
Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.