ಬೇಸಿಗೆಯಲ್ಲಿ ಜಾನುವಾರುಗಳ ದಾಹ ತೀರಿಸಿ


Team Udayavani, Mar 13, 2021, 4:09 PM IST

ಬೇಸಿಗೆಯಲ್ಲಿ ಜಾನುವಾರುಗಳ ದಾಹ ತೀರಿಸಿ

ರೋಣ: ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಆಡಳಿತಚುಕ್ಕಾಣಿ ಹಿಡಿದಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂಪಿಡಿಒಗಳು ತಮ್ಮ ವ್ಯಾಪ್ತಿಯ ಹಳ್ಳಿಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕಿದೆ.

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಒಟ್ಟು 34000 ಎಮ್ಮಿ, 28000 ಆಕಳು(ಹಸು), 80000 ಕುರಿ, 60000 ಆಡು ಹೀಗೆ ಒಟ್ಟು 2 ಲಕ್ಷಕ್ಕೂ ಅಧಿ ಕ ಜಾನುವಾರುಗಳಿವೆ.ಇವು ಮನೆಯಲ್ಲಿದ್ದಾಗ ಮಾಲಿಕರು ನೀರಿನಲ್ಲಿ ಕುಡಿಸುತ್ತಾರೆ. ಆದರೆ ಮೇಯಲು  ಹೊಲಗಳಿಗೆ ತೆರಳಿದಾಗ ಅಲ್ಲಿ ಯಾವುದೇ ದೊಡ್ಡ ಪ್ರಮಾಣದ ಕೆರೆ-ಕಟ್ಟೆ-ತೊಟ್ಟಿಗಳಿಲ್ಲದಕಾರಣ ದನಕರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಕುರಿಗಾಹಿಗಳು, ದನ ಕಾಯುವವರ ಪಾಡು ಅಷ್ಟಿಷ್ಟಲ್ಲ. ಈ ನಿಟ್ಟಿನಲ್ಲಿ ಗ್ರಾಪಂ ಆಡಳಿತ, ಜನಪ್ರತಿನಿಧಿ ಗಳು ಹೊಂಡ-ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ.

ಕೆರೆ-ಚೆಕ್‌ ಡ್ಯಾಂ ನಿರ್ಮಿಸಿ: ನರೇಗಾ ಯೋಜನೆಯಡಿ ಜಾನುವಾರುಗಳಿಗೆನೀರಿನ ತೊಟ್ಟಿ ನಿರ್ಮಿಸಿ ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಜನತೆಯ ಆಶಯವಾಗಿದೆ. ಹೆಚ್ಚು ಹೆಚ್ಚು ಕೆರೆ,ಹಳ್ಳಗಳ ಬಳಿ ಚೆಕ್‌ಡ್ಯಾಂ ನಿರ್ಮಿಸುವುದರಿಂದ ದನಕರುಗಳು, ಕುರಿ-ಮೇಕೆಗಳ ನೀರಿನ ಸಮಸ್ಯೆ ಬಗೆಹರಿಸಬಹುದು. ಜತೆಗೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಬಹುದು.

ಬ್ಯಾಸಗಿ ಶುರು ಆಗೇತಿ. ಕುಡಿಯುವ ನೀರಿನ  ಸಮಸ್ಯೆ ಆಗೈತಿ. ಇದಕ್ಕ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹೆಚ್ಚು ಕಾಳಜಿ ವಹಿಸಿ ಹಳ್ಳಿಗಳಲ್ಲಿಜನರು ಹಾಗೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗುಡ್ಡಕ್ಕ ಬೆಂಕಿ ಹತ್ತಿದಾಗಬಾವಿ ತೋಡುವುದಕ್ಕಿಂತ ಮೊದಲ ತಯಾರಿ ಮಾಡಿಕೊಂಡಿದ್ದರ ಬಹಳ ಚೋಲೋ ಆಗ್ತದೆ ನೋಡ್ರಿ. –ಹನಮಂತಪ್ಪ ಕುರಿ, ಕುರಿಗಾಹಿ

