Udayavni Special

ಕೋವಿಡ್ ವಿರುದ್ಧ ಸಮರ ಸಾರಲು “ಕಿಯಾಸ್ಕ್’


Team Udayavani, May 9, 2021, 4:14 PM IST

kiuyiyu

ವರದಿ : ವೀರೇಂದ್ರ ನಾಗಲದಿನ್ನಿ

ಗದಗ: ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಜನರಿಗೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನ ಗಳಿಸಿರುವ ಹುಲಕೋಟಿ ಗ್ರಾಮದಲ್ಲಿ ಜನರಿಗೆ ಔಷಧಯುಕ್ತ ಹಬೆ ಸೌಲಭ್ಯ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ವಿತರಣೆ ಮೂಲಕ ಕೊರೊನಾ ವಿರುದ್ಧ ಸಮರ ಸಾರಲಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಆಯುಷ್‌ ಇಲಾಖೆ ಇಂತಹ ಪ್ರಯತ್ನ ನಡೆಸಿದೆ. ಕೊರೊನಾ ಹರಡದಂತೆ ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಮುನ್ನೆಚ್ಚರಿಕೆಯ ಪಾಠ ಬೋಧಿಸಲಾಗುತ್ತಿದೆ. ಜನರ ಆಕರ್ಷಣೆಗಾಗಿ ವಿಶಿಷ್ಟವಾದ ಕಿಯಾಸ್ಕ್(ಚೌಕಾಕಾರದ ಟೆಂಟ್‌) ಸ್ಥಾಪಿಸಿ, ಕೋವಿಡ್‌ ಸುರಕ್ಷತಾ ಕ್ರಮಗಳ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮುಗಿ ಬಿದ್ದ ಜನ: ಕಿಯಾಸ್ಕ್ಗೆ ಭೇಟಿ ನೀಡುವವರನ್ನು ಮೊದಲಿಗೆ ಥರ್ಮಲ್‌ ಸ್ಕಾ Â ನರ್‌ ನಿಂದ ದೇಹದ ಉಷ್ಣಾಂಶ, ಪಲ್ಸ್‌ ಆಕ್ಸಿಮೀಟರ್‌ ಮೂಲಕ ಉಸಿರಾಟ ಪ್ರಮಾಣ ಪರೀಕ್ಷಿಸಲಾಗುತ್ತದೆ. ಬಳಿಕ ಶುಂಠಿ, ಹವೀಜ, ಜೀರಿಗೆ, ಲವಂಗ, ಯಾಲಕ್ಕಿ, ದಾಲಚಿನ್ನಿ, ಅರಿಷಿಣ ಪುಡಿ ಮಿಶ್ರಿತ ಬಿಸಿ ಬಿಸಿ ಕಷಾಯ ನೀಡಲಾಗುತ್ತದೆ. ಔಷ ಧಯುಕ್ತ ಬಿಸಿ ಹಬೆ ತೆಗೆದುಕೊಳ್ಳಲು ಮಾಡಿರುವ ವಿಶೇಷ ವ್ಯವಸ್ಥೆ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಗ್ಯಾಸ್‌ ಸ್ಟೌವ್‌ ಮೇಲೆ ಕುಕ್ಕರ್‌ಗೆ ಪೈಪ್‌ಲೈನ್‌ ಮೂಲಕ ನೇರವಾಗಿ ಬಿಸಿಯಾದ ಹಬೆ ಪಡೆಯಬಹುದು. ವಿಶೇಷವಾಗಿ ಯೂನಾನಿ ಪದ್ಧತಿ ಆರ್ಕ್‌ ಅಜೀಬ್‌ ದ್ರಾವಣ ಮಿಶ್ರಿತ ಹಬೆಯಿಂದ ಕೆಲವೇ ಕ್ಷಣದಲ್ಲಿ ಜನರು ಬೆವರುತ್ತಾರೆ. ಇದರಿಂದ ಅನೇಕರಿಗೆ ಉಸಿರಾಟ ಸಂಬಂಧಿ ತ ಸಮಸ್ಯೆಗಳು ಸ್ಥಳದಲ್ಲೇ ನಿವಾರಣೆಯಾಗಿವೆ. ನೆಗಡಿ, ಗಂಟಲು ಕಟ್ಟುವಿಕೆ, ಪಿತ್ತ ಮತ್ತಿತರೆ ಸಮಸ್ಯೆಗಳೂ ಪರಿಹಾರವಾಗಿದ್ದರಿಂದ ಪ್ರತಿನಿತ್ಯ ಸುಮಾರು 80 ರಿಂದ 120 ಜನರು ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಕಿಯಾಸ್ಕ್ ಮೇಲ್ವಿಚಾರಕ ಆಯುಷ್‌ ವೈದ್ಯ ಡಾ|ಕಮಲಾಕರ್‌ ಅರಳೆ.

