- Friday 06 Dec 2019
ಸಂಚಾರಿ ನಿಯಮ ಪಾಲಿಸದಿದ್ದರೆ ದಂಡ ಖಚಿತ
ವಿಮೆ ಮಾಡಿಸದೇ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಕನಿಷ್ಟ 1000 ರೂ. ದಂಡ
Team Udayavani, Jul 12, 2019, 2:36 PM IST
ಗದಗ: ನಗರದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದ ಬೈಕ್‌ಗಳನ್ನು ಸಂಚಾರಿ ಪೊಲೀಸರು ಠಾಣೆಗೆ ಸಾಗಿಸಿದರು.
ಗದಗ: ಸಂಚಾರಿ ನಿಯಮಗಳನ್ನು ಪಾಲಿಸಿ, ಇಲ್ಲವೇ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದರೆ, ವಾಹನದ ವಿಮೆ ಮಾಡಿಸದೇ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ ಕನಿಷ್ಠ 1000 ರೂ. ದಂಡ ತೆರಬೇಕಾದೀತು ಜೋಕೆ!
ಇದು ಗದಗ- ಬೆಟಗೇರಿ ಅವಳಿ ನಗರದಲ್ಲಿ ಸಂಚಾರಿ ಪೊಲೀಸರು ಧ್ವನಿವರ್ದಕದ ಮೂಲಕ ಪರಿಷ್ಕೃತ ದಂಡದ ಮೊತ್ತವನ್ನು ಪ್ರಚಾರ ಪಡಿಸಿದ ಪರಿ ಇದು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ಸಂಚಾರಿ ನಿಯಮಗಳ ಉಲ್ಲಂಘನೆಗೆ ದುಪ್ಪಟ್ಟು ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಗುರುವಾರ ಮೈಕ್ ಮೂಲಕ ಡಂಗೂರ ಸಾರಲಾಯಿತು.
ಇದೇ ವೇಳ ಅವಳಿ ನಗರದ ಪ್ರಮುಖ ವೃತ್ತಗಳ ನೋ ಪಾರ್ಕಿಂಗ್ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗಿದ್ದ ಬೈಕ್‌ಗಳನ್ನು ಪೊಲೀಸ್ ಠಾಣೆಗೆ ಸಾಗಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ, ಬಿಸಿ ಮುಟ್ಟಿಸಲಾಯಿತು.
ಪ್ರೊಬೇಷನರಿ ಡಿವೈಎಸ್ಪಿ ನವೀನ ಕುಮಾರ ನೇತೃತ್ವದಲ್ಲಿ ಸಂಚಾರಿ ಠಾಣೆ ಪಿಎಸ್‌ಐ ಕಮಲಾ ದೊಡ್ಡಮನಿ ಹಾಗೂ ಸಿಬ್ಬಂದಿ ನಗರದ ಮಹಾತ್ಮಗಾಂಧಿ ವೃತ್ತ, ರೋಟರಿ ಸರ್ಕಲ್, ಹಳೇ ಡಿಸಿ ಕಚೇರಿ ವೃತ್ತ, ಬೆಟಗೇರಿಯ ತೆಂಗಿನಕಾಯಿ ಬಜಾರ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುಂತೆ ಹಾಗೂ ಬೇಕಾಬಿಟ್ಟಿಯಾಗಿ ನಿಲ್ಲಿಸಿದ್ದ ಚಕ್ರ ವಾಹನಗಳನ್ನು ಟೈಗರ್ ಲಾರಿಯಲ್ಲಿ ಠಾಣೆಗೆ ಸಾಗಿಸಲಾಯಿತು.
ಇದೇ ವೇಳೆ ತಮ್ಮ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದನ್ನು ಗಮನಿಸಿದ ಕೆಲವರು ತಮ್ಮ ಬೈಕ್‌ಗಳನ್ನು ಬಿಡುವಂತೆ ಕೋರಿದರು. ಮತ್ತೂಮ್ಮೆ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸಿದರೆ, 1 ಸಾವಿರ ರೂ. ದಂಡ ತೆರಬೇಕಾಗುತ್ತದೆ ಎಂದು ಪೊಲೀಸರು ಖಡಕ್ಕಾಗಿ ಎಚ್ಚರಿಸಿದರು.
