ಮಠ ಮಾನ್ಯಗಳಿಗೆ ಸರ್ಕಾರ ಬೆನ್ನೆಲುಬು: ಸಿಎಂ

ಭಕ್ತಿಯ ಬೀಜ ಬಿತ್ತಿ ಹೋಗಿದ್ದು, ನಾಡಿನಲ್ಲಿ ಭಕ್ತಿ-ಶ್ರದ್ಧೆ ಎಂಬುದು ಹೆಮ್ಮರವಾಗಿ ಬೆಳೆದಿದೆ.

Team Udayavani, Nov 10, 2021, 6:01 PM IST

ಮಠ ಮಾನ್ಯಗಳಿಗೆ ಸರ್ಕಾರ ಬೆನ್ನೆಲುಬು: ಸಿಎಂ

ಗದಗ: ಸ್ವಾತಂತ್ರ್ಯ ಪೂರ್ವ ಭೀಕರ ಬರಗಾಲದ ಮಧ್ಯೆಯೂ ರಾಜ್ಯದ ಮಠ ಮಾನ್ಯಗಳು ಅನ್ನದಾನ ಮಾಡಿ ಜನಸಾಮಾನ್ಯರನ್ನು ಸಂಕಷ್ಟದಿಂದ ಪಾರು ಮಾಡಿವೆ. ಸ್ವಾತಂತ್ರ್ಯದ ನಂತರ ಶಿಕ್ಷಣದ ಮೂಲಕ ಜ್ಞಾನಜ್ಯೋತಿ ಬೆಳಗಿಸಿವೆ.

ಶ್ರದ್ಧೆ-ಭಕ್ತಿಯಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಠ ಮಾನ್ಯಗಳ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗಜೇಂದ್ರಗಡ ತಾಲೂಕಿನ ಹಾಲಕೆರೆಯಲ್ಲಿ ಮಂಗಳವಾರ ನಡೆದ ಡಾ|ಅಭಿನವ ಅನ್ನದಾನ ಮಹಾಸ್ವಾಮಿಗಳ ಗುರುವಂದನೆ ಕಾರಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಗಳು ಮಾಡುವ ಮುನ್ನವೇ ಮಠಗಳು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಿದ್ದವು. ಜನಸಾಮಾನ್ಯರಿಗೆ ಶಿಕ್ಷಣ ಕಲ್ಪಿಸುವ ಮೂಲಕ ಶೈಕ್ಷಣಿಕ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿವೆ. ಸ್ತ್ರೀಯರಿಗೆ ಸಮಾನತೆ ಬೋಧಿಸುತ್ತ ವಿದ್ಯಾರ್ಥಿನಿ ಯರಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ಮೊದಲು ಆರಂಭಿಸಿದ್ದು ಮಠ-ಮಾನ್ಯಗಳೇ ಹೊರತು ಹೊಸ ವ್ಯವಸ್ಥೆಯಲ್ಲ ಎಂದರು.

ಭಕ್ತಿಯ ಚಳವಳಿಗಳು ನಡೆದಿದ್ದರೆ ಅದು ಭಾರತದಲ್ಲಿ ಮಾತ್ರ. ಈ ನಾಡಿನಲ್ಲಿ ಬಸವಣ್ಣನಿಂದ ಹಿಡಿದು, ಶರಣರು, ಕನಕದಾಸರು, ಶಿಶುವಿನಾಳ ಶರೀಫರು, ಸೂμ ಸಂತರು ಸಾಲು ಸಾಲು ಆಧ್ಯಾತ್ಮಿಕ ಗುರುಗಳು ಭಕ್ತಿಯ ಬೀಜ ಬಿತ್ತಿ ಹೋಗಿದ್ದು, ನಾಡಿನಲ್ಲಿ ಭಕ್ತಿ-ಶ್ರದ್ಧೆ ಎಂಬುದು ಹೆಮ್ಮರವಾಗಿ ಬೆಳೆದಿದೆ.