ನೀರಿನ ಮೂಲ ಇರುವಲ್ಲಿ ತಕ್ಷಣವೇ ನೀರಿನ ತೊಟ್ಟಿಗಳನ್ನು ನಿರ್ಮಿಸಲು ರೋಣ-ಗಜೇಂದ್ರಗಡತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅಲದೇ ಈಗಾಗಲೇ ಕೆಲವು ಗ್ರಾಪಂಗಳಲ್ಲಿನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಿದ್ದಾರೆ. ಉಳಿದಗ್ರಾಪಂಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. – ಸಂತೋಷ ಪಾಟೀಲ, ತಾಪಂ ಇಒ

 

-ಯಚ್ಚರಗೌಡ ಗೋವಿಂದಗೌಡ

ಟಾಪ್ ನ್ಯೂಸ್

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ದೆಹಲಿ: 12 ವರ್ಷದ ಅಪ್ರಾಪ್ತನ ಮೇಲೆ ನಾಲ್ವರಿಂದ ಲೈಂಗಿಕ ದೌರ್ಜನ್ಯ,ಹಲ್ಲೆ; ಬಾಲಕ ಗಂಭೀರ

ದೆಹಲಿ: ನಾಲ್ವರಿಂದ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ; 12 ರ ಬಾಲಕ ಗಂಭೀರ

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಪೊಣ್ಣಿಯಿನ್‌ ಸೆಲ್ವನ್‌ 1′-ಬುಕಿಂಗ್‌ ಆರಂಭವಾದ ದಿನವೇ 1.5 ಕೋಟಿ ರೂ. ಗಳಿಕೆ

ಪೊಣ್ಣಿಯಿನ್‌ ಸೆಲ್ವನ್‌ 1′-ಬುಕ್ಕಿಂಗ್ ಆರಂಭವಾದ ದಿನವೇ 1.5 ಕೋಟಿ ರೂ. ಗಳಿಕೆ

1–sdfd-dsd

ನಾನು 2024 ರಲ್ಲಿ ಸ್ಪರ್ಧಿಸಲಿದ್ದೇನೆ: ಹೇಮಾ ಮಾಲಿನಿ ಹೇಳಿಕೆಗೆ ರಾಖಿ ಪ್ರತಿಕ್ರಿಯೆ

thumbnail uv d navarathri special

ನವರಾತ್ರಿ: ನವದುರ್ಗೆಯರ ಮಹತ್ವ ಮತ್ತು ವಿಶೇಷತೆ ಏನು..?

tdy-15

60 ವರ್ಷದ ನಿರ್ಮಾಪಕ ‘ಮಗಳೊಂದಿಗೂ ಮಲಗುತ್ತಿದ್ದೆ’ಎಂದ…ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

ತಂಬಾಕು ಮುಕ್ತ ವಾತಾವರಣ ನಿರ್ಮಿಸಿ

16

ಕಪ್ಪತಗುಡ್ಡದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ

9

ಶರನ್ನವರಾತ್ರಿ-ದೇವಿ ಆರಾಧನೆಗೆ ಕ್ಷಣಗಣನೆ

22

ರಾಜಕಾಲುವೆ ಉದ್ಯಾನ ಕಾಮಗಾರಿ ಸ್ಥಗಿತಕ್ಕೆ ಸೂಚನೆ

25

24 ಗಂಟೆ ವಿದ್ಯುತ್‌ ನೀಡದಿದ್ದರೆ ಉಗ್ರ ಹೋರಾಟ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-dsadasw

ಶಿಕಾರಿಪುರ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಹೋದರರು

1rwerwer

ಮಂಗಳೂರು: ಕಳ್ಳಸಾಗಣೆ ವಿಫಲ; 15.36 ಲಕ್ಷ ರೂ.ಮೌಲ್ಯದ ಚಿನ್ನ ವಶ

ದೆಹಲಿ: 12 ವರ್ಷದ ಅಪ್ರಾಪ್ತನ ಮೇಲೆ ನಾಲ್ವರಿಂದ ಲೈಂಗಿಕ ದೌರ್ಜನ್ಯ,ಹಲ್ಲೆ; ಬಾಲಕ ಗಂಭೀರ

ದೆಹಲಿ: ನಾಲ್ವರಿಂದ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ; 12 ರ ಬಾಲಕ ಗಂಭೀರ

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.