ಧ್ವನಿ ವರ್ಧಕ ಮೂಲಕ ಪ್ರಚಾರ: ಅವಳಿ ನಗರದ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಖಾಸಗಿ ವಾಹನಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಪ್ರಚಾರ ಮಾಡಿದರು. ಬೈಕ್ ಸವಾರರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೈಕ್‌ಗಳಿಗೆ ವಿಮಾ ಮಾಡಿಸಬೇಕು. ಬೈಕ್ ಪರವಾನಗಿ ಪಡೆದುಕೊಂಡು ಬೈಕ್ ಓಡಿಸಬೇಕು. ಸಂಚಾರ ನಿಮಯ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಕುರಿತು ಪ್ರಕ್ರಿಯಿಸಿರುವ ಟ್ರಾಫಿಕ್ಸ್ ಪಿಎಸ್‌ಐ ಕಮಲಾ ದೊಡ್ಡಮನಿ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸಂಚಾರಿ ನಿಯಗಳ ಉಲ್ಲಂಘನೆಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಮೈಕ್ ಮೂಲಕ ಜನಜಾಗೃತಿ ನಡೆಸಲಾಗಿದೆ. ಇದೇ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಲಾದ 25ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಈ ವಿಭಾಗದಿಂದ ಇನ್ನಷ್ಟು
-
ಗಜೇಂದ್ರಗಡ: ಸ್ವಂತ ಕಟ್ಟಡ, ವಿದ್ಯುತ್ ಸೌಲಭ್ಯವಿಲ್ಲ, ಪುಸ್ತಕಗಳನ್ನಿಡಲು ರ್ಯಾಕ್ಗಳಿಲ್ಲ, ಕಟ್ಟಡ ಸುತ್ತಲೂ ಅಶುಚಿತ್ವದಿಂದಾಗಿ ಆಟಕುಂಟು ಲೆಕ್ಕಕ್ಕಿಲ ಎಂಬಂತಾಗಿದೆ...
-
ಗದಗ: ನೆಲದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ರಾಜ್ಯದ ಎಲ್ಲ ಡಿಎಚ್ಒಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದೇನೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು...
-
ಲಕ್ಷ್ಮೇಶ್ವರ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಹರಿದು ಬರುವ ಕುಡಿಯುವ ನೀರಿನ ಸರಬರಾಜಿನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಕಳೆದ 8-10 ದಿನಗಳಿಂದ ಜನತೆಗೆ ಕುಡಿಯುವ...
-
ಗಜೇಂದ್ರಗಡ: ಮಹಿಳೆಯರ ಜ್ಞಾನದೀವಿಗೆಯಾಗಬೇಕಿದ್ದ ಮಹಿಳಾ ಗ್ರಂಥಾಲಯ ಅವ್ಯವಸ್ಥೆಯ ಆಗರವಾಗಿದೆ. ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿದ್ದು, ದಶಕಗಳಿಂದ ಹಿಡಿದ ಗ್ರಹಣ...
-
ರೋಣ: ಗ್ರಾಮದಲ್ಲಿನ ದಲಿತರ ಕಾಲೋನಿಯ ಸಿಸಿ ರಸ್ತೆ ಹಾಗೂ ವಿವಿಧ ಭಾಗದ ರಸ್ತೆಗಳು ಹಾಳಾಗಿದ್ದು, ಸಮರ್ಪಕ ರಸ್ತೆ ನಿರ್ಮಿಸುವಲ್ಲಿ ನಿರ್ಲಕ್ಷ ತೋರುತ್ತಿರುವ ಅಧಿಕಾರಿಗಳ...
ಹೊಸ ಸೇರ್ಪಡೆ
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...
-
ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...
-
ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್ ಪಾವತಿ ಗಳನ್ನು ಕಾರ್ಡ್ ಅಥವಾ ಆ್ಯಪ್ಗ್ಳ ಮೂಲಕ ಮಾಡುತ್ತಿದ್ದಾರೆ....
-
ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...
-
ದರ್ಶನ್ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...