ದೇಶದ ಇತರೆ ರಾಜ್ಯಗಳಿಗಿಂತ ನಮ್ಮಲ್ಲಿ ಸಾಮಾಜಿಕ ಕಳಕಳಿ ಹೊಂದಿರುವ ಮಠಗಳ ಸಂಖ್ಯೆ ಬಹು ದೊಡ್ಡದು. ನಿಪ್ಪಾಣಿಯಿಂದ-ಕೊಳ್ಳೆಗಾಲ, ಬೀದರ್‌ ನಿಂದ ಚಾಮರಾಜನಗರವರೆಗೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಸ್ಥಾಪಿತ ಸರ್ಕಾರಗಳು ಜನರನ್ನು ಮುಟ್ಟುವ ಮೊದಲೇ ಮಠಗಳು ಸಾಮಾಜಿಕ, ಶೈಕ್ಷಣಿಕ ಸೇವೆಗಳ ಮೂಲಕ ಜನ ಸಾಮಾನ್ಯರನ್ನು ತಲುಪಿವೆ ಎಂಬುದನ್ನು ಮನಗಾಣಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಹಲವು ಸಮು ದಾಯಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ಗಳಲ್ಲಿ ಮಠಗಳು ಸ್ಥಾಪನೆಗೊಂಡು ಜನರನ್ನು ಜಾಗೃತಿಗೊಳಿಸುತ್ತಿವೆ.ಜತೆ ಜತೆಗೆ ಶಿಕ್ಷಣ-ಅನ್ನದಾನಕ್ಕೆ ಮುಂದಾಗುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿವೆ. ಸರ್ಕಾರ ಮಾಡಬೇಕಾದ ಕೆಲಸ ಗಳನ್ನು ಮಠಗಳು ಮಾಡುತ್ತಿವೆ. ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ಶಿಕ್ಷಣ ನೀಡುತ್ತಿವೆ. ಸ್ವಾಮೀಜಿಗಳು ಭಿಕ್ಷೆ ಎತ್ತಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಶೈಕ್ಷಣಿಕ ಸೇವೆಯಲ್ಲಿ ತೊಡಗಿರುವ ಮಠಗಳನ್ನು ಗುರುತಿಸಿ ಅವರ ಸೇವೆಗಳನ್ನು ಮತ್ತಷ್ಟು ಬಲಗೊಳಿ ಸಲು, ಅವುಗಳ ಬೇಕು-ಬೇಡಗಳನ್ನು
ಈಡೇರಿಸಲು ಮಠಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದರಿಂದ ಸಮಾಜಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ನೀನು ನಂಬರ್‌ ಒನ್‌ ಆಗಿ ಗೆಲ್ತಿಯಾ ಎಂದಿದ್ರು ಪೂಜ್ಯರು
ಹಾಲಕೆರೆ ಮಠದ ಮೇಲೆ ಭಕ್ತ ಸಮೂಹ ಇಟ್ಟಿರುವ ಭಕ್ತಿಯಲ್ಲಿ ಆಗಾಧ ಶಕ್ತಿ ಅಡಗಿದೆ. ಅದೇ ಶಕ್ತಿ ನಮ್ಮನ್ನು ಇಲ್ಲಿಯವರೆಗೆ ಕರೆ ತಂದಿದೆ. ನಾನು ಮೊದಲ ಬಾರಿ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿದ್ದೆ. ಆಗ ಪೂಜ್ಯರು ನೀನು ನಂಬರ್‌ ಒನ್‌ ಆಗಿ ಗೆಲ್ತಿಯಾ ಅಂತ ಆಶೀರ್ವಾದ ಮಾಡಿದ್ದರು. ಅದರಂತೆ ನಾನು ಗೆಲ್ಲುತ್ತಲೇ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಮಠ ಹಾಗೂ ಪೂಜ್ಯರೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.

ತಲಾ ಆದಾಯ: ರಾಜ್ಯ ನಂ.1 ಆಗ್ಬೇಕು
ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣದಿಂದ ಹೊರಗುಳಿ ಯುವ ರೈತರ ಮಕ್ಕಳಿಗೆ ಶಿಷ್ಯವೇತನ ಪ್ರಕಟಿಸಲಾಗಿದೆ.ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಸರ್ಕಾರ 1 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಮಕ್ಕಳನ್ನು ಕೃಷಿ ಕೆಲಸ, ಕಾರ್ಯಗಳಿಗೆ ಸೀಮಿತಗೊಳಿಸದೆ ಉನ್ನತ ಶಿಕ್ಷಣ ಕಲ್ಪಿಸಬೇಕು. ಮಕ್ಕಳು ಮುಖ್ಯವಾಹಿನಿಗೆ ಬಂದಾಗ ಕುಟುಂಬ ಹಾಗೂ ರಾಜ್ಯದ ಅಭಿವೃದ್ಧಿಯ ಕನಸು ಸಾಕಾರಗೊಳ್ಳುತ್ತದೆ. ದೇಶದಲ್ಲಿ ತಲಾ ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಅದು ಶೇ.35 ರಿಂದ 38 ಜನರಿಗೆ ಸೀಮಿತವಾಗಿದೆ. ಇನ್ನುಳಿದವರ ತಲಾ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ತಲಾ ಆದಾಯದಲ್ಲಿ ರಾಜ್ಯವನ್ನು ನಂ.1ಸ್ಥಾನಕ್ಕೆ ತಲುಪಿಸುವ ಸಂಕಲ್ಪ ಮಾಡಿದ್ದಾಗಿ ಸಿಎಂ ತಿಳಿಸಿದರು.

ಹಾಲಕೆರೆಯ ಡಾ|ಅಭಿನವ ಅನ್ನದಾನ ಮಹಾ ಸ್ವಾಮಿಗಳಿಗೆ ರಾಜ್ಯ ಸರ್ಕಾರದಿಂದ “ಬಸವ ಪುರಸ್ಕಾರ’ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಶ್ರೀಮಠದ ಶಾಲೆ, ವಸತಿ ನಿಲಯಕ್ಕಾಗಿ ಸ್ಥಳೀಯ ಶಾಸಕ ಕಳಕಪ್ಪ ಬಂಡಿ ಕೋರಿದ್ದಕ್ಕಿಂತ ಹೆಚ್ಚಿನ ಅನುದಾನ ಕಲ್ಪಿಸಲಾಗುತ್ತದೆ. ಪೂಜ್ಯರ ಮಾರ್ಗದರ್ಶನದಲ್ಲಿ ಭಕ್ತಿಯ ಮಾರ್ಗದಲ್ಲಿ ಮುನ್ನಡೆಯಬೇಕಿದೆ.
ಬಸವರಾಜ
ಬೊಮ್ಮಾಯಿ, ಮುಖ್ಯಮಂತ್ರಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.