ಬಿಸಿ ಹಬೆ ತೆಗೆದುಕೊಂಡ ನಂತರ ಪ್ರತಿಯೊಬ್ಬರಿಗೂ 5 ದಿನಕ್ಕೆ ಹೋಮಿಯೋಪಥಿ ಔಷ ಧ ಆರ್ಸೆನಿಕ್‌ ಅಲ್ಬಂ-30, ಆರ್ಯುವೇದ ಔಷ ಧ ಅಶ್ವಗಂಧವಟಿ, ಯುನಾನಿ ಪದ್ಧತಿಯ ಆರ್ಕ ಅಜೀಬ ದ್ರಾವಣವನ್ನು ಉಚಿತವಾಗಿ ನೀಡಲಾಗುತ್ತದೆ. ಇದೇ ವೇಳೆ ಗ್ರಾಮಸ್ಥರಿಗೆ ಕೊರೊನಾ ಬಗ್ಗೆ ತಿಳಿವಳಿಕೆ ನೀಡಿ, ತಪ್ಪು ಗ್ರಹಿಕೆಗಳನ್ನು ನಿವಾರಿಸಿ ಸೋಂಕು ತಡೆಗೆ ಸರಕಾರದ ಕೋವಿಡ್‌-19 ಮಾರ್ಗಸೂಚಿ ಪಾಲಿಸುವಂತೆ ವೈದ್ಯರು ಮನವರಿಕೆ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸಿದ ವಿಶೇಷ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ಮಾತು ಕೇಳಿ ಬರುತ್ತಿವೆ.

ಟಾಪ್ ನ್ಯೂಸ್

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

9654

ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shyamayana’s lake urged to develop

ಶ್ಯಾಮಯ್ಯನ ಕೆರೆ ಅಭಿವೃದ್ಧಿಪಡಿಸಲು ಆಗ್ರಹ

Warriors who violate the Corona rule

ಕೊರೊನಾ ನಿಯಮ ಉಲ್ಲಂಸಿದ ವಾರಿಯರ್ಸ್

572210blh1b

ಕೋವಿಡ್ ಕುಲುಮೆಯಲ್ಲಿ ಕುದಿಯುತ್ತಿದೆ ಕಮ್ಮಾರರ ಜೀವನ

11bgv1

ಮಾರುಕಟ್ಟೆ ಸ್ಥಳಾಂತರ ಅವೈಜ್ಞಾನಿಕ

11 bgk-4b

ಎಪ್ಪತ್ತೈದು ದಿನಗಳಿಂದ ಬೆಳಗುತ್ತಿದೆ ನಂದಾದೀಪ  

MUST WATCH

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

udayavani youtube

Article 370 ಕುರಿತು ಪಾಕಿಸ್ತಾನಿ ಪ್ರಜೆಗೆ ದಿಗ್ವಿಜಯ ಸಿಂಗ್ ಹೇಳಿದ ಮಾತು ಲೀಕ್

ಹೊಸ ಸೇರ್ಪಡೆ

Shyamayana’s lake urged to develop

ಶ್ಯಾಮಯ್ಯನ ಕೆರೆ ಅಭಿವೃದ್ಧಿಪಡಿಸಲು ಆಗ್ರಹ

Warriors who violate the Corona rule

ಕೊರೊನಾ ನಿಯಮ ಉಲ್ಲಂಸಿದ ವಾರಿಯರ್ಸ್

572210blh1b

ಕೋವಿಡ್ ಕುಲುಮೆಯಲ್ಲಿ ಕುದಿಯುತ್ತಿದೆ ಕಮ್ಮಾರರ ಜೀವನ

11bgv1

ಮಾರುಕಟ್ಟೆ ಸ್ಥಳಾಂತರ ಅವೈಜ್ಞಾನಿಕ

11 bgk-4b

ಎಪ್ಪತ್ತೈದು ದಿನಗಳಿಂದ ಬೆಳಗುತ್ತಿದೆ ನಂದಾದೀಪ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.